ದಾವಣಗೆರೆ : ದಾವಣಗೆರೆಯಲ್ಲಿ ಎಸ್ಪಿಯಾಗಿದ್ದ ಸಿಬಿ ರಿಷ್ಯಂತ್ ದೇವನಗರಿ ಬಿಟ್ಟು ಹೋದ್ರು, ಅವರನ್ನು ಅವರ ಸಿಬ್ಬಂದಿಗಳು ಅವರನ್ನು ಮರೆತಿಲ್ಲ. ಒಬ್ಬ ಅಧಿಕಾರಿ ತಾನು ಮಾಡುವ ಕೆಲಸ, ಪ್ರಾಮಾಣಿಕತೆ, ಜನರ ಪ್ರೀತಿ, ಕಾನೂನು ಪಾಲನೆ ಜತೆಗೆ ಒಂದಿಷ್ಟು ಮಾನವೀಯತೆ ಇದ್ದರೇ ಎಲ್ಲಿ ಹೋದ್ರು ಮರೆಯೋದಿಲ್ಲ ಎಂಬುದಕ್ಕೆ ದಾವಣಗೆರೆ ಪೊಲೀಸರೇ ಸಾಕ್ಷಿ. ಎಸ್ಪಿ ರಿಷ್ಯಂತ್ ಗೆ ಸಿಬ್ಬಂದಿಗಳ ಮೇಲೆ ಪ್ರೀತಿ ಇದ್ದ ಕಾರಣ ಅವರ ಸಿಬ್ಬಂದಿಗಳು ನೆನಸಿಕೊಳ್ಳುತ್ತಾರೆ. ಈ ಪ್ರೀತಿ ವ್ಯಕ್ತಪಡಿಸಲು ಸಿಬ್ಬಂದಿಗಳಿಗೆದಾವಣಗೆರೆ ವಿಜಯ ಒಂದು ವೇದಿಕೆ ಕಲ್ಪಿಸಿಕೊಟ್ಟಿತ್ತು..ಅಲ್ಲದೇ ಇಂದು ಅವರ ವಿವಾಹ ವಾರ್ಷಿಕೋತ್ಸವ ಇದ್ದ ಕಾರಣ ಅವರ ಆಪ್ತರು, ಪ್ರೀತಿಪಾತ್ರರು ಅವರಿಗೆ ಅನಿಸಿರುವ ಮನದಾಳದ ಮಾತನ್ನು ಕಳುಹಿಸಿಕೊಟ್ಟರು.ಅದರಲ್ಲಿ ಆಯ್ದ ಕೆಲ ತುಣಕಗಳು ನಿಮ್ಮ ಮುಂದೆ…..ಹಾಗಾದ್ರೆ ಅವರು ಹೇಳಿದ್ದೇನು…ತಪ್ಪದೇ ಓದಿ.

ರಿಷ್ಯಂತ್ ಸರ್ ಹಾಗೂ ಭಾರತೀ ಮೇಡಂ ಉತ್ತಮ ಜೋಡಿಯಾಗಿದ್ದು, ಮಹಾನ್ ಸಹಾನುಭೂತಿ, ಕಾಳಜಿಯುಳ್ಳ ಸ್ವಭಾವ ಮತ್ತು ಜನರೊಂದಿಗೆ ಬೆರೆಯುವ ಉತ್ತಮ ದಂಪತಿಗಳು. ಇವರಿಬ್ಬರ ಜೀವನ ಸುಖಕರವಾಗಿರಲಿ ಎಂದು ಹಾರೈಸುತ್ತೇನೆ

ಬಿ.ಎಸ್.ಬಸವರಾಜ್, ಡಿಎಸ್ಪಿ

ರಿಷ್ಯಂತ್ ಸರ್ ಒಬ್ಬ ಮಾನವೀಯತೆ ಅಧಿಕಾರಿಯಾಗಿದ್ದು, ಆಡಳಿತದಲ್ಲಿ ಕಟ್ಟು ಬದ್ದ ಅಧಿಕಾರಿಯಾಗಿದ್ದರು. ಹಾಗೇಯೇ ಅವರು ವೈಯಕ್ತಿಕ ಜೀವನದಲ್ಲಿಯೂ ತಮ್ಮದೇ ಆದ ವೈಶಿಷ್ಟ್ಯ ತೆ ಹೊಂದಿದ್ದಾರೆ.. ಅವರ ಸಾಧನೆಗೆ ಅವರ ಧರ್ಮಪತ್ನಿಯೂ ಸಾಥ್ ನೀಡಿದ್ದು, ನೂರ್ಕಾಲ ಅವರನ್ನು ದೇವರು ಚೆನ್ನಾಗಿಟ್ಟಿರಲಿ.

ಪ್ರಕಾಶ್, ಡಿಆರ್ ಡಿಎಸ್ಪಿ

ರಿಷ್ಯಂತ್ ಸರ್ ಬಳಿ ಕೆಲವೇ ದಿನಗಳ ಕಾಲ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿತು. ಅವರು ಸಾರ್ವಜನಿಕರೊಂದಿಗೆ ಹೃದಯ ಶ್ರೀಮಂತಿಕೆಯಿಂದ ನಡೆದುಕೊಳ್ಳುವ ನಡೆ ಕಿರಿಯ ಅಧಿಕಾರಿಗಳಿಗೆ ಪರೋಕ್ಷವಾಗಿ ಮಾರ್ಗದರ್ಶನವಾಗಿತ್ತು. ಅವರ ಆ ದಿನದಲ್ಲಿ ಮತ್ತೊಮ್ಮೆ ಸೇವೆ ಸಲ್ಲಿಸುವ ಅವಕಾಶ ಸಿಗಲಿ ಎಂದು ಬಯಸುತ್ತಾ ಸರ್ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು

ಪಾಟೀಲ್, ಪೊಲೀಸ್ ಅಧಿಕಾರಿ

ಸರಳತೆಯ ಸಾಕಾರಮೂರ್ತಿ, ನಂಬಿದವರಿಗೆ ನೆರವು ನೀಡುವ ಕಷ್ಟದಲ್ಲಿರುವವರಿಗೆ ಕರುಣಾಮಯಿ, ಪ್ರತಿಭೆಗಳಿಗೆ ಸದಾ ಚೈತನ್ಯದ ಚಿಲುಮೆ, ಕಷ್ಟದಲ್ಲಿದ್ದ ನಮ್ಮ ಕುಟುಂಬಕ್ಕೆ ಆತ್ಮ ಸೈರ್ಯ ತುಂಬಿ ನನ್ನ ಏಳಿಗೆಗೆ ಸದಾ ಬೆನ್ನೆಲುಬಾಗಿರುವ ನಿಮಗೆ ನನ್ನ ಹಾಗೂ ನಮ್ಮ ಕುಟುಂಬದ ಪರವಾಗಿ ವಾರ್ಷಿಕೋತ್ಸವ ಶುಭಾಶಯಗಳು.

ದೇವರಾಜ್, ಪೊಲೀಸ್ ಸಿಬ್ಬಂದಿ

ದಾವಣಗೆರೆ ಜಿಲ್ಲೆ ಪ್ರಾರಂಭವಾದಾಗಿನಿಂದ ಇಂತಹ ನಿಷ್ಠಾವಂತ, ದಕ್ಷ, ಪ್ರಾಮಾಣಿಕ, ದುಷ್ಟರ ಪಾಲಿಗೆ ಸಿಂಹ ಸ್ವಪ್ನವಾದ, ಪೊಲೀಸ್ ಅಧಿಕಾರಿಯನ್ನು ನೋಡಿರಲು ಸಾಧ್ಯವೇ ಇಲ್ಲ ಸರ್ ಮತ್ತು ಭಾರತೀಯ ಪೊಲೀಸ್ ಸೇವೆಯಲ್ಲಿ ನಾನು ಕಂಡಂತಹ ಅಪರೂಪದ ವ್ಯಕ್ತಿತ್ವ ಹೊಂದಿರುವ ಏಕ ಮಾತ್ರ ಪೊಲೀಸ್ ಅಧಿಕಾರಿಯಾಗಿದ್ದು. ಮಾನ್ಯರು ಕರ್ತವ್ಯ ನಿರ್ವಹಿಸಿರುವ ಪ್ರತಿ ಜಿಲ್ಲೆಯಲ್ಲಿಯೂ ಕೂಡ ಕರ್ತವ್ಯದಲ್ಲಿ ಶ್ರದ್ಧೆ ಭಕ್ತಿ ನಿಷ್ಠೆಯನ್ನು ಹೊಂದಿರುವ ಕರ್ನಾಟಕ ರಾಜ್ಯದ ಏಕೈಕ ಪೊಲೀಸ್ ಅಧಿಕಾರಿ ಎಂದರೆ ಅದು ನಮ್ಮ ರಿಷಂತ್ ಸರ್ ಐಪಿಎಸ್ ಎಂದರೆ ತಪ್ಪಾಗಲಾರದು ಪೊಲೀಸ್ ಇಲಾಖೆಯಲ್ಲಿ ನಿಮ್ಮಂತಹ ಕರ್ತವ್ಯ ನಿಷ್ಠೆಯನ್ನು ಹೊಂದಿರುವ ಅಧಿಕಾರಿಯನ್ನು ನಾನು ಇಲ್ಲಿವರೆಗೂ ನೋಡಿರುವುದಿಲ್ಲ ಸರ್. ಪೊಲೀಸ್ ಇಲಾಖೆಯಲ್ಲಿ ಉತ್ತಮ ಆಡಳಿತಗಾರರಾಗಿರುವ ತಾವುಗಳು ದಾವಣಗೆರೆ ನಗರದಲ್ಲಿ ಕರ್ತವ್ಯ ನಿರ್ವಹಿಸಿರುವ ಪೋಲಿಸ್ ವರಿಷ್ಠಾಧಿಕಾರಿಗಳಲ್ಲಿ ತಾವುಗಳು ಮಾಡಿದ ಕಾರ್ಯವೈಖರಿಯನ್ನು ನೋಡಿರುವ ದಾವಣಗೆರೆ ಜನತೆಯು ನಿಮ್ಮಂತಹ ಖಡಕ್ ಆಫೀಸರ್ ಮುಂದಿನ ದಿನಮಾನಗಳಲ್ಲಿ ನಿರೀಕ್ಷಿಸಲು ಕೂಡ ಸಾಧ್ಯವಿಲ್. ಸರ್ ತಾವುಗಳು ದಾವಣಗೆರೆ ಜಿಲ್ಲೆಯ ಪೋಲಿಸ್ ಇಲಾಖೆಯ ಕಾರ್ಯ ವೈಖರಿಯಲ್ಲಿ ತಾವು ಬಂದಾಗಿನಿಂದ ಎಲ್ಲಾ ಕೆಲಸ ಕಾರ್ಯಗಳು ತುಂಬಾ ಬೇಗ ಪೂರ್ಣಗೊಳ್ಳುತ್ತಿದ್ದವು ಈ ವಿಚಾರದಿಂದ ಸಾರ್ವಜನಿಕರಲ್ಲಿ ತಮ್ಮ ಬಗ್ಗೆ ಅಪಾರವಾದ ಗೌರವ ಮತ್ತು ಜನಮನ್ನಣೆಯನ್ನು ಗಳಿಸಿರುತ್ತೀರಿ ಸರ್. ತಮ್ಮ ಆಡಳಿತ ಕಾರ್ಯವೈಖರಿಯನ್ನು ನಾನು ದಾವಣಗೆರೆ ಜಿಲ್ಲೆಯಲ್ಲಿ ಮಾಡಿರುವ ಪೊಲೀಸ್ ಸುಧಾರಣೆಗಳಲ್ಲಿಯೇ ಜನರಿಗೆ ಮತ್ತು ಪೊಲೀಸ್ ಸಿಬ್ಬಂದಿಯವರಿಗೆ ತಾವು ಎಂತಹ ಅಧಿಕಾರಿ ಎಂಬುದು ಗೊತ್ತಾಗಿದೆ ಸರ್ ಈ ದಿನ ತಮಗೂ ಮತ್ತು ತಮ್ಮ ಶ್ರೀಮತಿ ರವರಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು ಸರ್

ರಾಘವೇಂದ್ರ ಯು.ಎಸ್ ರೈಲ್ವೇ ಪೊಲೀಸ್ ಕಾನ್ಸ್ಟೇಬಲ್, ದಾವಣಗೆರೆ

ನಮ್ಮ ಪೊಲೀಸ್ ಇಲಾಖೆಯಲ್ಲಿ ನಾವು ಕಂಡಂತಹ ದಕ್ಷ ಹಾಗೂ ಪ್ರಾಮಾಣಿಕ ನಿಷ್ಠಾವಂತ ಅಧಿಕಾರಿಗಳ ಸಾಲಿನಲ್ಲಿ ಸಿಬಿ ರಿಶಂತ್ ಸಾಹೇಬರು ಸಹ ಅಗ್ರಸ್ಥಾನದಲ್ಲಿ ಸೇರಿಕೊಳ್ಳುತ್ತಾರೆ. ದಯೆ ಕರುಣೆ ಸಾಹೇಬರ ಮಾತೃ ಹೃದಯ ಯಾವುದೇ ಕಷ್ಟ ಕಾರ್ಪಣ್ಯಗಳಿಗೆ ಬೇಗನೆ ಸ್ಪಂದಿಸುವ ತಾಯಿ ಹೃದಯ ಹಾಗೂ ನೊಂದು ಬಂದ ಬಡವರ ಶೋಷಿತರ ಕಣ್ಣೀರು ವರೆಸುವ ಮೇರುವ್ಯಕ್ತಿತ್ವವನ್ನು ಹೊಂದಿರುವ ವ್ಯಕ್ತಿ‌. ನಾನು ಸಾಹೇಬರೊಂದಿಗೆ ಮಾಡಿದಂತಹ ಎರಡು ವರ್ಷಗಳ ಅಂಗರಕ್ಷಕ ಸೇವೆಯಲ್ಲಿ ಒಂದು ದಿನನೂ ಸಹ ನಾನು ಕರ್ತವ್ಯದ ಬಗ್ಗೆ ಬೇಜಾರಾಗದೆ ತುಂಬಾ ಖುಷಿಯಿಂದ ಮಾಡಲು ಚೈತನ್ಯ ಬರುತ್ತಿತ್ತು. ಅವರೊಂದಿಗೆ ಎರಡು ವರ್ಷಗಳ ಕಾಲ ಕೆಲಸ ಮಾಡಿದ ನಾವೇ ಭಾಗ್ಯವಂತರು ನನ್ನ ಎರಡು ವರ್ಷಗಳ ಸೇವೆಯಲ್ಲಿ ಇಲಾಖೆಯಲ್ಲಿ ಯಾವೊಬ್ಬ ವ್ಯಕ್ತಿಯು ಸಹ ಅವರೊಂದಿಗೆ ಕೆಲಸ ಮಾಡಿದ ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ ಧೈರ್ಯ ಸಾಹಸ ಹಾಗೂ ಯಾವುದಕ್ಕೂ ಅಂಜದ ವ್ಯಕ್ತಿತ್ವ ಮೇಲು-ಕೀಳು ನಾನು ಉನ್ನತ ಅಧಿಕಾರಿ ಎಂಬ ಭಾವನೆ ಅವರ ಮನಸ್ಸಿನಲ್ಲಿ ಕನಸಿನಲ್ಲಿ ಸಹ ಬರುತ್ತಿರಲಿಲ್ಲ. ಎಲ್ಲರೂ ಒಂದೇ ಎಂಬ ಭಾವನೆ ಹತ್ತಿರದಲ್ಲಿ ಕಂಡಂತಹ ಸಾಹೇಬರ ತಾಳ್ಮೆ ಯಾವ ಒಬ್ಬ ವ್ಯಕ್ತಿಗೂ ಸಹ ಬರುವುದಿಲ್ಲ. ಭಾರತಿ ಮೇಡಂ ರವರು ಸಹ ಸಾಹೇಬರಂತೆ ಮೇರು ವ್ಯಕ್ತಿತ್ವವನ್ನು ಹೊಂದಿದ ಸ್ವಭಾವದವರು ಬಡವರ ಕಷ್ಟಗಳಿಗೆ ಸ್ಪಂದಿಸುವ ವ್ಯಕ್ತಿತ್ವ ಹೊಂದಿದ ಮಹಿಳೆ. ವಿವಾಹ ವಾರ್ಷಿಕೋತ್ಸವ ಶುಭಾಶಯಗಳು ಸರ್

-.ಮಹಾಂತೇಶ್, ಪೊಲೀಸ್ ಸಿಬ್ಬಂದಿ

ನಮ್ಮ ನೆಚ್ಚಿನ ಜನಪ್ರಿಯ ದಕ್ಷ ಪೊಲೀಸ್ ಅಧೀಕ್ಷಕರಾದ ಶ್ರೀ ರಿಷ್ಯಂತ್ ಐಪಿಎಸ್ ಸರ್ ರವರಿಗೆ ಹಾಗೂ ಮೇಡಂ ರವರಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು.
ರಿಷ್ಯಂತ್ ಸರ್ ಸರಳ ಸಜ್ಜನಿಕೆಯ ವ್ಯಕ್ತಿ ಹಾಗೂ ಉತ್ತಮ ಪೊಲೀಸ್ ಅಧಿಕಾರಿಯಾಗಿ, ಉತ್ತಮ ಪತಿಯಾಗಿ, ಮಕ್ಕಳಿಗೆ ಆದರ್ಶ ತಂದೆಯಾಗಿ, ತಂದೆ ತಾಯಿಗೆ ಮಾದರಿ ಮಗನಾಗಿ ಹಾಗೂ ಕರುಣೆ, ವಾಸ್ತಲ್ಯತೆ ತುಂಬಿರುವ ಹೃದಯವಂತ ವ್ಯಕ್ತಿಯಾಗಿ ಎಲ್ಲರಿಗೂ ಮಾದರಿಯಾಗಿ
ದ್ದಾರೆ.

ಪ್ರಶಾಂತ್, ಪೊಲೀಸ್ ಸಿಬ್ಬಂದಿ

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೂಡ ನ್ಯಾಯ ಸಿಗುವಂತೆ ಕರ್ತವ್ಯ ನಿರ್ವಹಿಸುವ ಅಧಿಕಾರಿ ನಮ್ಮ ರಿಷ್ಯಂತ್ ಸಾಹೇಬರು, ಪೊಲೀಸ್ ಸಿಬ್ಬಂದಿಗಳ ಅಚ್ಚುಮೆಚ್ಚಿನ ಅಧಿಕಾರಿಯಾಗಿದ್ದರು. ಅವರಿಗೆ ಹಾಗೂ ಅವರ ಧರ್ಮಪತ್ನಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ನೂರು ಕಾಲ ಸುಖವಾಗಿರಲಿ, ದೇವರು ಅವರಿಗೆ ಆರೋಗ್ಯ,ಐಶ್ವರ್ಯ ಕೊಟ್ಟು ಕಾಪಾಡಲಿ.

– ಮಾರುತಿ, ಪೊಲೀಸ್ ಸಿಬ್ಬಂದಿ

ನಮ್ಮ ನೆಚ್ಚಿನ ರಿಷ್ಯಂತ್ ಸಿ.ಬಿ. ಸರ್ ರವರಿಗೆ ಗುಣಮಟ್ಟದ ಶಾಲೆ ಎಂದರೆ ಹೇಗಿರಬೇಕು ಶಾಲೆ ವ್ಯವಸ್ಥೆ ಹೇಗಿರಬೇಕು ಎಂಬುದನ್ನು ಮಾರ್ಗದರ್ಶನ ಮಾಡಿದ್ದಾರೆ. ಸಿ ಬಿ ಎಸ್ ಇ ಶಾಲೆಯ ರೂಪಗಳನ್ನು ರಚಿಸಿ ಉತ್ತಮ ಶಿಕ್ಷಕ ವೃಂದವನ್ನು ನೇಮಿಸಿ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಬೇಕಾದ ಎಲ್ಲಾ ಅವಶ್ಯಕತ ಕ್ರೀಡಾ, ಪ್ರಯೋಗಾಲಯ, ಗ್ರಂಥಾಲಯಗಳನ್ನು ಪೂರೈಸಿದ್ದಾರೆ.  ಎಲ್ಲರ ಕೈಗೆಟುಕುವ ವೆಚ್ಚದಲ್ಲಿ ಸಿಬಿಎಸ್ಇ ಶಿಕ್ಷಣ ಒದಗಿಸುವ ಆಸೆ ಒತ್ತು ಅದನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಇಂತಹ ನಮ್ಮ ನೆಚ್ಚಿನ ರಿಷ್ಯಂತ್ ಸರ್ ರವರಿಗೆ ಪೊಲೀಸ್ ಪಬ್ಲಿಕ್ ಶಾಲೆಯ ವತಿಯಿಂದ ಮದುವೆ ವಾರ್ಷಿಕೋತ್ಸವದ ಶುಭ ಹಾರೈಕೆಗಳು.

ಯತೀಶ್, ಎಚ್.ವಿ., ಪ್ರಾಂಶುಪಾಲರು, ಪೊಲೀಸ್ ಪಬ್ಲಿಕ್ ಶಾಲೆ

 

Share.
Leave A Reply

Exit mobile version