ದಾವಣಗೆರೆ : ಮಂಡ್ಯ ದೋಸ್ತಿ ಟಿಕೆಟ್ ಕೊನೆಗೂ ಜೆಡಿಎಸ್ ಪಾಲಾಯ್ತಾ.? ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ನಿಖಿಲ್ ಮಂಡ್ಯ ಸ್ಪರ್ಧೆಯ ಬಗ್ಗೆ ಸುಳಿವು ಬಿಟ್ಟುಕೊಟ್ರಾ.? ಮಾರ್ಚ್ 25ರಂದು ಮಂಡ್ಯ ಟಿಕೆಟ್ ಫೈನಲ್ ಅಂತೇಳಿದ್ದೇಕೆ ಹೆಚ್​ಡಿ ಕುಮಾರಸ್ವಾಮಿ.? ಈಗೇನ್ ಮಾಡ್ತಾರೆ ಮಂಡ್ಯ ಸಂಸದೆ ಸುಮಲತಾ.? , ಕಂಪ್ಲಿಂಟ್ ಡೀಟೇಲ್ಸ್ ಇಲ್ಲಿದೆ ನೋಡಿ.

ಹೆಚ್​ಡಿ ಕುಮಾರಸ್ವಾಮಿ ಹೇಳಿದ ಈ ಒಂದು ಮಾತು ಮಂಡ್ಯ ಅಖಾಡದಲ್ಲಿ ಬೆಂಕಿ ಬಿರುಗಾಳಿಯನ್ನ ಎಬ್ಬಿಸಿದೆ.. ನಾವು ಮಂಡ್ಯವನ್ನ ಬಿಟ್ಟುಕೊಡೋ ಮಾತೇ ಇಲ್ಲ. ಮಂಡ್ಯವನ್ನ ನಾವು ಈ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಳೆದುಕೊಂಡ್ರೆ ನಾವು ಇದ್ದು ಸತ್ತಂಗೆ.. ಹೀಗೆ ಕುಮಾರಸ್ವಾಮಿ ಹೇಳ್ತಾ, ಸಂಸದೆ ಸುಮಲತಾ ಅವರಿಗೂ ಬಿಗ್ ಶಾಕ್ ಕೊಟ್ಟಿದೆ. ಬಿಜೆಪಿ ನಾಯಕರು ಈಗಾಗ್ಲಲೇ ತಮ್ಮದೇ ಪಕ್ಷದ ಸಿಟಿ ರವಿ, ಪ್ರತಾಪ್ ಸಿಂಹ, ಈಶ್ವರಪ್ಪ ಸೇರಿದಂತೆ ಹಲವರಿಗೆ ಶಾಕ್ ಕೊಟ್ಟಂತೆಯೇ ಸುಮಲತಾ ಅವರಿಗೂ ಬಿಗ್ ಶಾಕ್ ಕೊಡೋದು ಗ್ಯಾರಂಟಿಯಾಗಿದೆ.

ಹೌದು ಓದುಗರೇ.. ಇವತ್ತು ಮಂಡ್ಯದಲ್ಲಿ ಹೆಚ್​ಡಿಕೆ ಆಡಿರೋ ಮಾತುಗಳನ್ನ ನೋಡಿದ್ರೆ ಮಂಡ್ಯದಲ್ಲಿ ಮತ್ತೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುವುದು ಬಹುತೇಕ ಪಕ್ಕಾ ಆಗಿದೆ. ಮಾರ್ಚ್ 25ಕ್ಕೆ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಣೆ ಮಾಡುವುದಾಗಿ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ನಿಮ್ಮ ಆಸೆಗೆ ನಾವು ಭಂಗ ತರುವುದಿಲ್ಲ. ಮತ್ತೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ನಿಖಿಲ್ ಕುಮಾರಸ್ವಾಮಿಯನ್ನು ಒಪ್ಪಿಸುತ್ತೇನೆ. ನಿಮ್ಮ ಭಾವನೆಗಳಿಗೆ ಯಾವುದೇ ಕಾರಣಕ್ಕೂ ಧಕ್ಕೆ ತರುವುದಿಲ್ಲ. ನಿಮ್ಮ ಆಸೆಯ ಪ್ರಕಾರ ಅದನ್ನು ನೇರವೇರಿಸಿಕೊಳ್ಳುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಮಾರ್ಚ್‌ 21ಕ್ಕೆ ನನಗೆ ಅಪರೇಷನ್ ಇದೆ. ಮಾರ್ಚ್‌ 25ಕ್ಕೆ ಇಲ್ಲಿಗೆ ಬಂದು ನಾನು ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡುತ್ತೇನೆ. ನಿಖಿಲ್ ಒಪ್ಪಿಸಲು ನಾನು ಮುಂದಾಗುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಈ ಬಾರಿ ಲೋಕಸಭೆ ಚುನಾವಣೆಗೆ ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಮಂಡ್ಯ ಕ್ಷೇತ್ರವನ್ನ ಜೆಡಿಎಸ್ ಪಡೆದುಕೊಂಡಿದೆ. ಒಂದು ಕಾಲದಲ್ಲಿ ಜೆಡಿಎಸ್​ ಭದ್ರಕೋಟೆಯಾಗಿರುವ ಮಂಡ್ಯಕ್ಕೆ ಕಾಂಗ್ರೆಸ್ ಎಂಟ್ರಿಕೊಟ್ಟಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್​ 6 ಕ್ಷೇತ್ರದಲ್ಲಿ ಗೆಲುವುಸಾಧಿಸಿ ಪ್ರಾಬಲ್ಯ ಮೆರೆದಿದ್ದು, ಲೋಕಸಭೆ ಚುನಾವಣೆಯಲ್ಲೂ ಗೆಲುವು ಪಡೆಯುವ ಉತ್ಸಾಹದಲ್ಲಿದೆ. ಆದರೆ ಜೆಡಿಎಸ್​ ಮಂಡ್ಯವನ್ನು ಮತ್ತೆ ತಮ್ಮ ತೆಕ್ಕೆಗೆ ಪಡೆಯಲು ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಅದಕ್ಕಾಗಿಯೇ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಅಥವಾ ನಿಖಿಲ್ ಕುಮಾರಸ್ವಾಮಿಯವರನ್ನು ಸ್ಪರ್ಧಿಸುವಂತೆ ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರು ಮನವಿ ಮಾಡುತ್ತಿದ್ದಾರೆ.

ನಿಖಿಲ್‌ ಕುಮಾರಸ್ವಾಮಿ ಈ ಹಿಂದೆ ನಾನು ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದರು. ಆದರೆ ಅಭಿಮಾನಿಗಳು, ನಾಯಕರು ನಿಖಿಲ್‌ ಸ್ಪರ್ಧೆಯ ಬಗ್ಗೆ ಒಲವು ವ್ಯಕ್ತಪಡಿಸುತ್ತಿದ್ದಾರೆ ಅಂತೇಳಿ ನೆಪ ಹೇಳ್ತಿರೋ ದಳಪತಿಗಳು ನಿಖಿಲ್ ಅವರನ್ನ ಮಂಡ್ಯದಿಂದ ಕಣಕ್ಕಿಳಿಸೋಕೆ ಭರ್ಜರಿ ಸಿದ್ಧತೆ ಮಾಡಿಕೊಂಡಿದ್ಧಾರೆ. ಇತ್ತ ಸಂಸದೆ ಸುಮಲತಾ ಅವರಿಗೂ ಟಕ್ಕರ್ ಕೊಟ್ಟಿರೋ ಕುಮಾರಸ್ವಾಮಿ ಸುಮಲತಾ ನಮ್ಮ ಅಕ್ಕ ಇದ್ದಂತೆ ಅಂತೇಳಿ ಅಚ್ಚರಿ ಮೂಡಿಸಿದ್ದಾರೆ. 

ಇನ್ನ 2019ರಲ್ಲಿ ಮಂಡ್ಯದಲ್ಲಿ ನಿಖಿಲ್ ಸೋಲೋಕೆ ಕಾರಣ ಯಾರು ಗೊತ್ತಾ..? ಅದು ಬೇರ್ಯಾರೂ ಅಲ್ಲ., ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿಯವರೇ. ಹೀಗಂಥ ನಾವು ಹೇಳ್ತಾಯಿಲ್ಲ. ಜೆಡಿಎಸ್ ಶಾಸಕ ಜಿಟಿ ದೇವೇಗೌಡ್ರು ಹೇಳಿದ್ದಾರೆ. ಅದು ಯಾಕೆ ಗೊತ್ತಾ.? 

ಸದ್ಯದ ಬೆಳವಣಿಗೆಗಳ ಪ್ರಕಾರ ಈ ಸಲ ಬಿಜೆಪಿ ಜೆಡಿಎಸ್​​ಗೆ ಮಂಡ್ಯ, ಕೋಲಾರ, ಹಾಸನ ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಬಿಟ್ಟುಕೊಡಲಿದೆ ಎನ್ನುವುದು ಬಹುತೇಕ ಪಕ್ಕಾ ಆಗಿದೆ. ಇದು ಸಾಧ್ಯವಾದರೆ, ಮಂಡ್ಯದಲ್ಲಿ ಬಿಜೆಪಿಯಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ಹೊಂದಿರುವ ಸುಮಲತಾರಿಗೆ ಸಂದಿಗ್ಧ ಪರಿಸ್ಥಿತಿ ಎದುರಾಗಲಿದೆ. ಈಗಾಗಲೇ ಮಂಡ್ಯ ಬಿಟ್ಟು ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಇದೀಗ ಆ ಕ್ಷೇತ್ರ ಜೆಡಿಎಸ್ ಪಾಲಾದರೆ, ಮುಂದೇನು ಮಾಡಲಿದ್ದಾರೆ ಎಂಬುದು ಕುತೂಹಲಕಾರಿಯಾಗಿರಲಿದೆ.

ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಾರರು. ಹಾಗೆ ಮಾಡಿದರೆ ಬಿಜೆಪಿ- ಜೆಡಿಎಸ್ ಮೈತ್ರಿ ಕ್ಯಾಂಡಿಡೇಟ್ ವಿರುದ್ಧ ಸೆಡ್ಡು ಹೊಡೆದಂತಾಗುತ್ತದೆ. ಕಳೆದ ಸಂಸತ್ ಚುನಾವಣೆಯಲ್ಲಿ ಅವರು ಬಿಜೆಪಿಯ ಬಾಹ್ಯ ಬೆಂಬಲ ಪಡೆದಿದ್ದರಿಂದ ಆ ಬೆಂಬಲ ‘ಋಣ’ ಅವರನ್ನು ಪಕ್ಷೇತರರಾಗಿ ನಿಲ್ಲಲು ಬಿಡುವುದಿಲ್ಲ. ಅಂಥ ಸಂದರ್ಭದಲ್ಲಿ ಅವರು, ಜೆಡಿಎಸ್ ಸೇರಿ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಅನುಕೂಲವಾಗುತ್ತದೆ. ಆದರೆ, 2019ರಲ್ಲಿ ಜೆಡಿಎಸ್ ವಿರುದ್ಧವೇ ಸ್ವಾಭಿಮಾನದ ಕಹಳೆ ಊದಿದ್ದ ಅವರು ಆ ಕೆಲಸ ಮಾಡಲಾರರು. ಹಾಗಾಗಿ, ಅವರು ಏನು ಮಾಡುತ್ತಾರೆ… ಚುನಾವಣೆಯಿಂದಲೇ ದೂರ ಉಳಿಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Share.
Leave A Reply

Exit mobile version