*ದಾವಣಗೆರೆ:* ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಎರಡು ಸಲ ಮೋಸ ಆಗಿದೆ. ಈ ಬಾರಿ ಯಾವ ಮೋದಿ, ವಾಜಪೇಯಿ ಅಲೆ ನಡೆಯೋದಿಲ್ಲ ಈ ಸಲ ಗೆದ್ದೆ ಗೆಲ್ತಿವಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಎಸ್.ಎಸ್ ಮಲ್ಲಿಕಾರ್ಜುನ ಅವರು ತಿಳಿಸಿದರು. ನಗರದ ಎಂಸಿಸಿ ಬಿ ಬ್ಲಾಕಿನಲ್ಲಿನ ಐಎಂಎ ಭವನದಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾವಣೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದರು. ದಾವಣಗೆರೆ ಎಐಸಿಸಿ ಪ್ರಧಾನ ಕಾರ್ಯದರ್ಯದರ್ಶಿ ಪ್ರಿಯಾಂಕಗಾಂಧಿ ಹಾಗೂ ಹೊನ್ನಾಳಿ, ಹರಿಹರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮತಯಾಚನೆ ಮಾಡಿದ್ದಾರೆ. ರಾಜ್ಯದಲ್ಲಿ ಯಾವುದೇ ಮೋದಿ ಅಲೆ ಬಿಜೆಪಿ ಅಲೆ ಇಲ್ಲ. ಓನ್ಲಿ ಕೊಟ್ಟ ಭರವಸೆ ಈಡೇರಿಸಿರವ ಗ್ಯಾರೆಂಟಿ ಹಾಗೂ ಅಭಿವೃದ್ಧಿ ಅಲೆ ಇದೆ ಎಂದರು. ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಮೋಸ ಆಗಿದೆ.

ಆ ಮೋಸವು ಕಾರ್ಯಕರ್ತರಲ್ಲಿ ನೋವುಂಟು ಮಾಡಿದೆ. ಈಗ ಉತ್ತಮ ವ್ಯವಸ್ಥೆ ನಮ್ಮ ಪಕ್ಷಕ್ಕೆ ಇದೆ. ಪ್ರತಿ ಕಾರ್ಯಕರ್ತರು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ಈ ಬಾರಿ ಜಿಲ್ಲೆಯ ಎಂಟು ಕ್ಷೇತ್ರದಲ್ಲಿಯು ಕಾಂಗ್ರೆಸ್ ಪಕ್ಷ ಲೀಡ್ ಪಡೆಯಲಿದೆ. ಹೆಚ್ಚು ಅಂತರದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಮಾತನಾಡಿ ಪ್ರಜಾಪ್ರಭುತ್ವದಲ್ಲಿ ಮತದಾನವರು ಎಲ್ಲರ ಹಕ್ಕಾಗಿದ್ದು ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಲಿದೆ ಎಂದು. ಅಭ್ಯರ್ಥಿಗೆ ಅವರ ಪತಿಯು ಈ ಚಿಹ್ನೆಗೆ ಒತ್ತು ಎಂಬ ವಿಡಿಯೋ ವೈರಲ್ ಆಗಿದೆ.

ತಮ್ಮ ಚಿಹ್ನೆಯನ್ನು ಗೊತ್ತಿರದವನ್ನು ಜನೆ ಹೇಗೆ ಆಯ್ಕೆ ಮಾಡ್ತರೋ ಗೊತ್ತಿಲ್ಲ. ಅಲ್ಲದೆ ಒಬ್ಬರು ಮತದಾನ ಮಾಡುವಾಗ ಇನ್ನೊಬ್ಬರು ಹೋಗಿ ಚಿಹ್ನೆ ತೋರಿಸುವುದು ಕಾನೂನು ಬಾಹಿರ ಎಂದು ಸಚಿವರು ದೂರಿದರು.

ಈ ವೇಳೆ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ, ಎಸ್.ಎಸ್ ಮಲ್ಲಿಕಾರ್ಜುನ ಅವರ ಪುತ್ರ ಸಮರ್ಥ ಮಲ್ಲಿಕಾರ್ಜುನ, ಪುತ್ರಿ ಶ್ರೇಷ್ಠಾ ಶಾಮನೂರು ಮಲ್ಲಿಕಾರ್ಜುನ ಮತ ಚಲಾವಣೆ ಮಾಡಿದರು.

Share.
Leave A Reply

Exit mobile version