ದಾವಣಗೆರೆ: ದಾವಣಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್‌ ಪರ ಮತಯಾಚನೆಗೆ ಕಾಂಗ್ರೆಸ್ ‌ಪಕ್ಷದ ನಾಯಕಿ‌ ಪ್ರಿಯಾಂಕ‌ಗಾಂಧಿ ಆಗಮಿಸುತ್ತಿದ್ದಾರೆ.ನಗರದ ಹೈಸ್ಕೂಲ್ ಮೈದಾನದಲ್ಲಿ  ಇಂದು ಮಧ್ಯಾಹ್ನ 3.45 ಕ್ಕೆ  ಪ್ರಿಯಾಂಕಾ ಗಾಂಧಿ ಜನತೆಯನ್ನುದ್ದೇಶಿ ಮಾತನಾಡುತ್ತಿದ್ದಾರೆಂದು ಕೆಪಿಸಿಸಿ‌ ಪ್ರಧಾನ‌ಕಾರ್ಯದರ್ಶಿ ಡಿ.ಬಸವರಾಜ್ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಆಗಮನದಿಂದ ಹೊಸ ಸಂಚಲನ‌ ಸೃಷ್ಠಿಯಾಗಲಿದೆ.ಈಗಾಗಲೇ ಪ್ರಿಯಾಂಕ ಗಾಂಧಿ ದೇಶದ ಉದ್ದಗಲಕ್ಕೂ ‌ಕಾಂಗ್ರೆಸ್ ಅಭ್ಯರ್ಥಿಗಳ‌ಪ್ರಚಾರ ಕೈಗೊಂಡಿದ್ದಾರೆ.  ಈ ವೇಳೆ ಕೇಂದ್ರ ಸರ್ಕಾರಕ್ಕೆ ಅವರು ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ ಆದರೆ ಪ್ರಧಾನಿಯವರು ಅದಕ್ಕೆ ಉತ್ತರನೀಡಲು ಸಾಧ್ಯವಾಗದೆ ಪಲಾಯನ ಮಾಡುತ್ತಿದ್ದಾರೆ.

ಪ್ರಿಯಾಂಕ ಗಾಂಧಿ ಆಗಮನದಿಂದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್‌ ಗೆಲುವಿನ ಅಂತರ ಹೆಚ್ಚಾಗಲಿದೆ ಎಂದರು.17 ವರ್ಷ ದೇಶದ ಚುಕ್ಕಾಣಿ ಹಿಡಿದಿದ್ದ ಇಂದಿರಾ ಗಾಂಧಿಯವರಂತೆ ಪ್ರಿಯಾಂಕ ಗಾಂಧಿ‌ಯವರು ಉಕ್ಕಿನ ಮಹಿಳೆಯಾಗಿದ್ದಾರೆ.ಅವರೊಂದಿಗೆ ರಾಜ್ಯ ನಾಯಕರುಗಳಾದ ಡಿ.ಕೆ ಶಿವಕುಮಾರ್ ಸೇರಿದಂತೆ ‌ಹಲವು ಮುಖಂಡರು ಆಗಮಿಸುತ್ತಿದ್ದಾರೆಂದರು.

ಮಹಿಳೆಯರನ್ನು ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಶೋಷಣೆ, ಅತ್ಯಾಚಾರ ಮಾಡಿರುವ ಕಾರಣ ಮಹಿಳೆಯ. ಯಾರೂ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಮತ ಹಾಕಬಾರದು. ಇದು ರಾಜ್ಯದ ಹೆಣ್ಣು ಮಕ್ಕಳ ಮಾನ ಗೌರವದ ಪ್ರಶ್ನೆ ಹಾಸನ ಸಂಸದ ಪ್ರಜ್ವಲ್ ರೇವಣ್ಣನ ಆಶ್ಲೀಲ ವಿಡಿಯೋ ದೇಶದಾದ್ಯಂತ ದೊಡ್ಡ ಸಂಚಲನ ಉಂಟು ಮಾಡ್ತಿದೆ. ಇಡೀ ದೇಶವನ್ನೇ ಬೆಚ್ಚ ಬೀಳಿಸಿರುವ ಇಡೀ ರಾಜ್ಯವೇ ತಲೆ ತಗ್ಗಿಸುವ ನಾಚಿಕೆಗೇಡಿನ ಕೃತ್ಯವನ್ನು ಪ್ರಜ್ವಲ್ ರೇವಣ್ಣ ಮಾಡಿದ್ದಾರೆಂದರು.ಈ‌ ಬಾರಿ ಚುನಾವಣೆಯಲ್ಲಿ ಜನರು‌ಬಿಜೆಪಿ ಮೈತ್ರಿಕೂಟಕ್ಕೆ ತಕ್ಕ‌ಪಾಠ ಕಲಿಸಬೇಕೆಂದರು.

ಸಮಾವೇಶಕ್ಕಾಗಿ ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಬೃಹತ್ ಪೆಂಡಾಲ್‌ ಹಾಕಿದ್ದು, ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮಧ್ಯಾಹ್ನ 3ಕ್ಕೆ ಕಾರ್ಯಕ್ರಮಕ್ಕೆ ಆರಂಭವಾಗ ಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್ ಭಾಗವಹಿಸುವರು.

ಶಾಸಕರಾದ ಶಾಮನೂರು ಶಿವಶಂಕರಪ್ಪ, ಡಿ.ಜಿ. ಶಾಂತನಗೌಡ, ಶಿವಗಂಗಾ ಬಸವರಾಜ್, ಕೆ.ಎಸ್. ಬಸವಂತಪ್ಪ, ದೇವೆಂದ್ರಪ್ಪ, ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್, ಕೆ.ಸಿ. ಕೊಂಡಯ್ಯ, ಮಾಜಿ ಶಾಸಕ ಎಸ್‌.ರಾಮಪ್ಪ, ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಅರಸೀಕೆರೆ ಕೊಟ್ರೇಶ್, ಪಿ.ಟಿ. ಪರಮೇಶ್ವರ ನಾಯ್ಕ ಭಾಗವಹಿಸಲಿದ್ದು, ಎಐಸಿಸಿ ಮತ್ತು ಕೆಪಿಸಿಸಿ ಪದಾಧಿಕಾರಿಗಳು ಸೇರಿ 60 ಮುಖಂಡರು ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ್ದ ಎಐಸಿಸಿ ಕಾರ್ಯದರ್ಶಿ ಮಯೂರ್ ಜಯಕುಮಾರ್ ಸಿದ್ಧತೆಗ ಳನ್ನು ಪರಿಶೀಲಿಸಿ ಮಾತನಾಡಿದರು.‘ಸಮಾವೇಶಕ್ಕೆ 50 ಸಾವಿರ ಕುರ್ಚಿಗಳನ್ನು ಹಾಕಲಾಗಿದ್ದು, ಅಂದಾಜು 1ಲಕ್ಷ ಜನರು ಭಾಗವಹಿಸುವರು. ಕಾಂಗ್ರೆಸ್ ಪ್ರಣಾಳಿಕೆ, ಐದು ಗ್ಯಾರಂಟಿಗಳು ಹಾಗೂ ಬಿಜಪಿ ವೈಫಲ್ಯಗಳ ಬಗ್ಗೆ ಸಮಾವೇಶದಲ್ಲಿ ನಾಯಕರು ಮಾತನಾಡುವರು. ಕಾರ್ಯಕ್ರಮ ವೀಕ್ಷಣೆಗೆ 10 ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ’ ಎಂದು ಹೇಳಿದರು.

ದಾವಣಗೆರೆ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಬಿಜೆಪಿಯೂ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರನ್ನು ಕಣಕ್ಕಿಳಿಸಿದ್ದು, ಮಹಿಳಾ ಅಭ್ಯರ್ಥಿಗಳ ನಡುವಿನ ಹಣಾಹಣಿಯಲ್ಲಿ ಪ್ರಿಯಾಂಕಾ ಗಾಂಧಿ ಪ್ರಚಾರ ನಡೆಸುತ್ತಿರುವುದು ಕುತೂಹಲ ಕೆರಳಿಸಿದೆ.

ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ‘ಶಕ್ತಿ’, ‘ಗೃಹಲಕ್ಷ್ಮಿ’ ಯೋಜನೆಗಳ ಫಲಾನುಭವಿಗಳು ಮಹಿಳೆಯರೇ ಆಗಿರುವುದರಿಂದ ಮಹಿಳೆಯರಿಂದ ಕಾಂಗ್ರೆಸ್‌ನ ಹೆಚ್ಚಿನ ಮತಗಳು ಬರಬಹುದು ಎಂಬುದು ಕಾಂಗ್ರೆಸ್‌ ನಿರೀಕ್ಷೆ. ಪ್ರಿಯಾಂಕಾ ಗಾಂಧಿ ಮಹಿಳಾ ಮತದಾರರಿಗೆ ಆಕರ್ಷಣೆಯಾಗಲಿದ್ದಾರೆ ಎಂಬುದು ಪಕ್ಷದ ಮುಖಂಡರ ಅಭಿಪ್ರಾಯವಾಗಿದೆ.

ಕಾಂಗ್ರೆಸ್ ಮುಖಂಡರಾದ ಅಸಗೋಡು ಜಯಸಿಂಹ, ಡಿ.ಬಸವರಾಜ್, ದಿನೇಶ್ ಕೆ.ಶೆಟ್ಟಿ, ಅಯೂಬ್‌ ಪೈಲ್ವಾನ್, ಎಸ್.ಮಲ್ಲಿಕಾರ್ಜುನ್, ಡೋಲಿ ಚಂದ್ರು ಇತರರು ಇದ್ದರು

Share.
Leave A Reply

Exit mobile version