ನಂದೀಶ್ ಭದ್ರಾವತಿ ದಾವಣಗೆರೆ
ಆತ ಕಟ್ಟಾ ನಟ ದರ್ಶನ್ ಅಭಿಮಾನಿ, ಆತನಿಗೆ ಈ ನಟ ಚೆನ್ನಾಗಿರಬೇಕೆಂಬ ಆಸೆ ಇತ್ತು. ಯಾವಾಗ ಈ ಸ್ಟಾರ್ ನಟ ಒಂದು ಹೆಣ್ಣಿನ ಹಿಂದೆ ಬಿದ್ದನೋ, ಆಗ ಆತ ನಟನ ಪ್ರೇಯಸಿ ನಂಬರ್‌ಗೆ ಅಶ್ಲಿಲ ಮೇಸೆಜ್ ಮಾಡಲು ಶುರು ಮಾಡಿದ. ಇದು ನಟನಿಗೆ ಗೊತ್ತಾಗಿ, ಆತನನ್ನೇ ಪ್ರಪಂಚದಿAದ ಹೊರ ನಡೆಸಿದ್ದಾನೆ.

ಹೌದು..ನಾವು ಹೇಳೋದಕ್ಕೆ ಹೊರಟಿರೋದು ಚಾಲೆಂಜಿಗ್ ಸ್ಟಾರ್ ದರ್ಶನ ಕಥೆಯಾಗಿದ್ದು, ಈತನಿಂದ ಕೋಟೆನಾಡಿನಲ್ಲಿ ಒಬ್ಬ ಹುಚ್ಚು ಅಭಿಮಾನಿ ಕೊಲೆಯಾಗಿದ್ದಾನೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಯಾಗಿದ್ದು, ಇವನ ಕುಟುಂಬ ಈಗ ಅಕ್ಷರಶಃ ಬೀದಿಗೆ ಬಂದಿದೆ. ನಟ ದರ್ಶನ್ ಹಾಗೂ ನಟಿ ಪವಿತ್ರಗೌಡ ಇಬ್ಬರು ಸ್ನೇಹಿತರಾಗಿದ್ದರು. ದರ್ಶನ್ ಜತೆ ಇರುವ ಫೋಟೋಗಳನ್ನು ಪವಿತ್ರಾ ಗೌಡ ಹಂಚಿಕೊAಡಿದ್ದರು. ಆದರೆ ಇವರ ಆಪ್ತತೆ ಅಭಿಮಾನಿ ರೇಣುಕಾಸ್ವಾಮಿಗೆ ಇಷ್ಟವಿರಲಿಲ್ಲ. ಹಾಗಾಗಿ ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದರು. ಈ ವಿಷಯ ದರ್ಶನ್‌ಗೆ ಗೊತ್ತಾಗಿ ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಸಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಕಾಮಾಕ್ಷಿಪಾಳ್ಯದಲ್ಲಿ ರೇಣುಕಾಸ್ವಾಮಿಯ ಕೊಲೆ ಆಗಿದ್ದು, ಚರಂಡಿಯಲ್ಲಿ ದೇಹವನ್ನು ನಾಯಿಗಳು ಎಳೆಯುತ್ತಿರುವಾಗ ಮೃತ ದೇಹ ಸಿಕ್ಕಿದೆ. ಸದ್ಯ ಈ ಕೊಲೆ ಪ್ರಕರಣದಲ್ಲಿ ದರ್ಶನ್ ಹೆಸರು ಕೇಳಿಬಂದ ಹಿನ್ನೆಲೆ ಅರೆಸ್ಟ್ ಮಾಡಲಾಗಿದೆ. ಅಲ್ಲದೇ ಇವರ ಜತೆ 10 ಜನರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ ಸದ್ಯ ಸೆನ್ಸೇಷನ್ ಸೃಷ್ಟಿ ಮಾಡಿದೆ. ಮೈಸೂರಿನ ಜುಮ್ ಮಾಡುತ್ತಿರುವಾಗಲೇ ಪೊಲೀಸರು ಅವರನ್ನು ಅರೆಸ್ಟ್ ಮಾಡಿದ್ದಾರೆ. ದರ್ಶನ್ ಜೊತೆ ಪವಿತ್ರಾ ಗೌಡ ಅರೆಸ್ಟ್ ಆಗಿದೆ. ಇನ್ನು ದರ್ಶನ್ ಸೂಚನೆ ಮೇಲೆ ಕೊಲೆ ಮಾಡಿದ್ದಾಗಿ ನಾಲ್ವರು ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಘಟನೆ ವೇಳೆ ಸ್ಥಳದಲ್ಲಿ ದರ್ಶನ್ ಕೂಡ ಇದ್ದರು ಎನ್ನಲಾಗಿದೆ.

ಈ ರಹಸ್ಯ ಬಯಲಾಗಿದ್ದು ಹೇಗೆ

ಬೆಂಗಳೂರಿನ ಸುಮ್ಮನಹಳ್ಳಿ ಸತ್ವ ಅನುಗ್ರಹ ಅಪಾರ್ಟ್ ಬಳಿ ವ್ಯಕ್ತಿಯೊಬ್ಬರ ಶವ ಜೂನ್ 9 ಭಾನುವಾರ ಬೆಳಗ್ಗೆ
ಪತ್ತೆಯಾಗಿತ್ತು. ಶವವನ್ನು ನಾಯಿಗಳು ಕಚ್ಚಿ ಎಳೆದಾಡಿದ್ದವು. ಶವದ ಮತ್ತೊಂದು ಭಾಗ ಮೋರಿಯಲ್ಲಿ ಬಿದ್ದಿತ್ತು. ಇದನ್ನು ಕಂಡ ಅಪಾರ್ಟ್ ಮೆಂಟ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಕಾಣೆಯಾದ ವ್ಯಕ್ತಿಗಳ ವಿವರ ಪಡೆದಾಗ ಈ ಮಾಹಿತಿ ಹೊರ ಬಿದ್ದಿತ್ತು.

ದರ್ಶನ ಫ್ಯಾನ್ಸ್ ಅಧ್ಯಕ್ಷ ರೇಣುಕಾಸ್ವಾಮಿಯನ್ನು ಕರೆದುಕೊಂಡು ಬಂದಿದ್ದನಾ?

ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನ ಚಿತ್ರದುರ್ಗದ ಫ್ಯಾನ್ಸ್ ಸಂಘದ ಅಧ್ಯಕ್ಷನ ಮೂಲಕ ಕರೆಸಲಾಗಿತ್ತು. ದರ್ಶನ ಪರಮಾಪ್ತವಿನಯ್ ಎಂಬುವರಿಗೆ ಸೇರಿದ ಶೆಡ್‌ನಲ್ಲಿ ಕೂಡಿಹಾಕಿ ಹಲ್ಲೆ ಮಾಡಲಾಗಿತ್ತು. ಆಯುಧದಿಂದ ಹಲ್ಲೆ ನಡೆಸಿ, ಸಿಗರೇಟ್‌ನಿಂದ ಸುಟ್ಟು ಕೊಲೆ ಮಾಡಲಾಗಿತ್ತು. ನಂತರ ಶವವನ್ನು ಕಾಮಾಕ್ಷಿಪಾಳ್ಯದ ಮೋರಿಗೆ ಎಸೆಯಲಾಗಿತ್ತು. ಮುಖ, ತಲೆ ಹಾಗೂ ಕಿವಿಗೆ ಗಾಯವಾಗಿ ರಕ್ತ ಸೋರಿರುವುದು ಪತ್ತೆ ಆಗಿತ್ತು. ನಂತರ ಅಪಾರ್ಟ್ಮೆಂಟ್ ಸೆಕ್ಯೂರಿಟಿ ರಾಮ್ ದೋರ್ ಜೀ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರಿಗೆ ಮಹತ್ವದ ಸುಳಿ ಸಿಕ್ಕಿದೆ. ನಂತರ ಕೊಲೆ ಪ್ರಕರಣ ಸಂಬAಧ ನಾಲ್ವರನ್ನ ವಶಕ್ಕೆ ಪಡೆದಿದ್ದ ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ಬಂಧಿತರು, ದರ್ಶನ್ ಸೂಚನೆ ಮೇಲೆ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದರು. ಘಟನೆ ವೇಳೆ ಸ್ಥಳದಲ್ಲಿ ದರ್ಶನ್ ಇದ್ದರು ಎಂದು ಅವರು ಹೇಳಿದ್ದರು.

ಸಿಡಿಆರ್ ಕೊಟ್ಟ ಮಾಹಿತಿ ಏನು?

ಮೋರಿಯಲ್ಲಿ ಸಿಕ್ಕ ಶವದ ಮಾಹಿತಿ ಜಾಡು ಹಿಡಿದು ಹೊರಟ ಪೊಲೀಸರು ಮೊದಲು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಅವರಿಲ್ಲದ್ದ ಪೋನ್ ತೆಗೆದುಕೊಂಡು ಸಿಡಿಆರ್ (ಕಾಲ್ ಡೀಟೆಲ್ಸ್ ರೆಕಾರ್ಡ್) ಗೆ ಹಾಕಿದಾಗ ಯರ‍್ಯಾರಿಗೆ ದೂರವಾಣಿ ಕರೆ ಹೋಗಿತ್ತು ಎಂಬುದು ಗೊತ್ತಾಗಿದೆ. ಅದರಲ್ಲಿ ನಟ ದರ್ಶನ್‌ಗೂ ಕೂಡ ಕಾಲ್ ಹೋಗಿತ್ತು ಎಂಬುದು ಗೊತ್ತಾಗಿದೆ. ಒಟ್ಟಾರೆ ಒಬ್ಬ ಸ್ಟಾರ್ ನಟನಿಂದ ಅಮಾಯಕ ಜೀವ ಬಲಿಯಾಗಿದ್ದು, ಕೊಲೆಯಾದವನ ಕುಟುಂಬಕ್ಕೆ ಹೊಣೆ ಯಾರು?…

 

Share.
Leave A Reply

Exit mobile version