ನಂದೀಶ್ ಭದ್ರಾವತಿ , ದಾವಣಗೆರೆ
ಚನ್ನಗಿರಿ ಲಾಕಪ್ ಡೆತ್ ಪ್ರಕರಣ ಸಂಬಂಧಪಟ್ಟಂತೆ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ, ಹೆಡ್ ಕಾನ್ಸಟೇಬಲ್ ರೊಬ್ಬರನ್ನು ಅಮಾನತು ಮಾಡಿದೆ.
ದಾವಣಗೆರೆಯಲ್ಲಿ ಲೇಡಿ ಸಿಂಗಂ ಖ್ಯಾತಿ ಪಡೆದ ಉಮಾಪ್ರಶಾಂತ್ ಕರ್ತವ್ಯ ಲೋಪ ಹಿನ್ನೆಲೆ ಕೆಟಿಜೆ ನಗರ ಹೆಡ್ ಕಾನ್ಸ್ಟೇಬಲ್ ತಿಪ್ಪೇಸ್ವಾಮಿಯವರನ್ನು ಅಮಾನತು ಮಾಡಿದ್ದಾರೆ.
ಕೆಟಿಜೆ ನಗರ ಹೆಡ್ ಕಾನ್ಸಟೇಬಲ್ ಹೆಚ್.ತಿಪ್ಪೇಸ್ವಾಮಿ, ಕೆ.ಟಿ.ಜೆ ನಗರ ಪೊಲೀಸ್ ಠಾಣೆಯಲ್ಲಿ ಠಾಣಾಧಿಕಾರಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಕೆಟಿಜೆ ನಗರ ಠಾಣೆ ಪಿಐ ಗಾಂಜಾ ಸೇವನೆ ಮಾಡಿರುವ ಆರೋಪದ ಮೇಲೆ ನರಸಿಂಹ ಎಂಬುವರನ್ನು ಕರೆ ತಂದಿದ್ದರು.
ವಿಚಾರಣೆ ಮಾಡಿ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿಕೊಡಲು ಠಾಣಾಧಿಕಾರಿಯಾಗಿದ್ದ ಹೆಚ್.ತಿಪ್ಪೇಸ್ವಾಮಿವರ ವಶಕ್ಕೆ ನೀಡಿದ್ದರು. ಈ ಸಂದರ್ಭದಲ್ಲಿ ಹೆಚ್.ತಿಪ್ಪೇಸ್ವಾಮಿ ಸದರಿ ಆಸಾಮಿಯನ್ನು ಅತೀ ಜಾಗ್ರತೆಯಿಂದ ವಶದಲ್ಲಿಟ್ಟುಕೊಳ್ಳಬೇಕಾಗಿತ್ತು. ಆದರೆ ಈ ಬಗ್ಗೆ ನಿರ್ಲಕ್ಷತೆ ತೋರಿ, ಸದರಿ ಆಸಾಮಿಯು ಠಾಣೆಯಿಂದ ತಪ್ಪಿಸಿಕೊಂಡು ಹೋಗಲು ಕಾರಣರಾಗಿದ್ದಾರೆ. ಈ ಮೂಲಕ ಕರ್ತವ್ಯದಲ್ಲಿ ಅತೀವ ನಿರ್ಲಕ್ಷತನ ಮತ್ತು ಬೇಜವಾಬ್ದಾರಿತನ ಪ್ರದರ್ಶಿಸಿರುವುದು ಕಂಡುಬಂದಿದೆ. ಆದ್ದರಿಂದ ಆರೋಪಿ
ಠಾಣೆಯಿಂದ ತಪ್ಪಿಸಿಕೊಂಡು ಹೋಗಲು ಕಾರಣರಾಗುವ ಮೂಲಕ ಸದರಿ ಹೆಚ್.ತಿಪ್ಪೇಸ್ವಾಮಿ ಕರ್ತವ್ಯದಲ್ಲಿ ಅತೀವ ನಿರ್ಲಕ್ಷತನ ಮತ್ತು ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ. ಈ ಸಂದರ್ಭದಲ್ಲಿ ಕೆಟಿಜೆ ನಗರ ಪಿಐ ಸದರಿ ಸಿಹೆಚ್ಸಿ ಶ್ರೀ ಹೆಚ್.ತಿಪ್ಪೇಸ್ವಾಮಿ ರವರ ಮೇಲೆ ಸೂಕ್ತ ಇಲಾಖಾ ಶಿಸ್ತು ಕ್ರಮವನ್ನು ಕೈಗೊಳ್ಳಲು ಎಸ್ಪಿಗೆ ಕೋರಿದ್ದರು. ಈ ವರದಿಯಲ್ಲಿ ಡಿವೈಎಸ್ಪಿ, ನಗರ ಉಪ ವಿಭಾಗ ಸಹ ಪಿಐ ರವರ ಶಿಫಾರಸ್ಸಿನಂತೆ ಸದರಿ ಸಿಹೆಚ್ಸಿ ರವರ ವಿರುದ್ಧ ಕ್ರಮ ಜರುಗಿಸಲು ಕೋರಿದ್ದರು. ಅದರಂತೆ ಎಸ್ಪಿ ಉಮಾ ಪ್ರಶಾಂತ್ ಕರ್ತವ್ಯ ಲೋಪವೆಸಗಿದ ಹೆಚ್.ತಿಪ್ಪೇಸ್ವಾಮಿ, ಹೆಡ್ ಕಾನ್ಸ್ಟೇಬಲ್, ಕೆ.ಟಿ.ಜೆ ನಗರ ಪೊಲೀಸ್ ಠಾಣೆ, ದಾವಣಗೆರೆ ವಿರುದ್ಧ ಈ ಕೆಳಕಂಡ ಆದೇಶವನ್ನು ಹೊರಡಿಸಿರುತ್ತಾರೆ. ಮುಂದಿನ ಇಲಾಖಾ ಶಿಸ್ತು ಕ್ರಮವನ್ನು ಬಾಕಿ ಇರಿಸಿಕೊಂಡು ತಕ್ಷಣದಿಂದಲೇ (ದಿನಾಂಕ : 16-07-2024) ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತಿನಲ್ಲಿ ಇರಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ