ಚನ್ನಗಿರಿ :  ರಾಜ್ಯ ಕ್ಷತ್ರೀಯ ಮರಾಠ ಪರಿಷತ್, ಜಿಲ್ಲಾ ಕ್ಷತ್ರೀಯ ಮರಾಠ ಪರಿಷತ್ ಇವರ ಸಂಯುಕ್ತಾಶ್ರಯದಲ್ಲಿ  ಛತ್ರಪತಿ ಶಿವಾಜಿ ಮಹಾರಾಜರ  ತಂದೆ ಷಹಾಜೀರಾಜೆ ಭೋಂಸ್ಲೆ ಮಹಾರಾಜರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಇಂದು  ತಾಲೂಕಿನ ಹೊದಿಗೆರೆ ಗ್ರಾಮದಲ್ಲಿ ಷಹಾಜೀ ರಾಜೆ ಭೋಂಸ್ಲೆ  ಸಮುದಾಯ ಭವನದಲ್ಲಿ  ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಮರಾಠ ಸಮಾಜದ ಉಪಾಧ್ಯಕ್ಷ ಬಿ.ಎಂ.ಕುಬೇಂದ್ರೋಜಿ ರಾವ್ ಹೇಳಿದರು. 

ಪಟ್ಟಣದ ಶಿವಾಜಿ ನಗರದಲ್ಲಿರುವ ಮರಾಠ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ  ಜಯಂತ್ಯೋತ್ಸವ ಕಾರ್ಯಕ್ರಮದ  ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ,  ಹಿಂದು ಸಮಾಜದ ಉಳಿವಿಗಾಗಿ ಹೋರಾಟ ಮಾಡಿದ ಷಹಾಜಿರಾಜೆ ಭೋಂಸ್ಲೆ ಅವರ ಸಮಾಧಿಯು ಚನ್ನಗಿರಿ ತಾಲೂಕಿನಲ್ಲಿರುವುದು ನಮ್ಮಗಳ ಪುಣ್ಯವಾಗಿದ್ದು , ಸಮಾರಂಭದ ದಿವ್ಯ ಸಾನಿಧ್ಯವನ್ನು ಬೆಂಗಳೂರಿನ ಗೋಸಾಯಿ ಮಹಾ ಸಂಸ್ಥಾನಮಠದ ಶ್ರೀ ಮಂಜುನಾಥ ಸುರೇಶ ಭಾರತೀನಂದ ಮಹಾಸ್ವಾಮಿಗಳು ವಹಿಸಿದ್ದರು.  ಸಮಾರಂಭದ ಉದ್ಘಾಟನೆಯನ್ನು ಮರಾಠ ಸಮಾಜದ ಮುಖಂಡ ಪಿ.ಜಿ.ಆರ್.ಸಿಂಧ್ಯಾ, ರಾಜ್ಯ ಕ್ಷತ್ರೀಯ ಮರಾಠ ಪರಿಷತ್ ನ ಅಧ್ಯಕ್ಷ ಸುರೇಶ್ ರಾವ್, ಕಾರ್ಮಿಕ ಸಚಿವ ಸಂತೋಷ್ ಲಾಡ್, ಎಸ್.ಎಸ್.ಮಲ್ಲಿಕಾರ್ಜುನ್, ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ಶಿವಗಂಗಾ ವಿ.ಬಸವರಾಜ್, ಮಾಜಿ ಶಾಸಕ ಎಂ.ಜಿ.ಮೂಳೆ ನೆರವೇರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕೆ.ಕೆ.ಎಂ.ಪಿ ಅಧ್ಯಕ್ಷ ಮರಿಯೋಜಿರಾವ್ ವಹಿಸಲಿದ್ದು ಪ್ರಾಸ್ತಾವಿಕವಾಗಿ ತಾಲೂಕು ಮರಾಠ ಸಮಾಜದ ಅಧ್ಯಕ್ಷ ಎಂ.ಬಿ.ಶಿವಾಜಿರಾವ್ ಮಾತನಾಡಿದರು.

ಈ ಸಭೆಯಲ್ಲಿ  ತಾಲೂಕು ಕೆ.ಕೆ.ಎಂ.ಪಿ. ಅಧ್ಯಕ್ಷ ಸತೀಶ್ ಎಂ.ಪವಾರ್, ಮಹಿಳಾ ಘಟಕದ ಅಧ್ಯಕ್ಷೆ ಸವಿತಾ,  ಜೀಜಾಮಾತಾ ಮಹಿಳಾ  ಸಂಘದ ಅಧ್ಯಕ್ಷೆ  ಲತಾಕಾಳೆ, ಚನ್ನಗಿರಿ  ಕ್ಷತ್ರೀಯ  ಮರಾಟ ಸಮಾಜದ  ಖಜಾಂಚಿ ಅಣ್ಣೋಜಿರಾವ್, ಗಣೇಶ್ ರಾವ್, ಮಂಜುಳಾ ಬಾಯಿ ಸೇರಿದಂತೆ ಮೊದಲಾದವರು ಹಾಜರಿದ್ದರು.

Share.
Leave A Reply

Exit mobile version