ದಾವಣಗೆರೆ:  ಪ್ರಪಂಚದಲ್ಲೇ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಸಂಘವಿದ್ದರೆ ಅದು ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಇಂತಹ ಸಂಘದ ಬಗ್ಗೆ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ತಮ್ಮ ಮನಸ್ಸಿಗೆ ಬಂದಂತೆ ಹೇಳಿಕೆ ನೀಡಿದ್ದಾರೆಂದು ಬಿಜೆಪಿ ಮುಖಂಡರು ಹಾಗೂ ಲೋಕಸಭಾ ಕ್ಷೇತ್ರದ ಬಿಜೆಪಿ ಪ್ರಬಲ  ಟಿಕೆಟ್ ಆಕಾಂಕ್ಷಿ ಕೆ.ಬಿ‌.ಕೊಟ್ರೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ. 

ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಹೇಳಿಕೆ ಬಗ್ಗೆ  ದಾವಣಗೆರೆ ವಿಜಯಕ್ಕೆಪ್ರತಿಕ್ರಿಯೆ ನೀಡಿ, ಗೂಳಿಹಟ್ಟಿ ಶೇಖರ್ ನಾಗ್ಪುರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕರಾದ ಡಾ.ಹೆಗಡೆವಾರ್ ಜಿ ಅವರ ವಸ್ತು ಸಂಗ್ರಹಾಲಯಕ್ಕೆ ಹೋಗಿದ್ದರು. ಅಲ್ಲಿ ಅವರು ಅಸ್ಪೃಶ್ಯರಾಗಿರುವುದರಿಂದ ಒಳಗೆ ಬಿಟ್ಟಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದು ಖಂಡನೀಯ.

 ವಸ್ತು ಸಂಗ್ರಹಾಲಯಕ್ಕೆ ಹೋಗಲು ಪ್ರವೇಶ ನಿರಾಕರಣೆ ಮಾಡಿರುವುದು ಶುದ್ದ ಸುಳ್ಳು. ಜಾತಿ ನೋಡಿ ಒಳಗೆ ಬಿಟ್ಟಿಲ್ಲ ಎಂದು  ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಹಾಸ್ಯಾಸ್ಪದ. 

ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಜಾತಿ ಹಾಗೂ ಪಂಗಡ ಎಂಬ ಭಾವನೆಯೇ ಇಲ್ಲ. ಈ ಹೇಳಿಕೆ ಸತ್ಯಕ್ಕೆ ದೂರವಾದ ಸಂಗತಿ. ಇಂತಹ ಹೇಳಿಕೆ ಖಂಡನೀಯ. ಆರ್ ಎಸ್ ಎಸ್ ಕಾರ್ಯಕರ್ತ ಎಂದು ಹೇಳಿಕೊಂಡು, ಬಿಜೆಪಿಗೆ ಸೇರಿ ಟಿಕೇಟ್ ಪಡೆದು, ಗೆದ್ದು ಸಚಿವರಾಗಿದ್ದಾರೆ.ಈಗ ಯಾವುದೋ ಒಂದು ದುರುದ್ದೇಶದಿಂದ ಇಂತಹ ಹೇಳಿಕೆನೀಡುತ್ತಿದ್ದಾರೆ. ಆರ್ ಎಸ್ ಎಸ್ ಮುಖ್ಯಸ್ಥರು ಈ ಬಗ್ಗೆ ಸ್ಪಷ್ಟ ನೆ ನೀಡಿದ್ದಾರೆ. ನಾನು ಕೂಡ ಆರ್ ಎಸ್ ಎಸ್ ಕಾರ್ಯಕರ್ತನಾಗಿ ಗೂಳಿಹಟ್ಟಿ ಶೇಖರ್ ಹೇಳಿಕೆ ಖಂಡಿಸುತ್ತೇನೆ.

ಹಸಿ ಸುಳ್ಳು ಹೇಳುವುದು ಸರಿಯಲ್ಲ

ಮಾಜಿ ಶಾಸಕ ಗೂಳಿ ಹಟ್ಟಿ ಶೇಖರ್ ಇಂತಹ ಹಸಿ ಸುಳ್ಳು ಹೇಳುವುದು ಸರಿಯಲ್ಲ ಹಾಗೂ ಅವರಿಗೆ ಶೋಭೆತರುವುದಿಲ್ಲ.ಆರ್ ಎಸ್ ಎಸ್ ಸಂಘದಲ್ಲಿ ಜಾತಿ ನೋಡಿ ಗುರುತಿಸುವುದಿಲ್ಲ. ಎಲ್ಲಾ ಜಾತಿ ಒಳಗೊಂಡು ಸೃಷ್ಟಿಯಾಗಿದೆ ಅದಕ್ಕೆ ಭದ್ರ ಬುನಾದಿ ಹಾಕಿರುವುದು ಹೆಗಡೆವಾರ್ ಜಿಯವರು.

ಯಾವುದೋ ದುರುದ್ದೇಶದಿಂದ ಅಥವಾ ಬೇರೆ ಪಕ್ಷದವರು ಗುರುತಿಸುತ್ತಾರೆ ಎಂದು ಆರ್ ಎಸ್ ಎಸ್ ಬಗ್ಗೆ‌ ಇಂತಹ ಹೇಳಿಕೆ ನೀಡಿರುವುದು ದುರಂತ ಹಾಗೂ ಖಂಡನೀಯ.

ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದು ಸಂಘದ ಪರ ಬ್ಯಾಟಿಂಗ್ ಬೀಸಿದರು.

Share.
Leave A Reply

Exit mobile version