
ಚಿತ್ರದುರ್ಗ : ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘ ಚಿತ್ರದುರ್ಗ ಜಿಲ್ಲಾ ಘಟಕದ ಮತ್ತು ವಿವಿಧ ತಾಲ್ಲೂಕು ಘಟಕಗಳ ಪದಾಧಿಕಾರಿಗಳ ಆಯ್ಕೆ ಕುರಿತಂತೆ ಕ್ರಮ ವಹಿಸಬೇಕಿದ್ದು, ತಾಲ್ಲೂಕು ಹಾಗೂ ಇಲಾಖೆಗಳಿಗೆ ಪ್ರಾತಿನಿಧ್ಯ ನೀಡಬೇಕಿದೆ. ಈ ಪ್ರಯುಕ್ತ ಸಂಘಟನೆಯಲ್ಲಿ ಆಸಕ್ತಿಯುಳ್ಳ ನೌಕರ / ಅಧಿಕಾರಿಗಳು ತಮ್ಮ ವಿವರಗಳನ್ನು ಸಂಘದ ಜಿಲ್ಲಾಧ್ಯಕ್ಷರಾದ ಎಸ್ ರಾಜಪ್ಪ ಮತ್ತು ರಾಜ್ಯ ಉಪಾಧ್ಯಕ್ಷರಾದ ಶ್ರೀನಿವಾಸ ನಾಯಕ ಇವರಿಗೆ ನೀಡಲು ಸಂಘದ ವತಿಯಿಂದ ಕೋರಲಾಗಿದೆ.
ತಾಲ್ಲೂಕು ಹಾಗೂ ಇಲಾಖೆಗಳಿಗೆ ಪ್ರಾತಿನಿಧ್ಯತೆಗೆ ಅನುಗುಣವಾಗಿ ಕೇಂದ್ರ ಸಮಿತಿಯ ಅಂತಿಮ ಅನುಮೋದನೆ ಷರತ್ತಿನ ಮೇರೆಗೆ ಆಯ್ಕೆ ಮಾಡಲಾಗುವುದು ಎಂಬ ಅಂಶವನ್ನು ತಿಳಿಯಪಡಿಸಿದೆ ಎಂದು ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ಎಸ್ ರಾಜಪ್ಪ, ಜಿಲ್ಲಾಧ್ಯಕ್ಷರು KSSTGEA ಚಿತ್ರದುರ್ಗ ಜಿಲ್ಲಾ ಘಟಕ ಪ್ರಕಟಣೆಯಲ್ಲಿ ತಿಳಿಸಿದೆ