ಹೊನ್ನಾಳಿ : ಆಡುಮುಟ್ಟದ ಸೊಪ್ಪಿಲ್ಲ ಸಹಕಾರ ಸಂಘಗಳಿಲ್ಲದ ಊರು ಇಲ್ಲ ಎಂದು ಶಿಮುಲ್ ಉಪಾಧ್ಯಕ್ಷ ಬಸಪ್ಪ ಹೇಳಿದರು.

ಹೊನ್ನಾಳಿ ತಾಲ್ಲೂಕಿನ ಗೊಲ್ಲರಹಳ್ಳಿಯ ತರಳಬಾಳು ಸಮುದಾಯ ಭವನದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಶಿವಮೊಗ್ಗ ಜಿಲ್ಲಾ ಹಾಲು ಒಕ್ಕೂಟ, ಅವಳಿ ತಾಲ್ಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಯೋಗದಲ್ಲಿ ನಡೆದ 70ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಶಿಮುಲ್ ಉಪಾಧ್ಯಕ್ಷ ಬಸಪ್ಪ ಮಾತನಾಡಿದರು.

ನಮ್ಮ ದೇಶದ ಮೊದಲ ಸಹಕಾರ ಸಂಘ ಕರ್ನಾಟಕದ ಗದಗ ಜಿಲ್ಲೆಯ ಕಣಗಿನಹಾಳದಲ್ಲಿ, 1905 ರಲ್ಲಿ ನೋಂದಾಯಿ ಸಲ್ಪಟ್ಟಿದೆ.  ಸಿದ್ದನಗೌಡ ಸಣ್ಣರಾಮನಗೌಡ ಅವರು ಸಂಸ್ಥಾಪಕ ಅಧ್ಯಕ್ಷರಾಗಿದ್ದರು ಮತ್ತು ಅವರನ್ನು ನಮ್ಮ ದೇಶದ ಸಹಕಾರ ಚಳವಳಿಯ ಪಿತಾಮಹ ಎಂದೇ ಕರೆಯಲಾಗುತ್ತದೆ ಎಂದು ಬಣ್ಣಿಸಿದರು.

ಗದಗಿನಲ್ಲಿ ಸಣ್ಣದಾಗಿ ಸಂಘ ಪ್ರಾರಂಭಿಸಿದ್ದ ಸಹಕಾರ ಪಿತಾಮಹ ಸಿದ್ದನಗೌಡ ಸಣ್ಣರಾಮನಗೌಡ ಪರಿಣಾಮ ಇಂದು ಸಹಕಾರಿ ಸಂಘ ಹೆಮ್ಮರವಾಗಿ ಬೆಳೆದಿದ್ದು ಸುಮಾರು 8 ಲಕ್ಷದ ಐವತ್ತೈದು ಸಾವಿರದ ಆರುನೂರು ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಆದ್ದರಿಂದ ಅವರನ್ನು ಸಂಘಗಳ ಪಿತಾಮಹ ಎಂದು ಅವರನ್ನು ಕರೆಯಲಾಗುತ್ತದೆ ಎಂದರು.

ಅಖಿಲ ಭಾರತ ಸಹಕಾರ ಸಪ್ತಾಹ ೭ ದಿನ ನಡೆಯುತ್ತದೆ. ಮೊದಲು ನ.೧೪ ರಿಂದ‌ ಪ್ರಾರಂಭವಾಗಿ ನ.೨೪ ರ ವರೆಗೆ ನಡೆಯುತ್ತದೆ‌ . ಸಹಕಾರಿ ಕ್ಷೇತ್ರ ಹೊಸತನ ಮೂಡಿಸಿದೆ‌ ಹಾಗೂ ಹೊಸತನ ಸೃಷ್ಠಿ ಮಾಡಿದೆ. ಸಹಕಾರಿ ಕ್ಷೇತ್ರದ ಬಗ್ಗೆ ಎಷ್ಟು ತಿಳಿದರೂ ಕಡಿಮೆಯೇ ಆದ್ದರಿಂದ ತಕ್ಕ ಮಟ್ಟಿಗೆ ಸಹಕಾರಿಕ್ಷೇತ್ರದ ಬಗ್ಗೆ  ಪ್ರತಿಯೊಬ್ಬರಿಗೂ ತಿಳಿಯಬೇಕು ಎಂದರು.

ಸಹಕಾರಿ‌ಕ್ಷೇತ್ರದ ಮಾದರಿಯಲ್ಲೇ ಡಾ.ವರ್ಗೀಸ್ ಕುರಿಯನ್ ಅವರು ಗುಜರಾತ್ ನಲ್ಲಿ ಕ್ರಾಂತಿಯನ್ನೇ ಹುಟ್ಟುಹಾಕಿದರು. ಅದರಿಂದಾಗಿ ಇಂದು ಕರ್ನಾಟಕದಲ್ಲಿ ಸುಮಾರು ಎಂಭತ್ತೈದು ಲಕ್ಷ ಜನ ತೊಂಭತ್ತು ಸಾವಿರ ಲೀಟರ್ ಹಾಲು ಉತ್ಪಾದನೆ ಮಾಡುತ್ತಿದ್ದಾರೆ. ಅದಕ್ಕಾಗಿ ಇಂದು ಡಾ.ವರ್ಗೀಸ್ ಕುರಿಯನ್  ಅವರನ್ನು ಹಾಲಿನ ಪಿತಾಮಹ ಎಂದೇ ಕರೆಯುತ್ತಾರೆ ಎಂದು‌ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸಹಕಾರಿ ಸಂಘಕ್ಕೆ ನೂತನ‌ ನಿವೇಶನ‌ ಒದಗಿಸುವಂತೆ ಶಿಮುಲ್ ಉಪಾಧ್ಯಕ್ಷ ಬಸಪ್ಪಸಮಾರಂಭದಲ್ಲಿ ಉಪಸ್ಥಿತರಿದ್ದ ಶಾಸಕ ಡಿ.ಜಿ‌ ಶಾಂತನಗೌಡ ಅವರಿಗೆ ಮನವಿ ಮಾಡಿದರು.ಹಾಗೂ ನನೆಗುದಿಗೆ ಬಿದ್ದಿರುವ ಕೆಲಸಗಳು ನಡೆಯಬೇಕು.ಜೊತೆಗೆ  ೨೫% ಅನುದಾನ ನೀಡಬೇಕು ಎಂದು ಒತ್ತಾಯಿಸಿದರು.

ಸಮಾರಂಭದಲ್ಲಿ ಶಾಸಕ ಡಿ.ಜಿ ಶಾಂತನಗೌಡ, ಅಧ್ಯಕ್ಷ ಬಸವರಾಜ್,ಮಾಜಿ ಶಾಸಕರುಗಳಾ ಎಂ.ಪಿ ರೇಣುಕಾಚಾರ್ಯ, ಡಾ.ಡಿ.ಗಂಗಪ್ಪ ಮತ್ತಿತರರಿದ್ದರು.

Share.
Leave A Reply

Exit mobile version