ಶಿವಮೊಗ್ಗ : ಪದವೀಧರರಿಗೆ ಗುಂಡು ಪಾರ್ಟಿ ಕೊಡುವ ಮೂಲಕ ಈ ಚುನಾವಣೆಯನ್ನು ಸರ್ಜಿ ಗುಂಡುಪಾರ್ಟಿಯನ್ನಾಗಿ ಬದಲಾಯಿಸಿದ ಅಪಕೀರ್ತಿ ಬಿಜೆಪಿಯ ಅಭ್ಯರ್ಥಿ ಡಾ.ಧನಂಜಯ ಸರ್ಜಿಯವರಿಗೆ ಸೇರುತ್ತದೆ ಎಂದು ರಾಷ್ಟ್ರಭಕ್ತ ಬಳಗದಿಂದ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿದ್ದ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಅವರು ಇಂದು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಚುನಾವಣೆ ಸರ್ಜಿ ಗುಂಡುಪಾರ್ಟಿಯನ್ನಾಗಿ ಬದಲಾಯಿಸಿರುವುದು ಬಿಜೆಪಿ ಪಕ್ಷಕ್ಕೆ ಅವಮಾನ ಮಾಡಿದಂತಾಗಿದೆ. ಇದನ್ನು ಕೇಳಿ ನನಗೆ ಬಹಳ ನೋವಾಗಿದೆ.

ಬಿಜೆಪಿಯಲ್ಲಿದ್ದಾಗ ನಾವು ಯಾರು ಈ ರೀತಿಯ ಅಭ್ಯಾಸವನ್ನು ಇಟ್ಟುಕೊಂಡಿರಲಿಲ್ಲ. ಒಬ್ಬ ವೈದ್ಯರಾಗಿ ಪದವೀಧರರನ್ನು ದುಶ್ಚಟಕೊಳಗಾಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಅವರು ಸುಸಂಸ್ಕೃತ ಕುಟುಂಬದಿಂದ ಬಂದವರಾಗಿ ಕೇವಲ ಚುನಾವಣೆಗೋಸ್ಕರ ಹೀಗೆ ಪ್ರತಿದಿನ ಅಲ್ಲಲ್ಲಿ ಗುಂಡು ಪಾರ್ಟಿಗಳನ್ನು ಮಾಡಿಸಬಾರದಾಗಿತ್ತು ಎಂದರು.

ಹರ್ಷ ಕೊಲೆಯಾದಾಗ ಇದೇ ಧನಂಜಯ ಸರ್ಜಿಯವರು ಒಬ್ಬ ಹಿಂದುವಾಗಿ ಆಕ್ರೋಶವನ್ನು ವ್ಯಕ್ತಪಡಿಸಲಿಲ್ಲ. ಹೋಗಲಿ ಸುಮ್ಮನೆಯೂ ಇರಲಿಲ್ಲ ಶಾಂತಿಗಾಗಿ ನಡೆಗೆ ಮಾಡಿದರು. ಪಕ್ಷಕ್ಕಾಗಿ ಅವರ ಕೊಡುಗೆ ಏನು ಇರಲಿಲ್ಲ. ಹಾಗಾಗಿ ಜಿಲ್ಲೆಯ ಜನರು ಇವರನ್ನು ಒಪ್ಪುವುದಿಲ್ಲ. ಧನಂಜಯ ಸರ್ಜಿಯವರು ಖಂಡಿತ ಸೋಲುತ್ತಾರೆ ಎಂದರು.

ರಘುಪತಿಭಟ್ ಅವರ ಬಗ್ಗೆ ನನಗೆ ಗೌರವ ಹೆಚ್ಚಾಗಿದೆ. ಅವರ ಕ್ಷೇತ್ರದಲ್ಲಿ ಅವರನ್ನು ತುಂಬ ಪ್ರೀತಿಸುತ್ತಾರೆ. ಬನ್ನಿ ಕುಡಿಯಿರಿ, ವೋಟಿ ಹಾಕಿರಿ ಎನ್ನುವ ವ್ಯಕ್ತಿಗಳು ನಮಗೆ ಬೇಕಾಗಿಲ್ಲ. ಕೆಜೆಪಿಯಲ್ಲಿ ಇದ್ದವರು ಮಾತ್ರ ಸರ್ಜಿಯ ಕಡೆ ಇದ್ದಾರೆ ಅಷ್ಟೇ ಉಳಿದ ಎಲ್ಲಾ ಬಿಜೆಪಿ ಕಾರ್ಯಕರ್ತರು ನಮ್ಮ ಜೊತೆಗಿದ್ದಾರೆ ಎಂದರು.

.

Share.
Leave A Reply

Exit mobile version