ದಾವಣಗೆರೆ : ಡಿಸಿಸಿ ಬ್ಯಾಂಕ್ ಚುನಾವಣೆ ಸಂಬಂಧ ಬುಧವಾರ ಇಬ್ಬರು ಅಭ್ಯರ್ಥಿಗಳಿಂದ ಮೂರು ನಾಮಪತ್ರಗಳು ಸಲ್ಲಿಕೆಯಾದವು. ಮಧ್ಯಾಹ್ನದ ಮೇಲೆ ಉಮೇದುವಾರಿಕೆ ಸಲ್ಲಿಕೆಯಾಯಿತು.
ಉಮೇದುವಾರಿಕೆಗೆ ಇಂದು ಮೊದಲ ದಿನವಾದ ಕಾರಣ ಹಲವರು ಇಂದು ಕೇವಲ ಅರ್ಜಿ ಮಾತ್ರ ತೆಗೆದುಕೊಂಡರು. ಕೆಲವರು ಅರ್ಜಿ ತುಂಬುವುದು ಹೇಗೆ ಎಂದು ಚುನಾವಣಾಧಿಕಾರಿ ನಜ್ಮಾ ಬಳಿ ತಿಳಿದುಕೊಂಡರು. ಅಲ್ಲದೇ ಯಾವ ದಿನ ನಾಮಪತ್ರ ಸಲ್ಲಿಸಿದರೆ ಒಳ್ಳೆಯದು ಎಂದು ತಮ್ಮ ಸಹಪಾಠಿಗಳ ಬಳಿ ಚರ್ಚೆ ನಡೆಸಿದರು.
ಇಂದು ಇಬ್ಬರು ನಾಮಪತ್ರ ಸಲ್ಲಿಕೆ
ದಾಣಗೆರೆಯ ಡಿಸಿಸಿ ಮಾಜಿ ಅಧ್ಯಕ್ಷ ಪತ್ನಿ ರೇಖಾ ಷಣ್ಮುಖಪ್ಪ ಹಾಗೂ ಚನ್ನಗಿರಿ ಫ್ಯಾಕ್ಸ್ ಕ್ಷೇತ್ರದಿಂದ ಜೆ.ಎನ್ ಸ್ವಾಮಿ ಎರಡು ನಾಮ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ನಜ್ಮಾ, ಪ್ರಮುಖರಾದ ಸುರೇಶ್ ರಾಜಣ್ಣ ಇದ್ದರು.