ದಾವಣಗೆರೆ;  ವಕ್ಪ್ ನೆನಪೋಲೆಗಳು ವಾಪಾಸ್, ಮ್ಯುಟೇಷನ್‌ಗೆ ರಾಜ್ಯ ಸರ್ಕಾರ ತಡೆ ನೀಡಿದ್ದು ಸಾರ್ವಜನಿಕರು ಮತ್ತು ರೈತರು ಯಾವುದೇ ರೀತಿಯಲ್ಲಿ ಆತಂಕ ಪಡುವ ಅಗತ್ಯವಿಲ್ಲವೆಂದು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಷಯಕ್ಕೆ ಸಂಬಂಧಿಸಿದಂತೆ ಮ್ಯುಟೇಷನ್ ಮಾಡಲು ಯಾವುದೇ ಕಚೇರಿ ಅಥವಾ ಪ್ರಾಧಿಕಾರದಿಂದ ನೀಡಲಾದ ನಿರ್ದೇಶನಗಳನ್ನು ವಾಪಸ್ ಪಡೆಯಲಾಗಿದೆ ಇದರಿಂದ ಯಾವುದೇ ಪ್ರಕ್ರಿಯೆಗಳು ನಡೆಯುವುದಿಲ್ಲ ಎಂದು ತಿಳಿಸಿದ್ದಾರೆ.

ದಾವಣಗೆರೆಯ ಪಿ.ಜೆ. ಬಡಾವಣೆ ವಕ್ಸ್ ಬೋರ್ಡ್‌ ಗೆ ಸೇರಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದು ಈ ವರದಿಯಂತೆ 1940ರಲ್ಲಿ ಪಿ.ಜೆ. ಬಡಾವಣೆ ನಿರ್ಮಾಣವಾಗಿದೆ ಅಂದಿನಿಂದ ಇಂದಿನವರೆಗೂ ಯಾವುದೇ ಗೊಂದಲವಿರಲಿಲ್ಲ. ಆದರೆ ಈ ಗೊಂದಲ ಯಾಕೆ ಬಂತು ತಿಳಿದಿಲ್ಲ ಗೊಂದಲಕ್ಕೆ ಬಿಜೆಪಿಗರೆ ಕಾರಣ ಎಂದು ನೇರವಾಗಿ ಆರೋಪಿಸಿದರು

Share.
Leave A Reply

Exit mobile version