ಭದ್ರಾವತಿ/ದಾವಣಗೆರೆ/ಚಿತ್ರದುರ್ಗ/ಹರಪನಹಳ್ಳಿ
ಉಕ್ಕಿನ ನಗರಿ ಭದ್ರಾವತಿ ಹಾಗೂ ದಾವಣಗೆರೆಯಲ್ಲಿ ಶುಕ್ರವಾರವೂ ಮಳೆ ಮುಂದುವರೆಯಿತು. ಈ ಕಾರಣದಿಂದಸೂರ್ಯನ ಶಾಖಕ್ಕೆ ನಲುಗಿದ ಜನರಿಗೆ ಸಂಜೆ ಮೇಲೆ ಎಸಿಯಲ್ಲಿದ್ದ ಅನುಭವವಾಯಿತು.
ಎರಡು ದಿನದಿಂದ ಮಳೆ ಇಳೆಯನ್ನು ತಂಪಾಗಿಸಿದೆ. ಇದರಿಂದ ಕಾದು ಕೆಂಡಂದತ್ತಿದ್ದ ಧರೆ ಎರಡೇ ನಿಮಿಷದಲ್ಲಿ ತನ್ನ ಒಡಲಿಗೆ ನೀರನ್ನು ಇಡಿದಿಟ್ಟುಕೊಂಡಿತ್ತು.
ಸಂಜೆ ನಾಲ್ಕುಗಂಟೆಗೆ ಶುರುವಾದ ಮಳೆ ಒಂದು ಗಂಟೆಗಳ ಕಾಲ ತನ್ನ ಪ್ರತಾಪ ತೋರಿಸಿತು. ಆಗಾಗ ಮೋಡದಲ್ಲಿ ಆಗುತ್ತಿದ್ದ ಆರ್ಭಟ ಮನೆಯಲ್ಲಿದ್ದವರ ಹೃದಯ ಝಲ್ ಎನ್ನಿಸುತ್ತಿತ್ತು. ಒಣಗಿದ ಎಲೆಗಳಲ್ಲಿ ಮಳೆ ನಿಂತ ಮೇಲೆ ನೀರ ಹನಿಗಳು ಥಟಕ್….ಥಟಕ್ ಅಂತ ಉದುರಿ ಮಳೆ ಬಂದಿದೆ ಎಂಬ ಅನುಭವ ನೀಡಿತು. ಆಗಾಗ ಮೋಡದಲ್ಲಿ ಆಗುತ್ತಿದ್ದ ಆರ್ಭಟದ ನಡುವೆ ಸಿಡಿಲು ಕಾಣಿಸುತ್ತಿತ್ತು. ಶಾಲಾ, ಕಾಲೇಜು ಇಲ್ಲದ ಕಾರಣ, ಛತ್ರಿ ಹಿಡಿದುದೌಡಾಯಿಸುತ್ತಿದ್ದ ತಾಯಿ, ರೈನ್ ಕೋಟ್ ಹಾಕದ ಮಕ್ಕಳು ಕಂಡು ಬರಲಿಲ್ಲ. ಬದಲಾಗಿ ಹರಿಯುವ ನೀರಿನಲ್ಲಿ ಅಜ್ಜಿ ಮನೆಗೆ ಬಂದ ಮಕ್ಕಳು ಸಣ್ಣ, ಸಣ್ಣ ದೋಣಿ ಬಿಟ್ಟು ಆಟವಾಡಿದರು. ಮಳೆ ಬಂದ ಕಾರಣ ಒಂದು ಗಂಟೆ ಕರ್ಪ್ಯೂ ಏರಲಾಗಿತ್ತು. ಈ ನಡುವೆ ಚಳಿಗೆ ಹಲವರು ಮಿರ್ಚಿ ಮಂಡಕ್ಕಿಯನ್ನು ಚಹಾ ಜತೆ ಸವಿದರು.
ದಾವಣಗೆರೆ : ದಾವಣಗೆರೆಯಲ್ಲಿ ಶುಕ್ರವಾರಸಂಜೆ ಜಿಲ್ಲೆಯ ಕೆಲ ಪ್ರದೇಶದಲ್ಲಿ ಏಕಾಏಕಿ ಗುಡುಗು, ಸಿಡಿಲು, ಬಿರು ಗಾಳಿ ಸಹಿತ ಭಾರಿ ಮಳೆಯಾಗಿದೆ. ಜಿಲ್ಲೆಯ ಆಲೂರು, ಪುಟಗನಾಳ್, ಮಗಾನಹಳ್ಳಿ, ಕಡ್ಲೆಬಾಳು, ಕೊಂಡಜ್ಜಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭಾರಿ ಮಳೆಯಾಗಿದೆ.
ಬಿಸಿಲಿನ ತಾಪಮಾನದಿಂದ ಕಂಗೆಟ್ಟಿದ್ದ ದೇವ ನಗರಿ ಜನಕ್ಕೆ ಸಂಜೆಯ ಮಳೆ ತುಸು ನಿಟ್ಟುಸಿರು ಬಿಡುವಂತೆ ಮಾಡಿತು. ಸಂಜೆ 5 ಗಂಟೆಯಿಂದಲೇ ದಟ್ಟ ಮೋಡ ಆವರಿಸಿತ್ತು. ಜೋರು ಗಾಳಿ, ಗುಡುಗು, ಸಿಡಿಲು ಸಹಿತ ಉತ್ತಮ ಮಳೆಯಾದ ಕಾರಣ ಸಿಮೆಂಟ್ ರೋಡ್ ನಿಂದ ಬರುತ್ತಿದ್ದ ಉಷ್ಣಾಂಶ ಕಡಿಮೆಯಾಯಿತು.
ಬಿಸಿಲಿನ ತಾಪಮಾನದಿಂದ ಬಸವಳಿದು ಹೋಗಿದ್ದ ಜಿಲ್ಲೆಯ ಜನರು ಮಳೆ ಆಗಮನವನ್ನೇ ಎದುರು ನೋಡುತ್ತಿದ್ದರು. ಬಿಸಿ ಗಾಳಿಯಿಂದ ಸುಡುತ್ತಿದ್ದ ವಾತಾವರಣ ತುಸು ತಂಪಾಗಿಸಿತು.
ಮಳೆ ಬಂದ ಕಾರಣ ಮುಂಗಾರಿನ ಕೃಷಿಕಾರ್ಯಕ್ಕೆ ಸಹಾಯವಾಯಿತು. ಅಲ್ಲದೇ ಅಡಕೆಗೆ ಸಹಾಯವಾಯಿತು.ಇನ್ನೂ ಎರಡು ದಿನ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ 27ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ. 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
.ದಾವಣಗೆರೆ : ಸಿಡಿಲು ಬಡಿದು 25 ಮೇಕೆ ಸಾವು
ದಾವಣಗೆರೆ: ತಾಲ್ಲೂಕಿನ ಆನಗೋಡು ಸಮೀಪದ ಈಚಘಟ್ಟ ಗ್ರಾಮದಲ್ಲಿ ಸಿಡಿಲು ಬಡಿದು 16 ಹೆಣ್ಣು ಮೇಕೆ, 9 ಗಂಡು ಮೇಕೆ ಮೃತಪಟ್ಟಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ದಾವಣಗೆರೆ ತಾಲ್ಲೂಕಿನ ಸುತ್ತಮುತ್ತ ಗುರುವಾರ ಸಂಜೆ ಭಾರೀ ಗುಡುಗು, ಮಿಂಚು, ಗಾಳಿ ಸಹಿತ ಮಳೆ ಸುರಿಯಿತು. ಈಚಘಟ್ಟ ಗ್ರಾಮದ ರೈತ ಪಾಪ್ಯಾನಾಯ್ಕ ಮತ್ತು ರೇವತಿಬಾಯಿ ಅವರಿಗೆ ಸೇರಿದ ತಮ್ಮ ಮೇಕೆಗಳನ್ನು ಮೇಯಿಸಲು ಜಮೀನಿಗೆ ತೆರಳಿದ್ದರು. ಮಳೆ ಆರಂಭವಾದಾಗ ಮೇಕೆಗಳು ಮರದ ಕೆಳಗೆ ಬಂದು ನಿಂತಿವೆ. ಈ ವೇಳೆ ಸಿಡಿಲು ಬಡಿದು 16 ಹೆಣ್ಣು ಮೇಕೆ ಮತ್ತು 9 ಗಂಡು ಮೇಕೆ ಮೃತಪಟ್ಟಿವೆ.
ಅಂದಾಜು 5 ಲಕ್ಷ ನಷ್ಟ ಸಂಭವಿಸಿದ್ದು, ಪಾಪ್ಯಾನಾಯ್ಕ ಅವರು ಉಳಿದ ಮೇಕೆಗಳನ್ನು ಹೊಡೆದುಕೊಂಡು ಬರಲು ಸಿಡಿಲು ಬಡಿದ ಸ್ಥಳದಿಂದ ದೂರ ಹೋಗಿದ್ದರಿಂದ ಪಾಪ್ಯಾನಾಯ್ಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಈ ವೇಳೆ ಕಂದಾಯ ಅಧಿಕಾರಿಗಳು, ಪೊಲೀಸರು ಪರಿಶೀಲನೆ ನಡೆಸಿದರು.
.ಹರಪನಹಳ್ಳಿಯಲ್ಲಿ ಸಿಡಿಲಿಗೆ ಹಸು ಸಾವು, ಧರೆಗುರುಳಿದ ಮರಗಳು.
ಹರಪನಹಳ್ಳಿ,: ಹರಪನಹಳ್ಳಿ ಪಟ್ಟಣ ಸೇರಿದಂತೆ ವಿವಿಧೆಡೆ ಮದ್ಯಾಹ್ನ ಗುಡುಗು, ಮಿಂಚಿನಿಂದ ಕೂಡಿದ ಮಳೆಯಾಯಿತು.ತಾಲೂಕಿನ ಕೊಮಾರನಹಳ್ಳಿ ಗ್ರಾಮದಲ್ಲಿ ಚಂದ್ರಪ್ಪ ಎಂಬುವವರಿಗೆ ಸೇರಿದ ಹಸು ಸಿಡಿಲಿಗೆ ಬಲಿಯಾಗಿದೆ.
ಮಾಡ್ಲಗೇರಿ ತಾಂಡದಲ್ಲಿ ಮೋತಿನಾಯ್ಕ ಹಾಗೂ ಕಲಿಭೀಮನಾಯ್ಕ ರವರ ಮನೆ ಮೇಲ್ಚಾವಣೆ ಗಾಳಿಗೆ ಹಾರಿ ಹೋಗಿವೆ,ಕೋಡಿಹಳ್ಳಿ ಸಮೀಪ ವಿದ್ಯುತ್ ಕಂಬ ಉರುಳಿದೆ, ಬಾಗಳಿ, ಶೃಂಗಾರತೋಟ,ಚಿಕ್ಕಹಳ್ಳಿ, ಕಾಯಕದಹಳ್ಳಿ, ಕೋಡಿಹಳ್ಳಿ, ಮುಂತಾದ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ, ಯಲ್ಲಾಪುರ ಗ್ರಾಮದ ರಸ್ತೆ ಮದ್ಯೆ ದೊಡ್ಡದಾದ ಮರ ಉರುಳಿ ಸಂಚಾರಕ್ಕೆ ಸ್ವಲ್ಪ ಹೊತ್ತು ಅಡಚಣೆ ಉಂಟಾಗಿತ್ತು.
ಪಟ್ಟಣದ ತಾಯಮ್ಮನ ಹುಣಸಿಮರ, ಗ್ರಂಥಾಲಯ ಕಚೇರಿ ಬಳಿ, ತೆಗ್ಗಿನಮಠದ ಹತ್ತಿರ ರಸ್ತೆ ತುಂಬೆಲ್ಲಾ ನೀರು ಸಂಗ್ರಹವಾಗಿ ಸಾರ್ವಜನಿಕರಿಗೆ, ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ತಾಲೂಕು ಪಂಚಾಯ್ತಿ ಆವರಣದಲ್ಲಿ ಎರಡು ಮರಗಳು ಧರೆಗೆ ಉರುಳಿವೆ.ಪಟ್ಟಣದ ವಾಲ್ಮೀಕಿ ನಗರ,ಹಾಲಸ್ವಾಮಿ ಮಠದ ವೃತ್ತದ ಬಳಿ ಬೇವಿನ ಮರ ಉರುಳಿ ಬಿದ್ದಿದೆ.ತಾಯಮ್ಮನ ಹುಣಸೇಮರದ ಬಳಿ ಅವೈಜ್ಞಾನಿಕ ಸಿ ಡಿ ಮಾಡಿರುವುದರಿಂದ ರಸ್ತೆಯಲ್ಲಿ ನೀರು ಸಂಗ್ರಹವಾಗಿ ಚರಂಡಿ ನೀರಿನ ಜೊತೆ ಸೇರಿ ಜನರಿಗೆ, ವಾಹನ ಸವಾರರಿಗೆ ತೊಂದರೆ ಯುಂಟಾಗುತ್ತದೆ ಎಂಬುದು ಆ ಭಾಗದ ಜನರ ಅಳಲಾಗಿದೆ.ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ಜನತೆಗೆ ಸ್ವಲ್ಪ ತಂಪಾದಂತಾಗಿದೆ.….
ಬರದ ನಾಡಿನಲ್ಲಿ ಮಳೆ
ಚಿತ್ರದುರ್ಗ : ಬರದ ನಾಡು ಚಿತ್ರದುರ್ಗದಲ್ಲಿ ಮಳೆಯಾಗಿದೆ. ಗುರುವಾರ ಮಳೆಯಾಗುವ ಲಕ್ಷಣವಿದ್ದರೂ, ಮಳೆವಬರಲಿಲ್ಲ. ಆದರೆ ಶುಕ್ರವಾರ ಸಂಜೆ ಮಳೆ ಸುರಿಯಿತು. ಇದರಿಂದ ಬರದನಾಡಿನ ಚಿತ್ರದುರ್ಗದ ಜನ ಒಂದಿಷ್ಟು ಕಾಲ ನಿಟ್ಟುಸಿರುಬಿಟ್ಟರು.