ದಾವಣಗೆರೆ : ಆಗ ನಾನು ನನ್ನ ಸಂಸಾರ ಅಂತೆ ಇದ್ದೇ, ಮನೆಗೆ ಬಂದೋರಿಗೆ ಊಟ ಬಡಿಸುತ್ತಿದ್ದೇ…ನನ್ನ ಕುಟುಂಬವಷ್ಟೇ ನನ್ನ ಲೋಕ ಆಗಿತ್ತು. ಅವರು ಹೇಳಿದ್ದನ್ನು ಮಾತ್ರ ಮಾಡುತ್ತಿದ್ದೇ…ಆದರೀಗ ಇಡೀ ದಾವಣಗೆರೆವೇ ನನ್ನ ಕುಟುಂಬ, ನಿಮ್ಮ ಜತೆ ನಾನು ಒಬ್ಬಳು. ನಿಮ್ಮ ಕಷ್ಟಕ್ಕೆ ನಾನು ಇರುತ್ತೇನೆ ಎಂದು ಲೋಕಸ ಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಹೇಳಿದರು.
ನಗರದಲ್ಲಿ ಶುಕ್ರವಾರ ಬಿಜೆಪಿ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಸಂಸದ ಜಿ.ಎಂ.ಸಿದ್ದೇಶ್ವರ ಅವರ 10 ವರ್ಷಗಳ ಅಭಿವೃದ್ಧಿ ಕಾರ್ಯಗಳ ರಿಪೋರ್ಟ್ ಕಾರ್ಡ್ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಲ್ಲಿಯವರೆಗೂ ನಾನು ನನ್ನ ಕುಟುಂಬ ಅಂತ ಇದ್ದೆ. ಅಡಕೆ ತೋಟ ನೋಡಿಕೊಳ್ಳುವುದು, ಮನೆಯಲ್ಲಿ 30 ಹಸುಗಳನ್ನು ನೋಡಿಕೊಳ್ಳುತ್ತೇನೆ. ಸಣ್ಣ ಕುಟುಂಬ ನಿರ್ವಹಣೆವಷ್ಟೇ ನನ್ನ ಜವಾಬ್ದಾರಿಯಾಗಿತ್ತು. ಆದರೀಗ ನನ್ನ ಕುಟುಂಬ ದೊಡ್ಡದಾಗಿದೆ. ದಾವಣಗೆರೆ ನನ್ನ ಕುಟುಂಬಕ್ಕೆ ಸೇರಿದೆ” ಸದ್ಯ ದೊಡ್ಡಕುಟುಂಬ ನಿರ್ವಹಿಸುವ ಅವಕಾಶ ದೊರೆತಿದೆ” ಎಂದು ಹೇಳಿದರು.
ನKkನ್ನ ಮಾವ ಜಿ. ಮಲ್ಲಿಕಾರ್ಜುನಪ್ಪ 7 ಮತ್ತು ಪತಿ ಜಿ.ಎಂ. ಸಿದ್ದೇಶ್ವರ 20 ವರ್ಷ ಕ್ಷೇತ್ರ ಪ್ರತಿನಿಧಿಸಿ, ಸೇವೆ ಸಲ್ಲಿಸಿದ್ದಾರೆ. ಈ ಬಾರಿ ರಾಷ್ಟ್ರ ಮತ್ತು ರಾಜ್ಯ ನಾಯಕರು ನನಗೆ ಅವಕಾಶ ಮಾಡಿಕೊಟ್ಟಿರುವುದು ಖುಷಿಯಾಗಿದ್ದು, ಮೋದಿ ಸರಕಾರಕ್ಕೆ ಎಂಟ್ರಿ ಆಗ್ತಿನಿ ಅಂತಾ ಸಂತೋಷವಾಗ್ತಿದೆ” ಎಂದರು.
28 ವರ್ಷಗಳಿಂದ ಚುನಾವಣೆ ಸಂದರ್ಭದಲ್ಲಿ ಓಡಾಟ ಮಾಡಿದ್ದೇನೆ. ಪ್ರಚಾರದ ವೇಳೆ ಪತಿ ಜತೆ ಹೋಗ್ತಿದ್ದೆ. ಬಳಿಕ ಮನೆಯ ಜವಾಬ್ದಾರಿ ನೋಡಿಕೊಳ್ಳುವುದರ ಜತೆಗೆ ಸಂಸದರನ್ನು ಕಾಣಲು ಬರುವ ಕಾರ್ಯಕರ್ತರ, ಬೆಂಬಲಿಗರಿಗೆ ಊಟ, ಉಪಚಾರ ಮಾಡುತ್ತಿದ್ದೆ. ಆಗ ಚಿಕ್ಕ ಕುಟುಂಬ ಜವಾಬ್ದಾರಿ ನಿಭಾಯಿಸುತ್ತಿದ್ದೆ. ಈಗ ದಾವಣಗೆರೆ ಲೋಕಸಭಾ ಕ್ಷೇತ್ರವೆಂಬ ದೊಡ್ಡ ಕುಟುಂಬದ ಜತೆ ಇದ್ದೀನಿ. ಆದ್ದರಿಂದ ನಿಮ್ಮ ಸೇವೆ ಮಾಡಲು ಅವಕಾಶ ಕೊಡಿ ಎಂದು ಮನವಿ ಮಾಡಿದರು.
ಈ “ಹಿಂದೆ ಕುಂಕುಮ ಕೊಟ್ಟು ಪತಿಗಾಗಿ ವೋಟ್ ಕೇಳಿದ್ವಿ. ಎಲ್ಲ ಹಳ್ಳಿಗಳನ್ನು ಸುತ್ತಾಡಿದ್ದರಿಂದ ಜನರ ಪರಿಚಯವಿದೆ. ಆದರೆ, ರಾಜಕೀಯವಾಗಿ ನನಗೆ ಏನೂ ಗೊತ್ತಿಲ್ಲ. ಪತಿ ಸಿದ್ದೇಶ್ವರ ಹೇಳಿದಂತೆ ನಾನು ಮಾಡುತ್ತೇನೆ” ಎಂದರು.
ಟಿವಿ ನೋಡಿ ದಿಗ್ಬ್ರಮೆ
ರಾಜಕಾರಣ ಕುಟುಂಬದಲ್ಲಿ ಇರುವುದರಿಂದ ಯಾರಿಗೆ ಟಿಕೆಟ್ ನೀಡಬಹುದು ಎಂಬ ಕುತೂಹಲದಿಂದ ಟಿವಿ ನೋಡುತ್ತಿದ್ದೆ, ಅಷ್ಟೊತ್ತಿಗಾಗಲೇ ಜಿ.ಎಂ. ಲಿಂಗರಾಜು ಹೆಸರು ಕೇಳಿ ಬಂದಿತ್ತು, ಆದರೆ ನನಗೆ ಟಿಕೆಟ್ ನೀಡಲಾಗಿತ್ತು, ನನಗೆ ದಿಗ್ಧಮೆ ಆಯಿತು. ಮೋದಿ ಅವರು ನಾರಿ ಶಕ್ತಿಯಡಿ ನನಗೆ ಟಿಕೆಟ್ ನೀಡಿದ್ದಾರೆ ಎಂದರು.
ವಿರೋಧ ಇದ್ದದ್ದೇ ಸರಿ ಹೋಗುತ್ತದೆ
ನಿಮ್ಮ ವಿರುದ್ದ ಡೆಲ್ಲಿ ಬಾಯ್ಸ್ ತಿರುಗಿ ಬಿದ್ದಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗಾಯಿತ್ರಿ ಸಿದ್ದೇಶ್ವರ, “ಎಲ್ಲಿ ವಿರೋಧವಿಲ್ಲ ಹೇಳಿ, ಎಲ್ಲರೂ ಟಿಕೆಟ್ ಕೇಳಬಹುದು. ಈಗ ಗೊಂದಲ ಇರಹುದು. ಅದೆಲ್ಲ ಸರಿಹೋಗುತ್ತೆ” ಎಂದು ಉತ್ತರಿಸಿದರು.
ತಾವರೆ ಹೂ ಮುಡಿದು ದೆಹಲಿಗೆ ಕಳಿಸಿ
ಹಿಂದೆ ಪ್ರಧಾನಿ ಮೋದಿ ದಾವಣಗೆರೆಗೆ ಬಂದಾಗ ದಾವಣಗೆರೆಯಿಂದ ಕಮಲ ಗೆಲ್ಲಿಸಿ, ಲಕ್ಷ್ಮೀ ಕಳಿಸುತ್ತೇನೆ ಅಂದಿದ್ದರಿ. ಅದರಂತೆ ನನ್ನ ಪತಿ ಕೇಂದ್ರ ರಾಜ್ಯ ಸಚಿವರಾದ್ರು. ಈಗ ನಾನು ಬಂದಿದ್ದೇನೆ, ದಾವಣಗೆರೆ ಲೋಕಸಭಾ ಕ್ಷೇತ್ರದ ಜನರ ಮತ್ತು ಕಾರ್ಯಕರ್ತರ ಆಶೀರ್ವಾದಿಂದ ಗೆಲ್ಲಿಸಿ ತಾವರೆ ಹೂವು ಮೂಡಿದು ದೆಹಲಿಗೆ ಹೋಗುತ್ತೇನೆ ಎಂದು ಗಾಯಿತ್ರಿ ಸಿದ್ದೇಶ್ವರ. ಹೇಳಿದರು.