ನಂದೀಶ್ ಭದ್ರಾವತಿ, ದಾವಣಗೆರೆ
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅಧಿಕಾರವಹಿಸಿ ನೂರು ದಿನ ಕಳೆದಿದ್ದು, ಸಾಕಷ್ಟು ಬದಲಾವಣೆಯಾಗಿದೆ. ಅದರಲ್ಲೂ ಯುವಕರಿಗೆ ಆದ್ಯತೆ ನೀಡುವ ಅವರು ನಾಯಕ ಸಮಾಜದ ಮತಗಳನ್ನು ಬಿಜೆಪಿಯತ್ತ ಸೆಳೆಯಲು ಈಗ ದಾವಣಗೆರೆ ಬಿಜೆಪಿ ಪ್ರಭಾವಿ ನಾಯಕ ಶ್ರೀನಿವಾಸ ದಾಸಕರಿಯಪ್ಪರನ್ನು ರಾಜ್ಯ ಎಸ್ ಟಿ ಮೋರ್ಚಾ ಉಪಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ.
ದಾವಣಗೆರೆ ಬಿಜೆಪಿಯಲ್ಲಿ ತನ್ನದೇ ಆದ ಸ್ಥಾನ ಪಡೆದಿರುವ ಶ್ರೀನಿವಾಸ ದಾಸಕರಿಯಪ್ಪ ಕಮಲಪಾಳಯದಲ್ಲಿ ತನ್ನದೇ ಆದ ಪ್ರಭಾವ ಹೊಂದಿದ್ದಾರೆ. ಜಿಲ್ಲೆಯಲ್ಲಿ ಯುವ ಪಡೆಯನ್ನೇ ಹೊಂದಿರುವ ಶ್ರೀನಿವಾಸ ದಾಸಕರಿಯಪ್ಪ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ಸಮಾಜದ ಮತಗಳನ್ನು ಸೆಳೆಯಲು ಆಯಾ ಸಮಾಜದ ಪ್ರಭಾವಿ ನಾಯಕರಿಗೆ ಮಣೆ ಹಾಕಲಾಗುತ್ತಿದೆ. ಈ ಕಾರಣದಿಂದ ಶ್ರೀನಿವಾಸ ದಾಸಕರಿಯಪ್ಪರಿಗೆ ರಾಜ್ಯ ಎಸ್ ಟಿ ಮೋರ್ಚಾ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಶ್ರೀನಿವಾಸ ದಾಸಕರಿಯಪ್ಪರಿಗೆ ಎಸ್ ಟಿ ಉಪಾಧ್ಯಕ್ಷರಾಗಿ ನೇಮಕ , ಉಪಯೋಗ ಏನು?
ಶ್ರೀನಿವಾಸ ದಾಸಕರಿಯಪ್ಪರಿಗೆ ಎಸ್ ಟಿ ಉಪಾಧ್ಯಕ್ಷರಾಗಿ ನೇಮಕ ಮಾಡಿರುವುದರಿಂದ ನಾಯಕ ಸಮಾಜದ ಮತಗಳು ಬಿಜೆಪಿಗೆ ಹೆಚ್ಚು ಬೀಳಲಿದೆ. ಅಲ್ಲದೇ ಜಗಳೂರು, ಚಿತ್ರದುರ್ಗ, ರಾಯಚೂರು, ಬಳ್ಳಾರಿ, ಕೊಪ್ಪಳ ಸೇರಿದಂತೆ ನಾನಾ ಕಡೆ ಹೆಚ್ಚು ನಾಯಕ ಸಮಾಜದವರು ಇದ್ದು, ಆ ಮತಗಳು ಬಿಜೆಪಿಗೆ ಬೀಳಲು ಇವರಿಗೆ ಉನ್ನತ ಹುದ್ದೆ ನೀಡಲಾಗಿದೆ. ಅಲ್ಲದೇ ಅಲ್ಲಿನ ನಾಯಕ ಸಮಾಜದ ಮತಗಳನ್ನು ಸೆಳೆದು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸುವ ಜವಾಬ್ದಾರಿಯನ್ನು ಶ್ರೀನಿವಾಸ ದಾಸಕರಿಯಪ್ಪರಿಗೆ ನೀಡಲಾಗಿದೆ. ಅದರಂತೆ ಶ್ರೀನಿವಾಸ ದಾಸಕರಿಯಪ್ಪ ಬಿಜೆಪಿ ಪರ ಕ್ಯಾಂಪೆನ್ ಮಾಡಿ ಅಧಿಕಾರಕ್ಕೆ ತರುವ ಜವಾಬ್ದಾರಿ ಹೊತ್ತಿದ್ದಾರೆ.
ವೈಯಕ್ತಿಕ ವರ್ಚಸ್ಸು
ದಾವಣಗೆರೆ ಜಿಲ್ಲೆಯಲ್ಲಿ ಶ್ರೀನಿವಾಸ ದಾಸಕರಿಯಪ್ಪರಿಗೆ ವೈಯಕ್ತಿಕ ವರ್ಚಸ್ಸು ಇದೆ. ದಾವಣಗೆರೆ ದಕ್ಷಿಣ ಸೇರಿದಂತೆ ಅನೇಕ ಕಡೆ ತನ್ನದೇ ಆದ ಹೆಸರನ್ನು ಶ್ರೀನಿವಾಸ ದಾಸಕರಿಯಪ್ಪ ಪಡೆದುಕೊಂಡಿದ್ದಾರೆ. ಅವರ ನಾಮಬಲದ ಮೇಲೆ ಬಿಜೆಪಿಗೆ ಸಾಕಷ್ಟು ಮತಗಳು ಬೀಳಲಿವೆ.
ಲೋಕಸಭೆ ಚುನಾವಣೆ ಟಾರ್ಗೇಟ್
ಲೋಕಸಭೆ ಚುನಾವಣೆ, ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆ ಬರುತ್ತಿರುವ ಹಿನ್ನೆಲೆ ಸಮರ್ಥ ನಾಯಕನನ್ನು ಹುಡುಕಲು ಬಿಜೆಪಿ ಹೊರಟಿದ್ದು, ಶ್ರೀನಿವಾಸ ದಾಸಕರಿಯಪ್ಪರನ್ನು ಆಯ್ಕೆ ಮಾಡಿದೆ. ಇನ್ನು ದಾವಣಗೆರೆಯಲ್ಲಿ ನಾಲ್ಕು ಬಾರಿ ಲೋಕಸಭೆ ಗೆದ್ದಿರುವ ಬಿಜೆಪಿ ಈ ಬಾರಿಯೂ ಗೆಲುವಿನ ನಾಗಲೋಟ ಮುಂದುವರೆಸಲು ಉತ್ತಮ ಆಯ್ಕೆ ನಡೆದಿದೆ.
ಜಿಲ್ಲಾಧ್ಯಕ್ಷ, ಎಂಎಲ್ ಎ ಟಿಕೆಟ್ ಸಿಕ್ಕಿರಲಿಲ್ಲ
ಸುಮಾರು ಹತ್ತು ವರ್ಷಗಳ ಕಾಲ ಬಿಜೆಪಿಯಲ್ಲಿ ಸೇವೆ ಸಲ್ಲಿರುವ ಶ್ರೀನಿವಾಸ ದಾಸಕರಿಯಪ್ಪ ದಾವಣಗೆರೆ ದಕ್ಷಿಣ ಕ್ಷೇತ್ರದ ಎಂಎಲ್ ಎ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ಸಿಕ್ಕಿರಲಿಲ್ಲ. ನಂತರ ದಾವಣಗೆರೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಆಕಾಂಕ್ಷಿಯಾಗಿದ್ದರು ಆಗಲೂ ಸ್ಥಾನ ಸಿಕ್ಕಿರಲಿಲ್ಲ. ಈಗ ರಾಜ್ಯ ಎಸ್ ಟಿ ಮೋರ್ಚಾ ಉಪಾಧ್ಯಕ್ಷರಾಗಿ ಶ್ರೀನಿವಾಸ ದಾಸಕರಿಯಪ್ಪ ನೇಮಕ ಮಾಡಲಾಗಿದ್ದು, ಜವಾಬ್ದಾರಿ ಹೆಚ್ಚಿದೆ.
ಪಕ್ಷದ ನಿಷ್ಠಾವಂತ ಕಾರ್ಯಕರ್ತ
ಶ್ರೀನಿವಾಸ ದಾಸ ಕರಿಯಪ್ಪ ಬಿಜೆಪಿ ಉಪಾಧ್ಯಕ್ಷರಾಗಿ ಕೆಲಸ ಮಾಡಿರುವ ಅನುಭವವಿದೆ. ಅಲ್ಲದೇ ಬಿಜೆಪಿ ನಿಷ್ಠಾವಂತ ಕಾರ್ಯಕರ್ತನಾಗಿದ್ದಾರೆ. ಪಕ್ಷದಲ್ಲಿ ಏನೇ ಬಿರುಕು ಇದ್ದರೂ ಬಹಿರಂಗವಾಗಿ ಎಲ್ಲಿಯೂ ಹೇಳಿಕೆ ನೀಡಿಲ್ಲ ಪಕ್ಷದ ಆತಂರಿಕ ಸಮಸ್ಯೆಗಳನ್ನು ಪಕ್ಷದಲ್ಲಿಯೇ ನಿವಾರಣೆ ಮಾಡಿಕೊಳ್ಳುವ ಗುಣ ಹೊಂದಿದ್ದಾರೆ.
ಕಾಲ ಕಾಲಕ್ಕೆ ವಿರೋಧಪಕ್ಷಕ್ಕೆ ಸೈಲೈಂಟ್ ಆಗಿ ಉತ್ತರ
ಶ್ರೀನಿವಾಸ ದಾಸಕರಿಯಪ್ಪ ಮಾತು ಕಡಿಮೆ, ಕೆಲಸ ಜಾಸ್ತಿ ಮಾಡುತ್ತಾರೆ. ಅಲ್ಲದೇ ವಿರೋಧ ಪಕ್ಷಗಳು ನೀಡುವ ಆರೋಪಗಳಿಗೆ ಸೈಲೈಂಟ್ ಆಗಿ ಕೌಂಟರ್ ಕೊಡುತ್ತಾರೆ. ಯಾವುದೇ ಪರಿಸ್ಥಿತಿಯಲ್ಲಿ ಜಗ್ಗೋದಿಲ್ಲ. ಅಲ್ಲದೇ ರಾಜಕೀಯ ಚಾಣುಕ್ಯ ಸಹ ಇವರಾಗಿದ್ದಾರೆ. ಒಟ್ಟಾರೆ ದಾವಣಗೆರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಶ್ರೀನಿವಾಸ ದಾಸಕರಿಯಪ್ಪರಿಗೆ ಉತ್ತಮ ಸ್ಥಾನವನ್ನು ಬಿಜೆಪಿ ನೀಡಿದ್ದು ಮುಂದಿನ ದಿನಗಳಲ್ಲಿ ಅವರ ಕಾರ್ಯ ವೈಖರಿ ಹೇಗಿರುತ್ತದೆ ಎಂದು ಕಾದು ನೋಡಬೇಕು.