ದಾವಣಗೆರೆ :  ರಾಜ್ಯ ಬಿಜೆಪಿಯ ಆ ಒಂದು ಬಿಗ್ ವಿಕೆಟ್ ಪತನವಾಗೋ ಎಲ್ಲಾ ಸಾಧ್ಯತೆ ಇದೆ. ಈಗಾಗ್ಲೇ ಆ ನಾಯಕನ ಜೊತೆ ಕಾಂಗ್ರೆಸ್ ನಾಯಕರು ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆದ್ರೆ ಆ ನಾಯಕ ಯಾವಾಗ ಕಾಂಗ್ರೆಸ್ ಸೇರ್ತಾರೆ ಅನ್ನೋ ಮುಹೂರ್ತ ಒಂದು ನಿಗಧಿಯಾಗಿಲ್ಲ. 

ಹೀಗಂಥ ನಾವು ಹೇಳ್ತಾಯಿಲ್ಲ.. ಸಚಿವ ಚೆಲುವರಾಯಸ್ವಾಮಿ ಅವರೇ ಹೇಳ್ತಾಯಿದ್ದಾರೆ.  ಹಾಗಾದ್ರೆ ಬಿಜೆಪಿ ನಾಯಕನ ಸೇರ್ಪಡೆಯಿಂದ ಮಂಡ್ಯದಲ್ಲಿ ಈ ಸಲ ಕಮಲ ದಳ ನಾಯಕರಿಗೆ ಕೈ ನಾಯಕರು ಹರರ್ ಪಿಕ್ಚರ್ ತೋರಿಸ್ತಾರಾ.? ಮಂಡ್ಯದಿಂದ ನಿಖಿಲ್ಲೇ ನಿಲ್ಲಲಿ, ಅಥವಾ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿಯವರೇ ನಿಲ್ಲಲಿ.., ಕಾಂಗ್ರೆಸ್ ನಾಯಕರು ಮಂಡ್ಯವನ್ನ ಬಿಟ್ಟು ಕೊಡೋ ಸೀನೇ ಇಲ್ಲ ಅಂತಿದ್ದಾರೆ. ವೆಂಕಟರಮಣೇಗೌಡ ಅಲಿಯಾಸ್ ಸ್ಟಾರ್ ಚಂದ್ರು ಗೆಲುವು ಶತಸಿದ್ಧಅಂತೇಳುತ್ತಿದ್ದಾರೆ.ಹಾಗಾದ್ರೆ ರಾಜ್ಯ ಬಿಜೆಪಿಯ ಬಿಗ್ ವಿಕೆಟ್ ಪತನಕ್ಕೂ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಗೆಲುವಿಗೂ ಏನ್ ಸಂಬಂಧ ಅಂದ್ರಾ?

ಮಂಡ್ಯದಿಂದ ಸುಮಲತಾ ಅವರಿಗೆ ಟಿಕೆಟ್ ಕೈ ತಪ್ಪಿಸಿ ಜೆಡಿಎಸ್​ ಪಡೆದುಕೊಂಡಿದೆ. ಅಷ್ಟೇ ಅಲ್ಲ., ಈ ಕ್ಷೇತ್ರದಿಂದ ಖುದ್ದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿಯವರೇ ನಿಲ್ಲಬೇಕು ಅನ್ನೋ ಮಾತುಗಳು ಜೆಡಿಎಸ್ ವಲಯದಲ್ಲಿ ಕೇಳಿಬರ್ತಾಯಿವೆ. ಇತ್ತ ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅವರಿಗೆ ಬಿಜೆಪಿ ಹೈಕಮಾಂಡ್ ಅದೇನ್ ಆಫರ್ ಕೊಟ್ಟಿದ್ಯೋ ಗೊತ್ತಿಲ್ಲ. ಆದ್ರೆ ಸುಮಲತಾ ಸದ್ಯ ಸೈಲೆಂಟ್ ಆಗಿದ್ದಾರೆ.  ಆದ್ರೆ ಮತ್ತೊಂದು ಕಡೆ ಬಿಜೆಪಿ ನಾಯಕರು ಸುಮಲತಾ ಅವರಿಗೆ ಉತ್ತಮ ರಾಜಕೀಯ ಭವಿಷ್ಯ ಇದೆ ಅಂತಿದ್ದಾರೆ. ಅಂದ್ರೆ ಸುಮಲತಾ ಅವರನ್ನ ರಾಜ್ಯಸಭಾ ಮೆಂಬರ್ ಮಾಡೋ ಪ್ಲ್ಯಾನ್ ನಡೆದಿದೆಯಾ ಅನ್ನೋ ಅನುಮಾನಗಳು ವ್ಯಕ್ತವಾಗ್ತಾಯಿವೆ.

ಇಲ್ಲಿ ಗಮನಿಸಬೇಕಾದ ಅಂಶ ಏನಂದ್ರೆ ನಾನು ರಾಜಕೀಯ ಮಾಡೋದಾದ್ರೆ ಮಂಡ್ಯದಿಂದ್ಲೇ. ಮಂಡ್ಯ ಬಿಟ್ಟು ಬೇರೆ ಎಲ್ಲೂ ಸ್ಪರ್ಧೆ ಮಾಡಲ್ಲ ಅಂತಿದ್ದ ಸುಮಲತಾ ಅವರು ರಾಜ್ಯಸಭಾ ಮೆಂಬರ್ ಮಾಡ್ತೀವಿ ಅಂತೇಳಿದ್ರೆ ಓಕೆ ಅಂತಾರಾ.? ಹಾಗೇನಾದ್ರೂ ಓಕೆ ಅಂದ್ರೆ ಸುಮಲತಾ ಅವರದ್ದು ಸ್ವಾರ್ಥ ರಾಜಕಾರಣ ಆಗೋದಿಲ್ವಾ..? ಇನ್ನ ಇತ್ತ ಮಂಡ್ಯ ಅಖಾಡ ಜೆಡಿಎಸ್ ಪಾಲಾಗುತ್ತಿದ್ದಂತೆ ಈ ಹಿಂದೆ ಸುಮಲತಾ ಅವರ ವಿರುದ್ಧ ಬಾಯಿಗೆ ಬಂದಂಗೆ ವಾಗ್ದಾಳಿ ನಡೆಸಿದ್ದ ಹೆಚ್​ಡಿ ಕುಮಾರಸ್ವಾಮಿ ಈಗ ಸುಮಲತಾ ನಮ್ಮ ಅಕ್ಕ ಇದ್ದಂಗೆ ಅಂತೇಳುತ್ತಿದ್ದಾರೆ. ಆ ಮೂಲಕ ಮಂಡ್ಯದಲ್ಲಿ ಸುಮಲತಾ ಅವರಿಂದ್ಲೇ ಜೆಡಿಎಸ್​​​ಗೆ ಪ್ರಚಾರ ಮಾಡಿಕೊಳ್ಳೋ ರಣತಂತ್ರ ಹೆಣೆಯುತ್ತಿದ್ದಾರೆ. 

ಇದೆಲ್ಲ ಒಂದು ಕಡೆಯಾದ್ರೆ ಮಂಡ್ಯದಲ್ಲಿ ಜೆಡಿಎಸ್​ ಸ್ಟ್ರಾಂಗ್ ಆದ್ರೆ ಸುಮಲತಾ ಆಪ್ತ ವಲಯ ಮತ್ತು ಕಾಂಗ್ರೆಸ್​ ಪರ ಇದ್ದ ಕೆಲ ಸ್ಥಳೀಯ ಬಿಜೆಪಿ ನಾಯಕರ ಪಾಡೇನು ಅನ್ನೋ ಮಾತುಗಳು ದಟ್ಟವಾಗುತ್ತಿವೆ. ಹೀಗಾಗಿ ಆ ಓರ್ವ ಪ್ರಭಾವಿ ಬಿಜೆಪಿ ಮುಖಂಡ ಇದೀಗ ಕಾಂಗ್ರೆಸ್ ಕದ ತಟ್ಟಿದ್ದಾರೆ. ಯಾವುದೇ ಕ್ಷಣದಲ್ಲಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರೋದು ಗ್ಯಾರಂಟಿ.. ಹೀಗಂಥ ಸಚಿವ ಚಲುವರಾಯಸ್ವಾಮಿ ಹೇಳಿರೋದು ಇದೀಗ ಮಂಡ್ಯ ಅಖಾಡದಲ್ಲಿ ಹೊಸ ಲೆಕ್ಕಾಚಾರ ತೆರೆದುಕೊಳ್ಳುವಂತೆ ಮಾಡಿದೆ.

ಅಷ್ಟಕ್ಕೂ ಯಾರು ಆ ನಾಯಕ ಅಂದ್ರಾ.? ಅವರು ಬೇರ್ಯಾರೂ ಅಲ್ಲ., ಮಾಜಿ ಸಚಿವ ಕೆ.ಸಿ ನಾರಾಯಣಗೌಡ. ಕೆ.ಸಿ ನಾರಾಯಣಗೌಡ್ರು ಸೇರಿದಂತೆ ಮಂಡ್ಯ ಜಿಲ್ಲೆಯ ಕೆಲ ಬಿಜೆಪಿ ಮುಖಂಡರು, ದಿವಂಗತ ಅಂಬರೀಷ್ ಅಭಿಮಾನಿಗಳು ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ. ಅವರು ಈಗಾಗಲೆ ರಾಜ್ಯ ಕಾಂಗ್ರೆಸ್​​ನ ಪ್ರಭಾವಿ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. 

ಯಾವಾಗ ಬೇಕಾದ್ರೂ ಕಾಂಗ್ರೆಸ್ ಸೇರಲಿದ್ದಾರೆ. ನಿಮಗೆ ಗೊತ್ತಿರ್ಲಿ, ಜೆಡಿಎಸ್​ನಲ್ಲಿದ್ದ ಕೆ.ಸಿ ನಾರಾಯಣಗೌಡ್ರು 2019ರಲ್ಲಿ ಆಪರೇಷನ್ ಕಮಲಕ್ಕೆ ಸಿಲುಕಿ ಬಿಜೆಪಿಗೆ ಸೇರಿ ಮಂತ್ರಿಯೂ ಆಗಿದ್ರು. ಆದ್ರೆ 2023ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದಾರೆ.. ಹೀಗಾಗಿ ಬಿಜೆಪಿಯಲ್ಲಿ ಸೈಡ್​ಲೈನ್ ಆಗಿದ್ದಾರೆ. ಇವರು ಇನ್ನೂ ಬಿಜೆಪಿಯಲ್ಲೇ ಇದ್ರೆ ಮಂಡ್ಯದಲ್ಲಿ ಒಂದೊಮ್ಮೆ ಜೆಡಿಎಸ್​ ಸ್ಟ್ರಾಂಗ್ ಆದ್ರೆ ಇವರ ರಾಜಕೀಯ ಭವಿಷ್ಯಕ್ಕೆ ಕುತ್ತು ಬರಲಿದೆ. ಹೀಗಾಗಿ ಯಾವುದೇ ಷರತ್ತನ್ನ ವಿಧಿಸದೆ ತಮ್ಮ ಆಪ್ತರ ಜೊತೆ ಕಾಂಗ್ರೆಸ್ ಸೇರೋಕೆ ಸಿದ್ಧವಾಗಿದ್ದಾರೆ. ಅಷ್ಟೇ ಅಲ್ಲ, ಮಂಡ್ಯದಿಂದ ಜೆಡಿಎಸ್​ನ ಅಭ್ಯರ್ಥಿ ಯಾರೇ ನಿಲ್ಲಲಿ ಅವರನ್ನ ಸೋಲಿಸೋಕೆ ಈಗಾಗ್ಲೇ ಕೆಸಿ ನಾರಾಯಣಗೌಡ, ಚೆಲುವರಾಯಸ್ವಾಮಿ ಸೇರಿದಂತೆ ಹಲವು ಮುಖಂಡರು ರಣತಂತ್ರ ಹೆಣೆದಿದ್ದಾರೆ.

ಇನ್ನ ಮಂಡ್ಯದಲ್ಲಿ ಈ ಸಲ ಸುಮಲತಾ ಜೆಡಿಎಸ್​​ಗೆ ಸೆಡ್ಡು ಹೊಡೆದು ಪಕ್ಷೇತರವಾಗಿ ನಿಂತ್ರೂ ಕಾಂಗ್ರೆಸ್​​ಗೆ ಲಾಭವಾಗುತ್ತೆ. ಇಲ್ಲ, ಸುಮಲತಾ ಸೈಲೆಂಟ್ ಆಗಿದ್ರೂ ಕಾಂಗ್ರೆಸ್​​ಗೆ ಸಿಂಹ ಬಲ ಬರೋದು ಗ್ಯಾರಂಟಿ.. ಹೀಗಾಗಿ ಮಂಡ್ಯದಿಂದ ನಿಖಿಲ್ಲೇ ನಿಲ್ಲಲಿ, ಅವರ ತಂದೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿಯವರೇ ನಿಲ್ಲಲಿ ಸೋಲಿಸೋದು ಶತ ಸಿದ್ಧ ಅಂತೇಳಿ ಮಂಡ್ಯ ಕಾಂಗ್ರೆಸ್ ನಾಯಕರು ಹೇಳ್ತಾಯಿದ್ದಾರೆ. ಹಾಗಾದ್ರೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಈ ಸಲ ಗೆಲ್ಲೋದ್ಯಾರು ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರಾ? ಅಥವಾ ಜೆಡಿಎಸ್ ಅಭ್ಯರ್ಥಿಯಾ?

Share.
Leave A Reply

Exit mobile version