ದಾವಣಗೆರೆ : ದಾವಣಗೆರೆ ಪ್ರತಿಷ್ಠಿತ ಪತ್ರಕರ್ತರ ಪ್ರೆಸ್ ಕ್ಲಬ್ ಚುನಾವಣೆ ಅಬ್ಬರದಿಂದ ಮಂಗಳವಾರ ನಡೆಯಿತು. ಸುಮಾರು 165 ಮತದಾರರು ಹಕ್ಕನ್ನು ಚಲಾಯಿಸಿದ್ದು, ನಾಗರಾಜ್ ಬಡದಾಳ್ ಗೆಲುವು ಸಾಧಿಸಿದ್ದಾರೆ ಎಂಬ ಮಾಹಿತಿ ಇದೆ.
ಹಿರಿಯ ವರದಿಗಾರ ನಾಗರಾಜ್ ಬಡದಾಳ್, ವರದರಾಜ್, ಮಧುನಾಗರಾಜ್, ರವಿಕುಮಾರ್ ಸ್ಪರ್ಧಿಸಿದ್ದು, 74 ಮತಗಳನ್ನು ಪಡೆದರು. ವರದರಾಜ್ 45 ಮತಗಳನ್ಬು ಪಡೆದಿದ್ದು, ರವಿಕುಮಾರ್ 36 ಮತಗಳನ್ನು ಪಡೆದರು.
ಇಬ್ಬರ ನಡುವೆ ನೇರಾಹಣಾಹಣಿ ನಡೆದರೂ, ದಾವಣಗೆರೆ ಕನ್ನಡಿಗ ರವಿ ಕೂಡ ಅಷ್ಟೇ ಟಫ್ ಫೈಟ್ ಕೊಟ್ಟರು.ಇನ್ನು ಗರುಡ ವಾಯ್ಸ್ ಪತ್ರಿಕೆಯ ಎಚ್.ಎಂ.ಪಿ ಕುಮಾರ್ ಕನ್ನಡ ಪ್ರಭ ವರದಿಗಾರ ಬಡದಾಳ್ ಗೆ ಬೆಂಬಲಿಸಿದ್ದು, ಗೆಲುವಿಗೆ ಕಾರಣವಾಗಿದೆ.
ವರದಿಗಾರ ಕೂಟದ ಅಧ್ಯಕ್ಷ ಸ್ಥಾನ ಪ್ರತಿಷ್ಠೆಯ ಕಣವಾಗಿದ್ದು, ಇಲ್ಲಿ ಯಾರು ಗೆಲ್ಲುತ್ತಾರೆ ಎಂಬುದಕ್ಕೆ ಕೆಲವೇ ಕ್ಷಣಗಳಲ್ಲಿ ಉತ್ತರ ಸಿಗಲಿದೆ. ಇಲ್ಲಿ ಯಾರೇ ಗೆದ್ದರೂ ಅವರಿಗೆ ಅವರದ್ದೆ ಆದ ಗೌರವ ಸಿಗಲಿದೆ. ಆದ್ದರಿಂದ ಈ ಬಾರಿ ಐದು ಜನ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಇನ್ನು ಮಹಿಳಾ ಮತದಾರರು ತಮ್ಮ ಹಕ್ಕು ಚಲಾಯಿಸಿ ಪೋಟೋ ಗೆ ಪೋಸ್ ನೀಡಿದರು.
ಹಿರಿಯ ಪತ್ರಕರ್ತರಾದ ಬಿ.ಎನ್.ಮಲ್ಲೇಶ್, ಆರಾಧ್ಯ, ಏಕಾಂತಪ್ಪ, ಬಸವರಾಜ್ ದೊಡ್ಮನಿ ಹಾಜರಿದ್ದರು. ಅಭ್ಯರ್ಥಿಗಳು ತಮಗೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಮತಗಳ ಕೌಟಿಂಗ್ ಇನ್ನು ಇದ್ದು, ಬಹುತೇಕ ನಾಗರಾಜ್ ಬಡದಾಳ್ ಗೆಲ್ಲಲ್ಲಿದ್ದಾರೆ ಎಂಬ ಮಾಹಿತಿ ಇದೆ.