ದಾವಣಗೆರೆ : ಆರ್ ಎಸ್ ಎಸ್ ನಾಯಕ ಬಿಜೆಪಿ ಮುಖಂಡ ಎಂ.ಬಿ.ಭಾನುಪ್ರಕಾಶ್ ನಿಧನಕ್ಕೆ ದಾವಣಗೆರೆ ಆರ್ ಎಸ್ ಎಸ್ ನಾಯಕ ಕೃಷ್ಣಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ವಿಜಯೊಂದಿಗೆ ಮಾತನಾಡಿ, ಭಾನುಪ್ರಕಾಶ್ ರ ಜತೆ ಆರ್ ಎಸ್ ಎಸ್ ನಲ್ಲಿ ಕೆಲಸ ಮಾಡಿದ್ದು, ಅವರ ಜತೆ ಕಳೆದ ಕ್ಷಣಗಳು ಇನ್ನೂ ನೆನಪಿನಲ್ಲಿವೆ. ಹೋರಾಟದ ಹಾದಿಯಲ್ಲಿ ಬಂದ ಭಾನುಪ್ರಕಾಶ್ ಹೋರಾಟದ ಮುಖಾಂತರ ನಿಧನರಾಗಿದ್ದಾರೆ. ಅವರ ನಿಧನ ಸಂಘಕ್ಕೆ ನುಂಗಲಾರದ ತುತ್ತಾಗಿದೆ.
ಶಿವಮೊಗ್ಗ ಜಿಲ್ಲಾ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಟ್ಟಾಳು ಅಭಿಮಾನಿ ಭಾನುಪ್ರಕಾಶ್ ರವರ ನಿಧನಕ್ಕೆ ಅತೀವ ದುಃಖವನ್ನು ವ್ಯಕ್ತಪಡಿಸುತ್ತೇನೆ.
ಶ್ರೀಯುತ ಭಾನುಪ್ರಕಾಶ್ ರವರು ಬಾಲ್ಯದಲ್ಲಿದ್ದಾಗ ಅವರು ಒಟ್ಟಿಗೆ ನಾನು ಅವಿಭಜಿತ ಶಿವಮೊಗ್ಗ ಜಿಲ್ಲೆ ಪ್ರಾರಂಭಗಿಂತ ಮುಂಚೆ ಮತ್ತು ದಾವಣಗೆರೆ ಜಿಲ್ಲೆ ಪ್ರಾರಂಭ ಗಿಂತ ಮುಂಚೆ ಇಬ್ಬರೂ ಒಟ್ಟಿಗೆ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡಿದ ಅನುಭವವಿದೆ.
ಶ್ರೀಯುತರೊಂದಿಗೆ ಶಿವಮೊಗ್ಗ ಜಿಲ್ಲಾ ಮತ್ತೂರಿನಿಂದ ಮುಖ್ಯ ಶಿಕ್ಷಕ, ಚನ್ನಗಿರಿ ತಾಲೂಕು ದೇವರಹಳ್ಳಿ ಗ್ರಾಮದಿಂದ ಮುಖ್ಯ ಶಿಕ್ಷಕರಾಗಿ ಜಿಲ್ಲಾ ಬೈಟಕಗಳಲ್ಲಿ ಮತ್ತು ಜಿಲ್ಲೆಯ ತರಬೇತಿಗಳಲ್ಲಿ ಭಾಗವಹಿಸಿ ಅವರಿಂದ ಸಾಕಷ್ಟು ಸಂಘದ ಬಗ್ಗೆ ಮತ್ತು ದೇಶದ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡಿದ್ದೆ. ಅವರ ನಿಧನ ನಮಗೆ ದಿಗ್ಭ್ರಮೆಯನ್ನ ಉಂಟು ಮಾಡಿದೆ. ಅಲ್ಲದೇ ಸಮಾಜಕ್ಕೆ ಅತ್ಯುತ್ತಮ ಸಂಸ್ಕೃತ ಪಂಡಿತನನ್ನ ಕಳೆದುಕೊಂಡಂತಾಗಿದೆ.
ಅವರ ನಿಧನವು ಅವರ ಕುಟುಂಬಕ್ಕೆ ಅಶಾಂತಿ ನೀಡದೆ ಸದಾ ಶಾಂತಿಯನ್ನು ನೀಡುತ್ತಾ ಇರಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ. ಅವರ ಜ್ಞಾನಕ್ಕೆ ಮತ್ತು ಅವರ ಶ್ರದ್ಧೆ, ಬದ್ಧತೆ, ಅವರ ನಡೆ-ನುಡಿಗಳಿಗೆ ಶ್ರೇಷ್ಠ ಮಟ್ಟದ ಅಧ್ಯಯನದ ಅಮೃತ ಬಿಂದುವಿನ ಪಾರದರ್ಶಕತೆ ಸಿಕ್ಕಿತ್ತು.
ರಾಜ್ಯದ ವಿಧಾನಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿರುವುದು ಒಂದು ಗಣನೀಯವಾದ ಅಮೃತಗಳಿಗೆ ಅಂತಹ ಅವಕಾಶ ಮತ್ತೂರು ಗ್ರಾಮಕ್ಕೆ ಸಿಕ್ಕಿತ್ತು ಎಂಬುದನ್ನು ನಾನು ಜೀವನದುದ್ದಕ್ಕೂ ನೆನೆಯುತ್ತಾ ಇರುತ್ತೇನೆ. ದೇವರು ಅವರಿಗೆ ಸದಾ ಶಾಂತಿಯನ್ನು ನೀಡುತ್ತಿರಲೆಂದು ಪ್ರಾರ್ಥಿಸುತ್ತೇನೆ
ಸಂಘ, ಸಂಘಟನೆ, ಪಕ್ಷ ಹೀಗೆ ಹೋರಾಟದ ಹಾದಿಯಲ್ಲೇ ಸಾರ್ವಜನಿಕ ಬದುಕಿಗೆ ಸುದೀರ್ಘ ಐದು ದಶಕಗಳನ್ನು ಸಮರ್ಪಿಸಿಕೊಂಡು ಬಂದವರು ಭಾನು ಪ್ರಕಾಶ್.
ಬಾಲ್ಯದಿಂದ ಸಂಘದ ನಂಟಿನಲ್ಲಿಯೇ ಬೆಳೆದುಬಂದ ಅವರು, ಜನಸಂಘದಲ್ಲೂ ಸಕ್ರಿಯರಾಗಿದ್ದರು. ತಮ್ಮೂರಿನ ಗ್ರಾಮ ಪಂಚಾಯ್ತಿ ಸದಸ್ಯರಾಗುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಬಂದ ಅವರು, 2001ರಲ್ಲಿ ಗಾಜನೂರು ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ಬಿಜೆಪಿಯಿಂದ ಆಯ್ಕೆಯಾಗಿದ್ದರು. 2013ರಿಂದ 19ರವರೆಗೆ ಒಂದು ಅವಧಿಗೆ ವಿಧಾನಪರಿಷತ್ ಸದಸ್ಯರಾಗಿ ವಿಧಾನಸಭೆಯಿಂದ ಆಯ್ಕೆಯಾಗಿದ್ದರು.
ಸಂಘ, ಸಂಘಟನೆ, ಪಕ್ಷ ಹೀಗೆ ಹೋರಾಟದ ಹಾದಿಯಲ್ಲೇ ಸಾರ್ವಜನಿಕ ಬದುಕಿಗೆ ಸುದೀರ್ಘ ಐದು ದಶಕಗಳನ್ನು ಸಮರ್ಪಿಸಿಕೊಂಡು ಬಂದವರು ವಿಧಾನ ಪರಿಷತ್ ಮಾಜಿ ಸದಸ್ಯ, ಬಿಜೆಪಿ ನಾಯಕ ಎಂ.ಬಿ.ಭಾನುಪ್ರಕಾಶ್.
ಸೋಮವಾರ ಇಲ್ಲಿನ ಗೋಪಿ ವೃತ್ತದಲ್ಲಿ ಪಕ್ಷದ ಹೋರಾಟದ ವೇದಿಕೆಯಲ್ಲಿಯೇ ಜೀವಬಿಟ್ಟದ್ದು ಕಾಕತಾಳೀಯ.ಪಕ್ಷದ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ಹಾಗೂ ಡಿ.ಎಚ್.ಶಂಕರಮೂರ್ತಿ ಅವರೊಂದಿಗೆ ಸಮಾನ ಸಲುಗೆ ಹೊಂದಿದ್ದ ಭಾನುಪ್ರಕಾಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ವೇಳೆ ಮೂವರ ನಡುವೆಯೂ ಸಮನ್ವಯ ಸಾಧಿಸಿ ಮಲೆನಾಡಿನಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿದ್ದರು. ಮುಂದೆ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ, ಪಕ್ಷದ ಪ್ರಕೋಷ್ಠಗಳ ಸಂಚಾಲಕರಾಗಿಯೂ ತಮ್ಮ ಅನುಭವವನ್ನು ಧಾರೆ ಎರೆದಿದ್ದರು.
ಎಸ್.ಬಂಗಾರಪ್ಪ ಅವರನ್ನು ಬಿಜೆಪಿಗೆ ಕರೆತರುವಲ್ಲಿ, ಬಿ.ಎಸ್.ಯಡಿಯೂರಪ್ಪ ಅವರನ್ನು ಕೆಜೆಪಿಯಿಂದ ವಾಪಸ್ ಬಿಜೆಪಿಗೆ ಕರೆತರುವಲ್ಲಿ ಸಂಘ ಹಾಗೂ ಪಕ್ಷದ ಪ್ರತಿನಿಧಿ ಆಗಿ ಎಂ.ಬಿ.ಭಾನುಪ್ರಕಾಶ್ ಕೆಲಸ ಮಾಡಿದ್ದರು. ರಾಜಕಾರಣದ ಜೊತೆಗೆ ಊರಿನಲ್ಲಿ ಕೃಷಿ, ಹೈನುಗಾರಿಕೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಕೊಂಡಿದ್ದ ಭಾನುಪ್ರಕಾಶ್, ವಿಶಿಷ್ಟ ಭಾಷೆ ಹಾಗೂ ಸಂಪ್ರದಾಯದ ಕಾರಣಕ್ಕೆ ಮತ್ತೂರು ಗ್ರಾಮಕ್ಕೆ ಅಂತಾರಾಷ್ಟ್ರೀಯ ಮನ್ನಣೆ ದೊರಕಿಸಿಕೊಡುವಲ್ಲಿ ಒಡನಾಡಿ ಪಟ್ಟಾಭಿರಾಮ್ ಅವರೊಂದಿಗೆ ಸೇರಿ ಶ್ರಮಿಸಿದ್ದರು. ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ, ಪುತ್ರ ಎಂ.ಬಿ.ಹರಿಕೃಷ್ಣ ಅವರ ರಾಜಕೀಯ ಭವಿಷ್ಯ ರೂಪಿಸಲು ಈಚೆಗೆ ಭಾನುಪ್ರಕಾಶ್ ಪ್ರಯತ್ನ ನಡೆಸಿದ್ದರು.
ಮಹಾತ್ಮಾ ಗಾಂಧೀಜಿ ಅವರ ನೆಚ್ಚಿನ ‘ರಘುಪತಿ ರಾಘವ ರಾಜಾರಾಮ್’ ಭಜನೆ ಹಾಡುತ್ತಲೇ ಬದುಕಿನ ಹೋರಾಟದ ವೇದಿಕೆಯಿಂದಲೂ ಒಡನಾಡಿಗಳ ನೆಚ್ಚಿನ ‘ಭಾನುಜೀ’ ದಿಢೀರನೆ ನಿರ್ಗಮಿಸಿದ್ದಾರೆ. ಇದು ಪಕ್ಷಕ್ಕೆ ಹಾಗೂ ಸಂಘಕ್ಕೆ ಅರಿಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಕೃಷ್ಣಪ್ಪ ಕಣ್ಣೀರಿಟಿದ್ದಾರೆ.