ಮಂಡ್ಯ : ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಇನ್ನ ಸೌಂಡ್ ಮಾಡಲ್ವಾ.? ಬಿಜೆಪಿ ಟಿಕೆಟ್ ಮಿಸ್ ಆದ ಬೆನ್ನಲ್ಲೆ ಸುಮಲತಾ ಸೈಲೆಂಟ್ ಆಗ್ತಾರಾ..? ಒಳಗೊಳಗೆ ನಡೆದು ಹೋಯ್ತಾ ಆ 1 ಡೀಲ್.? ಸುಮಲತಾ ಅವರ ಮುಂದಿರೋದು ಇದೊಂದೇ ಆಪ್ಷನ್ನಾ.? ಹಾಗಾದ್ರೆ ಏನದು ಆಪ್ಷನ್..?

ಮಂಡ್ಯ ಪಕ್ಷೇತರ ಸಂಸದೆ ಸುಮಲತಾ.. ಇವರು ಹೇಳೋ ಮಾತಿಗೂ, ಕೊಡೋ ಬಿಲ್ಡಪ್​​​ಗೂ ಅಜಗಜಾಂತರ ವ್ಯತ್ಯಾಸ ಇದೆ. ಯಾಕಂದ್ರೆ ಮಂಡ್ಯ ದೋಸ್ತಿ ಟಿಕೆಟ್ ಫೈನಲ್ ಆಗೋವರೆಗೂ ಸುಮಲತಾ ಅವರ ಮಾತುಗಳನ್ನ ಗಮನಿಸಿದ್ರೆ, ಇವರಿಗೆ ಬಿಜೆಪಿ ಟಿಕೆಟ್ ಸಿಕ್ಕಿಲ್ಲ ಅಂದ್ರೆ ಆಕಾಶ-ಭೂಮಿ ಒಂದ್ ಮಾಡಿ ಬಿಡ್ತಾರೆ.. ದಳಪತಿಗಳಿಗೆ ಮತ್ತೆ ನಕ್ಷತ್ರ ತೋರಿಸ್ತಾರೆ ಅಂತಾನೇ ಜನ ಭಾವಿಸಿದ್ರು. ಆದ್ರೀಗ ಮಂಡ್ಯ ಟಿಕೆಟ್ ಜೆಡಿಎಸ್ ಪಾಲಾಗಿ 4-5 ದಿನ ಕಳೆದ್ರೂ ಸುಮಲತಾ ಅವರು ಇನ್ನೂ ಯಾವುದೇ ನಿರ್ಧಾರ ತಗೊಂಡಿಲ್ಲ. ಇದನ್ನ ನೋಡಿದ್ರೆ ಸುಮಲತಾ ಅವರಿಗೆ ಬಿಜೆಪಿಯಿಂದ ಬಿಗ್ ಆಫರ್ ಸಿಕ್ಕಿದೆ. ಹೀಗಾಗಿನೇ ಇವರು ಸೈಲೆಂಟ್ ಆಗಿದ್ದಾರಾ ಅನ್ನೋ ಅನುಮಾನ ವ್ಯಕ್ತವಾಗ್ತಾಯಿದೆ.

ನಿಮಗೆ ಗೊತ್ತಿರ್ಲಿ, ಕಳೆದ 4-5 ದಿನದಿಂದ ಸೈಲೆಂಟ್ ಆಗಿದ್ದ ಸುಮಲತಾ ಅವರು ಇವತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನ ಭೇಟಿ ಮಾಡಿದರು. ಈ ವೇಳೆ ಮಹತ್ವದ ಮಾತುಕತೆ ನಡೆದಿದೆ ಎನ್ನಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಭೇಟಿ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಸಂಸದೆ ಸುಮಲತಾ ಅವರು, ನಾನು ಮಂಡ್ಯ ಬಿಟ್ಟು ಬೇರೆಲ್ಲೂ ಹೋಗುವುದಿಲ್ಲ. ನನ್ನ ಅಸ್ತಿತ್ವ ಮಂಡ್ಯದಲ್ಲಿದೆ. ನನ್ನ ರಾಜಕೀಯ ನಡೆಯನ್ನು ಶೀಘ್ರವೇ ಮಂಡ್ಯದಲ್ಲಿಯೇ ಪ್ರಕಟಿಸಲಿದ್ದೇನೆ ಅಂತೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರೊಂದಿಗೆ ಕೆಲವು ವಿಚಾರ ಚರ್ಚೆ ಆಗಿದೆ. ನಾಳೆ ಮಂಡ್ಯ ಕಾರ್ಯಕರ್ತರ ಸಭೆ ಕರೆದಿದ್ದೇನೆ. ಅವರೊಂದಿಗೆ ಮಾತುಕತೆ ನಡೆಸಿ ಮುಂದಿನ ನನ್ನ ನಿರ್ಧಾರ ಸ್ವಂತ ಕ್ಷೇತ್ರದಲ್ಲಿಯೇ ತಿಳಿಸುತ್ತೇನೆ ಎಂದಿದ್ದಾರೆ. ಇಷ್ಟೇ ಆಗಿದ್ರೆ ಪರ್ವಾಗಿಲ್ಲ ಅಂದ್ಕೋಬಹುದಿತ್ತು. ಕೆಲ ದಿನಗಳ ಹಿಂದೆ ಸುಮಲತಾ ಅವರು ನಮ್ಮ ಅಕ್ಕ ಇದ್ದಂಗೆ ಅಂತೇಳಿ ಮಾಜಿ ಸಿಎಂ ಹೆಚ್​ಡಿಕೆ ಹೇಳಿದ್ರು. ಈಗ ನೋಡಿದ್ರೆ ಸುಮಲತಾ ಅವರು ಕೂಡ ಹೆಚ್‌ಡಿಕೆ ಭೇಟಿಗೆ ನನ್ನ ಆಕ್ಷೇಪಣೆ ಇಲ್ಲ ಅಂತೇಳೋ ಮೂಲಕ. ಹಳೆ ವೈರತ್ವವನ್ನ ಸೈಡಿಗಿಟ್ಟಂತಿದೆ.
ನನ್ನ ಮನೆಗೆ ಯಾರೇ ಬಂದರು ಸ್ವಾಗತ. ಅಂಬರೀಶ್ ಅವರ ಮನೆ ಎಂದಿನಂತೆ ಎಲ್ಲರನ್ನು ಸ್ವಾಗಿಸುತ್ತದೆ. ನಾನು ಸಹ ಎಲ್ಲರೊಂದಿಗೆ ಗೌರವದಿಂದ ನಡೆದುಕೊಳ್ಳುವೆ. ಯಾರೇ ಚರ್ಚೆಗೆ ಬಂದರೂ ಆಕ್ಷೇಪ ಇಲ್ಲ ಅಂತೇಳಿರೋದು ಸುಮತಲಾ ಅವರ ಮುಂದಿನ ನಡೆ ಏನು ಅನ್ನೋದನ್ನ ಸಾರಿ ಸಾರಿ ಹೇಳ್ತಾಯಿದೆ.

ಹಾಗಾದ್ರೆ ಸುಮಲತಾ ಅವರ ಮುಂದಿರೋ ಆಪ್ಷನ್ಸ್ ಏನು ಅಂತ ನೋಡೋದಾದ್ರೆ. ಹೇಗೋ ಮಂಡ್ಯ ಬಿಜೆಪಿ ಟಿಕೆಟ್ ಸಿಕ್ಕಿಲ್ಲ. ಈಗ ಪಕ್ಷೇತರವಾಗಿ ನಿಂತ್ರೆ ಬೆಲೆ ಸಿಗಲ್ಲ. ಗೆಲ್ಲೋದು ಕೂಡ ಅನುಮಾನ. ಹೀಗಾಗಿ ಮಂಡ್ಯ ಅಭಿವೃದ್ಧಿಗಾಗಿ ಜೆಡಿಎಸ್​​ಅನ್ನ ಬೆಂಬಲಿಸುವಂತೆ ಸುಮಲತಾ ಅವರೇ ಮಂಡ್ಯದಲ್ಲಿ ನಿಂತು ಜೆಡಿಎಸ್​​ಗೆ ಬಹಿರಂಗ ಬೆಂಬಲ ಸೂಚಿಸಬಹುದು. ಇಲ್ಲ ಅಂದ್ರೆ ಹೇಗಿದ್ರೂ ಲೋಕಸಭಾ ಚುನಾವಣೆಯ ನಂತರ ಬಿಜೆಪಿ ಮತ್ತು ಜೆಡಿಎಸ್ ದೋಸ್ತಿ ಇರಲ್ಲ. ಹೀಗಾಗಿ ಜೆಡಿಎಸ್​ ಅನ್ನ ಎಷ್ಟು ಡಿಸ್ಟೆನ್ಸ್​ಅಲ್ಲಿ ಇಟ್ರೆ ಅಷ್ಟು ಒಳ್ಳೆದು ಅಂತ ಭಾವಿಸಿ, ಸ್ವಲ್ಪ ದಿನ ರಾಜಕೀಯದಿಂದ ದೂರ ಇರ್ತೀನಿ ಅಂತೇಳಿ ನ್ಯೂಟ್ರಲ್ ಆಗಿರೋ ಸಾಧ್ಯತೆ ಇದೆ.. ಹಾಗೇ ಮಾಡಿದ್ರೆ ಕೆಲ ತಿಂಗಳುಗಳಲ್ಲಿ ಬಿಜೆಪಿ ಹೈಕಮಾಂಡ್ ಸುಮಲತಾ ಅವರಿಗೆ ರಾಜ್ಯಸಭೆಗೆ ನೇಮಕ ಮಾಡಬಹುದು. ಇಲ್ಲವೇ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಹುದ್ದೆ ಕೊಟ್ಟು ಪಕ್ಷ ಸಂಘಟನೆಗೆ ಸೂಚಿಸೋ ಸಾಧ್ಯತೆ ಇದೆ..

ಅದೇನೇ ಇದ್ರೂ ಸುಮಲತಾ ಅವರ ಮುಂದಿರೋ ಬೆಸ್ಟ್ ಆಪ್ಷನ್ ಅಂದ್ರೆ ಯಾರಿಗೂ ಬೆಂಬಲಿಸದೆ ತಟಸ್ಥವಾಗಿರೋದು. ಆದ್ರೆ ಬಿಜೆಪಿ ಹೈಕಮಾಂಡ್​​ ಜೆಡಿಎಸ್​​​ಗೆ ಬೆಂಬಲಿಸುವಂತೆ ಒತ್ತಾಯ ಹೇರಿದ್ರೆ ಒಂದೆರಡು ದಿನ ಜೆಡಿಎಸ್ ಪರ ಪ್ರಚಾರ ನಡೆಸಿದ್ರೂ ಅಚ್ಚರಿಯಿಲ್ಲ.

Share.
Leave A Reply

Exit mobile version