ದಾವಣಗೆರೆ: ಮದುವೆ ನಡೆಯುತ್ತಿದ್ದ ಕಲ್ಯಾಣ ಮಂಟಪಗಳನ್ನು ಹೊಂಚು ಹಾಕಿ ಚಿನ್ನಾಭರಣ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಡಾವಣೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಶಾಂತಿ ನಗರದ ನಿವಾಸಿ ಕಿರಣ್ ನಾಯ್ಕ (25) ಹಾಗೂ ವಿನೋದ್ ನಾಯ್ಕ (23) ಬಂಧಿತರು. ಆರೋಪಿಗಳಿಂದ 5.3 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 1.2 ಲಕ್ಷ ನಗದು ಜಪ್ತಿ ಮಾಡಲಾಗಿದೆ. ಕಿರಣ್ ನಾಯ್ಕ ವಿರುದ್ಧ ವಿದ್ಯಾನಗರ ಠಾಣೆಯಲ್ಲಿ 5, ಬಡಾವಣೆಯ ಠಾಣೆಯಲ್ಲಿ 4, ಗಾಂಧಿನಗರ, ಕೆಟಿಜೆ ನಗರ ಹಾಗೂ ಬಸವನಗರ ಠಾಣೆಯಲ್ಲಿ ತಲಾ 1 ಕಳವು ಪ್ರಕರಣ ದಾಖಲಾಗಿವೆ. ಬಿ.ಆರ್.ಕೌಶಿಕ್ ಎಂಬುವರು ಅ.26ರಂದು ನಿಜಲಿಂಗಪ್ಪ ಬಡಾವಣೆಯ ಬಕ್ಕೇಶ್ವರ ಕಲ್ಯಾಣ ಮಂಟಪಕ್ಕೆ ಬಂದಿದ್ದರು. ಬ್ಯಾಗಿನಲ್ಲಿ 73 ಗ್ರಾಂ ತೂಕದ ಚಿನ್ನಾಭರಣ ಕಳವಾಗಿದ್ದವು. ಈ ಸಂಬAಧ ಬಡಾವಣೆ ಠಾಣೆಗೆ ದೂರು ನೀಡಲಾಗಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಕಲ್ಯಾಣ ಮಂಟಪಗಳಲ್ಲಿ ಕಳವು ಮಾಡುತ್ತಿದ್ದ ಆರೋಪಿಗಳ ಸುಳಿವು ಸಿಕ್ಕಿತ್ತು.

Share.
Leave A Reply

Exit mobile version