ಶಿವಮೊಗ್ಗ : ಲೋಕಸಭೆ ಚುನಾವಣೆ ಬಳಿಕ ಮಲೆನಾಡಿನಲ್ಲಿ ಇಬ್ಬರ ನೆತ್ತರು ಹರಿದಿದ್ದು, ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿದ್ದಾರೆ.
ಎಂಕೆಕೆ ರಸ್ತೆಯ ಶೋಹೆಬ್ ಮತ್ತು ಗೌಸ್ ಎಂಬುವರು ಕೊಲೆಯಾದವರು ಎಂದು ತಿಳಿದು ಬಂದಿದ್ದು, ಕೊಲೆಗೆ ವೈಯಕ್ತಿಕ ಜಗಳವೇ ಕಾರಣ ಎಂದು ಶಂಕಿಸಲಾಗಿದೆ.ಲಷ್ಕರ್ ಮೊಹಲ್ಲಾದ ಮಟನ್ ಸ್ಟಾಲ್ ವೊಂದರ ಬಳಿಘಟನೆ ನಡೆದಿದ್ದು, ಇಬ್ಬರನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಲಾಗಿದೆ. ಇವರಿಬ್ಬರು ಸಹ ರೌಡಿ ಶೀಟರ್ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇವರಿಬ್ಬರು ಬೈಕ್ ನಲ್ಲಿ ಬರುತ್ತಿದ್ದ ವೇಳೆ ಅಪರಿಚಿತರು ಮಟನ್ ಸ್ಟಾಲ್ ಬಳಿ ಶೋಹೆಬ್ ಮತ್ತು ಗೌಸ್ ರನ್ನುಅಡ್ಡಗಟ್ಟಿದ್ದಾರೆ. ಅಲ್ಲದೇ ಹರಿತವಾದ ಆಯುಧಗಳಿಂದ ಅವರ ಮೇಲೆ ಅಟ್ಯಾಕ್ ಮಾಡಿದ್ದಾರೆ. ಪ್ರಾಣ ಪಕ್ಷಿ ಹಾರಿದ ನಂತರ ಕಲ್ಲು ಎತ್ತಾಕಿ ವಿಕೃತಿ ಮೆರೆದಿದ್ದಾರೆ. ಈ ಡಬಲ್ ಮರ್ಡರ್ ನಿಂದ ಸುತ್ತಮುತ್ತಲಿನ ಜನ ಬೆಚ್ಚಿ ಬಿದ್ದಿದ್ದಾರೆ. ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.