
ದಾವಣಗೆರೆ : ಪೂಜೆ, ಹೋಮ-ಹವನ ಮಾಡಿಸುವ ನೆಪದಲ್ಲಿ ಮನೆಗಳಿಗೆ ಹೋಗಿ, ಕಳ್ಳತನ ಮಾಡುತ್ತಿದ್ದ ವಂಚಕರನ್ನು ಎಸ್ಪಿ ಉಮಾಪ್ರಶಾಂತ್ ಮಾರ್ಗದರ್ಶನದಲ್ಲಿ ಹರಿಹರ ಡಿವೈಎಸ್ಪಿ ಬಿ.ಎಸ್.ಬಸವರಾಜ್ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ದಾವಣಗೆರೆ ಬಾಷಾನಗರದಲ್ಲಿ ಎಲೆಕ್ಟ್ರೀಕಲ್ ಕೆಲಸ ಮಾಡುತ್ತಿದ್ದ ಇಸ್ಮಾಯಿಲ್ ಜಬೀವುಲ್ಲಾ (30) ಮತ್ತು ಓಡಿಸ್ಸಾ ರಾಜ್ಯದ ಜಗತ್ಸಿಂಗ್ಪುರ್ನಲ್ಲಿ ಟೈಲರಿಂಗ್ ಕೆಲಸ ಮಾಡುತ್ತಿದ್ದ ರುಕ್ಸಾನ ಬೇಗಂ ಬಂಧಿತರು. ಬಂಧಿತರಿಂದ 8,65,000 ರೂ. ಮೌಲ್ಯದ 90 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 750 ಗ್ರಾಂ ತೂಕದ ಬೆಳ್ಳಿಯ ಸಾಮಾನುಗಳನ್ನು ವಶಪಡಿಸಿಕೊಂಡಿದ್ದಾರೆ.
ದೇವರ ಮೇಲಿದ್ದ ನಂಬಿಕೆಯೇ ಬಂಡವಾಳವನ್ನಾಗಿಸಿಕೊAಡ ವಂಚಕರು, ಮೊದಲು ಸ್ವಾಮೀಜಿಗಳಂತೆ ಮನೆಯನ್ನು ಪ್ರವೇಶ ಮಾಡುತ್ತಿದ್ದರು. ನಿಮ್ಮ ಮನೆಯಲ್ಲಿ ದೋಷವಿದೆ ಎಂದು ಹೇಳುತ್ತಿದ್ದರು. ದೋಷ ವಿವಾರಣೆಗೆ ಪೂಜೆ ಮಾಡಿಸಬೇಕು ಎಂದು ಮನೆ ಮಾಲೀರನ್ನು ನಂಬಿಸುತ್ತಿದ್ದರು. ಆ ಪೂಜೆಗೆ ಮನೆಯಲ್ಲಿದ್ದ ಚಿನ್ನ, ಒಡವೆಗಳನ್ನೆಲ್ಲ ಇಡುವಂತೆ ಗಳಿಸುತ್ತಿದ್ದರು. ಹಾಗೇ ಮಾತನಾಡುತ್ತ, ಮನೆಯ ಬಗ್ಗೆ ಸಂಪೂರ್ಣ ವಿವರಣೆಯನ್ನೂ ಪಡೆಯುತ್ತಿದ್ದರು ಈ ಕಳ್ಳ ಜೋಡಿ. ಮೊದಲು ಇವರು ದೊಡ್ಡದೊಡ್ಡ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿತ್ತು.
ಹಣಕಾಸು ಸಮಸ್ಯೆಗೆ ಪೂಜೆ ಮಾಡಿಸಿ ಎಂದು ಹೇಳಿದ್ದ ವಂಚಕ ತಂಡ
ಹರಿಹರ ತಾಲೂಕು ಬನ್ನಿಕೋಡು ಗ್ರಾಮದ ಶಶಿಕಲಾ ಕೋಂ ರಮೇಶ ಎಂಬುವರ ಮನೆಯಲ್ಲಿರುವ ಹಣಕಾಸಿನ ಸಮಸ್ಯೆ ಪರಿಹಾರ ಮಾಡಲು ಪೂಜೆ ಮಾಡುತ್ತೇವೆ ಎಂದು ಹೇಳಿಕೊಂಡು ಇಸ್ಮಾಯಿಲ್ ಜಬೀವುಲ್ಲಾ ಮತ್ತು ರುಕ್ಸಾನ ಬೇಗಂ ಮನೆಯಲ್ಲಿದ್ದ ಒಟ್ಟು 1,44,000 ರೂ. ಬೆಲೆಯ 02 ತೊಲ 02 ಗ್ರಾಂ ಬಂಗಾರದ ಆಭರಣಗಳನ್ನು ಪೂಜೆ ಮಾಡಿಕೊಡುತ್ತೇವೆ ಎಂದು ನಂಬಿಸಿ ಕಳ್ಳತನ ಮಾಡಿದ್ದರು. ಈ ಬಗ್ಗೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಡಿವೈಎಸ್ಪಿ ಬಸವರಾಜ್ ನೇತೃತ್ವದ ತಂಡ ಪತ್ತೆಗೆ ಇಳಿದಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಕದ್ದ ಬಂಗಾರ ಏನು ಮಾಡುತ್ತಿದ್ದರು?
ದೇವರ ಹೆಸರಿನಲ್ಲಿ ಕದ್ದ ಬಂಗಾರವನ್ನು ಅವರು ಚಿನ್ನದ ವ್ಯಾಪಾರಿಗಳಿಗೆ ಕಡಿಮೆ ಹಣಕ್ಕೆ ಮಾರಾಟ ಮಾಡುತ್ತಿದ್ದರು. ಕಡಿಮೆ ಹಣಕ್ಕೆ ಖರೀದಿಸುತ್ತಿದ್ದ ಬಂಗಾರದ ವ್ಯಾಪಾರಿಗಳು ಅದನ್ನು ಕರಗಿಸಿ ಗಟ್ಟಿ ಚಿನ್ನ ಮಾಡಿಕೊಂಡು ದುಬಾರಿ ಬೆಲೆಗೆ ಗ್ರಾಹಕರಿಗೆ ಸೇಲ್ ಮಾಡುತ್ತಿದ್ದರು.
ವಂಚಕರು ಸಿಕ್ಕಿದ್ದು ಹೇಗೆ?
ದೂರಿನ ಆಧಾರದ ಮೇಲೆ ಮೊದಲು ಇಂತಹ ಕೃತ್ಯಗಳಲ್ಲಿ ಯಾರು ಭಾಗಿಯಾಗಿದ್ದಾರೆ ಎಂದು ಮೊದಲು ಕಂಡುಹಿಡಿಯಲಾಯಿತು. ನಂತರ ಅವರು ಎಲ್ಲಿ ಹೋಗಿದ್ದರು, ಚಲವಲನ ಸೇರಿದಂತೆ ಇತರೆ ಅಂಶಗಳ ಆಧಾರದ ಮೇಲೆ ವಂಚಕರನ್ನು ಪತ್ತೆ ಹಚ್ಚಲಾಯಿತು.
ಕಾರ್ಯಾಚರಣೆಗೆ ಇಳಿದ ತಂಡದಲ್ಲಿ ಯಾರಿದ್ದರು?
ಸದರಿ ಪ್ರಕರಣದಲ್ಲಿ ಆರೋಪಿತರ ಪತ್ತೆ ಕಾರ್ಯದಲ್ಲಿ ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ವಿಜಯ್ಕುಮಾರ್
ಸಂತೋಷ, ಹೆಚ್ಚುವರಿ ಪೊಲೀಸ್ ಅಧೀಕ್ಷಕ 1, ಜಿ.ಮಂಜುನಾಥ್, ವೃತ್ತ ನಿರೀಕ್ಷಕ ಸುರೇಶ ಸಗರಿ, ಮಂಜುನಾಥ ಎಸ್. ಕುಪ್ಪೇಲೂರು ಪಿ.ಎಸ್.ಐ(ಕಾ&ಸು) ರವರ ನೇತೃತ್ವದಲ್ಲಿ ಮಹದೇವ ಸಿದ್ದಪ್ಪ ಭತ್ತೆ ಪಿ.ಎಸ್.ಐ(ತನಿಖೆ) ಠಾಣೆಯ ಸಿಬ್ಬಂದಿಗಳನ್ನೊಳಗೊಂಡ ತಂಡವು ಪತ್ತೆ ಕಾರ್ಯಚರಣೆ ನಡೆಸಿತ್ತು.ಸದರಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಮೇಲ್ಕಂಡ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳಾದ-ತಿಪ್ಪೇಸ್ವಾಮಿ, ರಮೇಶ ಜಿ.ಎನ್, ನೀಲಮೂರ್ತಿ, ದಾದಾಪೀರ್, ಅನಿಲ ಕುಮಾರ, ಬಸವನಗೌಡ, ಲಿಂಗರಾಜ್. ಕರಿಯಪ್ಪ, ಸತೀಶ್ ಟಿ.ವಿ, ರಿಜ್ವಾನ್ ನಾಸೂರ್, ಗಂಗಾಧರ, ಸುರೇಶ ಉಪ್ಪಾರ, ಪ್ರಸನ್ನಕಾಂತ, ಅನಿಲ್ ಕುಮಾರ್ ನಾಯ್ಕ, ಕಡೇಮನಿ ನಾಗಪ್ಪ, ಅರ್ಜುನ್ ನಂದ್ಯಾಲ, ಸುಶೀಲ ಸಿ.ಎಂ, ನಾಜೀಮಾ, ಶ್ರೀಮತಿ ಪವಿತ್ರ ಹಾಗೂ ಸಿದ್ದಪ್ಪರವರನ್ನೊಳಗೊಂಡ ತಂಡವನ್ನು ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.