ಚನ್ನಗಿರಿ (ತ್ಯಾವಣಗಿ) : ಬೇಸಿಗೆ ಬಂತೆಂದರೆ ಸಾಕು ಹುಣಸೆ ಸೀಸನ್ ಆರಂಭವಾಗುತ್ತೇ..ಅದರಲ್ಲೂ ಈ ಹುಣಸೆ ಮರಗಳು ಕೆಲವರ ಪಾಲಿಗೆ ವರದನಾವಾದರೆ, ಇನ್ನು ಕೆಲವರ ಪಾಲಿಗೆ ಮೃತ್ಯುಕೂಪಗಳಾಗಿದೆ.

ಈ ಹುಣಸೆ ಮರದಿಂದ ಹಲವರು ತಮ್ಮ ಜೀವನ ಕಟ್ಟಿಕೊಂಡಿದ್ದಾರೆ. ಆದರೆ ಇಲ್ಲೊಂದು ಘಟನೆ ಇಡೀ ಸಂಸಾರವನ್ನು ಅನಾಥ ಮಾಡಿದೆ.

ಹೌದು..ಹುಣಿಸೆಮರದಲ್ಲಿ ಹಣ್ಣು ಬಡಿಯುವಾಗ ವಿದ್ಯುತ್ ಪ್ರವಹಿಸಿ ವ್ಯಕ್ತಿಯೊಬ್ಬ ಮೃತಪಟ್ಟಘಟನೆ ಚನ್ನಗಿರಿ ತಾಲೂಕು ತ್ಯಾವಣಿಗೆಯಲ್ಲಿ ಮಾ.7ರಂದು ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಬೆಳಲಗೆರೆ ಗ್ರಾಮದ ಅಜಯ್ ಕುಮಾರ್ (32) ಮೃತ ವ್ಯಕ್ತಿ. ಗುರುವಾರ ಬೆಳಗ್ಗೆ ತ್ಯಾವಣಿಗೆಯಲ್ಲಿ ಹುಣಿಸೆಮರಗಳಲ್ಲಿನ ಹಣ್ಣು ಬಿಡಿಸಲು ಕೂಲಿ ಕೆಲಸಕ್ಕೆ ಹೋಗಿದ್ದರು. ಮರದ ಪಕ್ಕದಲ್ಲೇ ವಿದ್ಯುತ್‌ ಲೈನ್ ಇದ್ದು, ಹುಣಸೆಹಣ್ಣು ಬಿಡಿಸು ವಾಗ ವಿದ್ಯುತ್ ತಗುಲಿ, ಮರದ ಮೇಲಿಂದ ನೆಲಕ್ಕೆ ಬಿದ್ದಿದ್ದಾರೆ. ತಕ್ಷಣ ದಾವಣಗೆರೆ ಹೈಟೆಕ್ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಪರೀಕ್ಷಿಸಿ ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.ಬಸವಾಪಟ್ಟಣ ಪೊಲೀಸ್ ಠಾಣೆಗೆ ಮೃತರ ಪತ್ನಿ ಜ್ಯೋತಿ ದೂರು ನೀಡಿದ್ದಾರೆ.

Share.
Leave A Reply

Exit mobile version