ನಂದೀಶ್ ಭದ್ರಾವತಿ ದಾವಣಗೆರ
ನಾನು 15 ವರ್ಷ ಸರ್ವೀಸ್ ಮಾಡಿದ್ದೇನೆ, ಕಷ್ಟಪಟ್ಟು ಡಿಗ್ರಿ ಮಾಡಿದ್ದೇನೆ, ಆದರೂ ನನಗೆ ಇನ್ನೂ ಒಂದು ಪ್ರಮೋಷನ್ ಸಿಕ್ಕಿಲ್ಲ…ಆದರೆ , ನಿನ್ನೆ, ಮೊನ್ನೆ ಬಂದ ಜಿಪಿಟಿ ಶಿಕ್ಷಕರಿಗೆ ಬಡ್ತಿ ಸೇರಿದಂತೆ, ವೇತನ, ವರ್ಗಾವಣೆ ಹೀಗೆ ಹತ್ತಾರು ಸೌಲಭ್ಯಗಳು ಸಿಗುತ್ತೀವೆ…ನಾವು ಇನ್ನು ಇದ್ದಲ್ಲಿಯೇ ಇದ್ದೇವೆ..ಯಾವುದೇ ಗೌರವನೂ ಸಿಗುತ್ತಿಲ್ಲ. ನಮಗೆ ಆಗಿರೋ ಅನ್ಯಾಯ ಸರಿಪಡಿಸೋರು ಯಾರು? ಎಂದು ಕಣ್ಣಲ್ಲಿ ನೀರು ಹಾಕುತ್ತಾ, ಶಿಕ್ಷಕಿಯೊಬ್ಬರು ತನ್ನ ಅಸಾಯಕತೆ ವ್ಯಕ್ತಪಡಿಸಿದರು.
ಹೌದು…ಇದು ಕೇವಲ ಒಬ್ಬ ಪಿಎಸ್ಟಿ ಶಿಕ್ಷಕಿ ಕಥೆಯೆಲ್ಲ, ರಾಜ್ಯದಲ್ಲಿನ ಒಂದು ಲಕ್ಷದ ಎಂಭತ್ತು ಸಾವಿರ ಪಿಎಸ್ಟಿ ಶಿಕ್ಷಕರ ಕಥೆ-ವ್ಯಥೆ. ಆದರೆ ಇವರ ಹೋರಾಟಕ್ಕೆ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು ಸೇರಿದಂತೆ ಸ್ವಂತ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷರು ಸಹ ಬೆಂಬಲ ನೀಡುತ್ತಿಲ್ಲ ಎಂಬ ಮಾತು ಸ್ವತಹ ಶಿಕ್ಷಕ ವಲಯದಿಂದ ವ್ಯಕ್ತವಾಗುತ್ತಿದೆ..
2016 ಕ್ಕಿಂತ ಮುಂಚೆ 1-7/8 ಕ್ಕೆ ಸಹ ಶಿಕ್ಷಕರು ಎಂದು ಮೊದಲು ನೇಮಕಗೊಂಡರು. ಬಳಿಕ 20-25 ವರ್ಷಗಳ ಕಾಲ ಸೇವೆ ಮಾಡಿದರು. ಆದರೆ ಸೇವಾನುಭವ ಹೊಂದಿ, ಉನ್ನತ ವ್ಯಾಸಂಗ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರು ಮುಂಬಡ್ತಿ ಪಡೆಯುವ ಬದಲು ಹಿಂಬಡ್ತಿ ಪಡೆದು 1-5 ರ PST ಶಿಕ್ಷಕ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದಾರೆ.
ನ್ಯಾಯ ಕೊಡಿಸದೇ ಸಂಘ ಮೌನವಹಿಸಿರುವುದೇಕೇ?
ಅವಮಾನಿತರಾಗಿ ಈಗ 7 ವರ್ಷಗಳೇ ಕಳೆದಿವೆ..ಇವರಿಗೆ ನ್ಯಾಯ ಕೊಡಿಸದೇ ಸಂಘಗಳು ಜಾಣ ಮೌನಕ್ಕೆ ಶರಣಾಗಿರುವುದು ಏಕೆ ಎಂಬ ಸಂಶಯ ಎಲ್ಲರನ್ನೂ ಕಾಡುತ್ತಿದೆ..?!!. ಒಂದೆಡೆ ಶಿಕ್ಷಕ ಸಂಘದಲ್ಲಿರುವ ನಮ್ಮ ರಾಜ್ಯ ಪದಾಧಿಕಾರಿಗಳು ಕೆಲಬಾರಿ PST ಶಿಕ್ಷಕರಿಗೆ ಬಡ್ತಿ ಕೊಡಿಸುತ್ತೇವೆ ಎನ್ನುತ್ತಾರೆ, ಇನ್ನು ಕೆಲಬಾರಿ ವಿಲೀನ ಮಾಡಿಸುತ್ತೇವೆ ಎನ್ನುತ್ತಾರೆ. ಇವರಲ್ಲಿ ಸ್ಪಷ್ಟತೆ ಇಲ್ಲದಿರುವುದು ವಿಷಾದನೀಯ..ಇನ್ನೂ ಎಷ್ಟು ವರ್ಷಗಳ ಕಾಲ ಈ ಅನ್ಯಾಯವನ್ನು ಸಹಿಸಿಕೊಳ್ಳುವುದು…!!?? ಎಂದು ಹಲವು ಶಿಕ್ಷಕರ ಗೋಳಾಗಿದ್ದು ಪಿಎಸ್ಟಿ ಶಿಕ್ಷಕರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.
ಸಂಘಕ್ಕೆ ಪ್ರಶ್ನೆ ಮಾಡುತ್ತಿಲ್ಲ ಏಕೆ?
ಪ್ರತಿ ತಾಲೂಕಿಗೊಂದು ಪ್ರಾಥಮಿಕ ಶಿಕ್ಷಕ ಸಂಘವಿದ್ದು,ಸಂಘದ ಪ್ರತಿ ತಾಲೂಕು, ಜಿಲ್ಲಾ ಅಧ್ಯಕ್ಷರು ಪದಾಧಿಕಾರಿಗಳು, ನಿರ್ದೇಶಕರು ರಾಜ್ಯ ಸಂಘಕ್ಕೆ ಕೇಳುವ ಮನಸ್ಸು ಯಾಕೆ ಮಾಡುತ್ತಿಲ್ಲ ಅನ್ನೋ ಪ್ರಶ್ನೆ ಎಲ್ಲಾ ಶಿಕ್ಷಕರಲ್ಲಿ ಕಾಡುತ್ತಿದೆ.
ಇನ್ನೊಂದೆಡೆ ಸೇವಾನಿರತ ಪದವೀಧರ ಶಿಕ್ಷಕ ಸಂಘದವರು ಬಡ್ತಿ ಕೊಡಿಸುವ ತರಾತುರಿಯಲ್ಲಿ ಶಿಕ್ಷಕರಿಗೆ ಅನ್ಯಾಯವಾಗುತ್ತದೆ ಎಂದು ಗೊತ್ತಿದ್ದರೂ ತಮ್ಮ ಪ್ರತಿಷ್ಠೆಯನ್ನು ಬಿಟ್ಟು ಹೊರಬರುತ್ತಿಲ್ಲ..ಇವರ ಮಧ್ಯೆ PST ಶಿಕ್ಷಕರು ಬಲಿಪಶುಗಳಾಗಿ ಗೊಂದಲಕ್ಕೆ ಸಿಲುಕಿದ್ದಾರೆ..ಒಟ್ಟಾರೆ ಪಿಎಸ್ಟಿ ಶಿಕ್ಷಕರಿಗೆ ಸರಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷರು, ಪ್ರಾಥಮಿಕ ಸಂಘದ ರಾಜ್ಯಾಧ್ಯಕ್ಷರು ಕೂಡ ಇವರ ಅಳಲು ಕೇಳುತ್ತಿಲ್ಲ.
ಇವರಿಗೆ ನ್ಯಾಯ ಕೊಡಿಸಲು ಸಾಧ್ಯವಾಗದೆ ಇದ್ದರೆ ನ ಸಂಘದ ಪದಾಧಿಕಾರಿಗಳು ಆಗಲು ಏನು ನೈತಿಕತೆ ಇದೆ. ರಾಜೀನಾಮೆ ಕೊಟ್ಟು ಬೀದಿಗಿಳಿದು ಹೋರಾಟಕ್ಕೆ ಸಜ್ಜಾಗಿ,,,,,, PST ಶಿಕ್ಷಕರಿಗೆ ನ್ಯಾಯ ಒದಗಿಸಿ ಎಂದು ಪಿಎಸ್ಟಿ ಶಿಕ್ಷಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.
GPT ಗೆ ಬಡ್ತಿ ಕೊಟ್ಟರೆ ಆಗುವ ತೊಂದರೆಗಳು
- 1. ಬಡ್ತಿ ಪಡೆದರೆ ಮುಂದಿನ ಯಾವುದೇ Time bond ಗಳು ಸಿಗುವುದಿಲ್ಲ
- 2. ಬಡ್ತಿ ನಿರಾಕರಣೆ ಮಾಡುವಂತಿಲ್ಲ, ಮಾಡಿದರೆ ಮುಂದಿನ ಸೌಲಭ್ಯಗಳು ಸಿಗುವುದಿಲ್ಲ.
- 3. GPT ಶಿಕ್ಷಕರಿಗೆ ಜೂನಿಯರ್ ಆಗುತ್ತೇವೆ ಎಂಬ ಭೀತಿ
- 5. High School ಬಡ್ತಿ ಸಿಗುವುದಿಲ್ಲ
- 6.HM ಬಡ್ತಿ ಸಿಗುವುದಿಲ್ಲ
- 7. ITC,TCH ಮುಗಿಸಿದವರು GPT ಹುದ್ದೆಗೆ ಅರ್ಹರಲ್ಲ ಎಂಬ ವಾದ
ಪಿಎಸ್ಟಿ ಶಿಕ್ಷಕರಿಗೆ ಆಗುತ್ತಿರುವ ತೊಂದರೆ
1. ಹೈ ಸ್ಕೂಲ್ ಬಡ್ತಿ.. ???..!
2. ಹೆಡ್ ಮಾಸ್ಟರ್ ಬಡ್ತಿ … ???…!
3. ಟ್ರಾನ್ಸಫರ್ ನಲ್ಲಿ ಅವಕಾಶ ..???..!
4. ಹೆಚ್ಚುವರಿ ಆಯ್ತು!???..!
5. ವರ್ಗಾವಣೆ ಸಿಗುತ್ತಿಲ್ಲ?
ವಿಲೀನಕರಣ ಮಾಡಲು ಒತ್ತಾಯ
2016 ಕ್ಕಿಂತ ಮುಂಚೆ 1-7/8 ನೇ ತರಗತಿಗಳಿಗೆ ಸಹ ಶಿಕ್ಷಕ ಎಂದು ನೇಮಕವಾಗಿದ್ದ ಸುಮಾರು ಎಂಭತ್ತು ಸಾವಿರ ಶಿಕ್ಷಕರು BA, B Ed, MA, MSc, M Phil, Ph D ನಂತಹ ಉನ್ನತ ವಿದ್ಯಾರ್ಹತೆ ಹೊಂದಿದ್ದಾರೆ. ಅದರಲ್ಲೂ 6ರಿಂದ8 ನೇ ತರಗತಿಗಳಿಗೆ ನಿರಂತರವಾಗಿ 20-25 ವರ್ಷಗಳಿಂದ ಬೋಧನೆ ಮಾಡುತ್ತಿದ್ದಾರೆ. ಅದರಲ್ಲೂ NCTE ನಿಗದಿಪಡಿಸಿರುವುದಕ್ಕಿಂತಲೂ ಹೆಚ್ಚಿನ ವಿದ್ಯಾರ್ಹತೆ ಮತ್ತು ಬೋಧನಾ ಅನುಭವ ಹೊಂದಿದ PST ಶಿಕ್ಷಕರನ್ನು GPT ವೃಂದದಲ್ಲಿ ಸೇವಾಜೇಷ್ಠತೆಯೊಂದಿಗೆ ವಿಲೀನಕ್ಕೆ ,ಪದನಾಮೀಕರಣಕ್ಕೆ ಒತ್ತಾಯ ಕೇಳಿ ಬರುತ್ತಿದೆ.
.