ಚಿತ್ರದುರ್ಗ: ನಗರದ ಪ್ರಮುಖ ಬೀದಿಗಳಲ್ಲಿಂದು ರಾಮ ಜನ್ಮಭೂಮಿಯ ಪವಿತ್ರ ಮಾತ್ರಾಕ್ಷತೆಯ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಆಮಂತ್ರಣ ಅಭಿಯಾನದ ಅಡಿಯಲ್ಲಿ ಅಯೋಧ್ಯೆಯ ರಾಮ ಜನ್ಮ‌ಭೂಮಿಯಿಂದ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಗ್ರಾಮ ಗ್ರಾಮಗಳಿಗೆ ತಲುಪಿಸಲು ಬಂದಿರುವ ಪವಿತ್ರ ಮಂತ್ರಾಕ್ಷತೆಯ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ನಗರದ ಮದಕರಿ ವೃತ್ತದ ಬಳಿಯ ಶ್ರೀರಾಮನ ದೇವಸ್ಥಾನದಲ್ಲಿ  ಬಂಜಾರ ಗುರುಪೀಠದ ಸಂತ ಸೇವಾಲಾಲ್ ಸ್ವಾಮೀಜಿ,  ಮುಖಂಡರು ಚಿತ್ರದುರ್ಗ ಜಿಲ್ಲಾ ಸಂಯೋಜಕ ಜಿ.ಎಸ್.ಅನಿತ್ ಹಾಗೂ ಮಾಜಿ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ ಪವಿತ್ರ ಮಂತ್ರಾಕ್ಷತೆಗೆ ಪೂಜೆ ಸಲ್ಲಿಸಿದರು. ನಂತರ ಶ್ರೀರಾಮ ದೇವಸ್ಥಾನದ ಆವರಣದಲ್ಲಿ ಶ್ರೀರಾಮ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ಸಿಕ್ಕಿತ್ತು‌.

ನಂತರ ಸಾರೋಟಿನಲ್ಲಿ ದೊಡ್ಡದಾದ ಶ್ರೀರಾಮ ದೇವಸ್ಥಾನದ ಮಾದರಿಯನ್ನು ಇಟ್ಟು ನಗರದ ಪ್ರಮುಖ ಬೀದಿಗಳಲ್ಲಿ ಈ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಹಿಳೆಯರು ಕೈನಲ್ಲಿ ಮಂತ್ರಾಕ್ಷತೆಗಳನ್ನ ಹಿಡಿದು ಶ್ರೀರಾಮನ ಪರ ಘೋಷಣೆಗಳನ್ನ ಕೂಗಿ ಶ್ರೀರಾಮ ದೇವರಿಗೆ ಗೌರವ ಸಲ್ಲಿಸಿದ್ದು ಕಂಡು ಬಂತು.

ಜಿಲ್ಲಾ ಸಂಯೋಜಕ ಜಿ.ಎಸ್.ಅನಿತ್ ಮಾತನಾಡಿ, ಅಯೋಧ್ಯದ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ನಿಂದ ಪವಿತ್ರ ಮಂತ್ರಾಕ್ಷತೆ ಬಂದಿದೆ. ಇದನ್ನು ಇಲ್ಲಿಂದ ಮಂಡಲ, ಹೋಬಳಿ, ಪಂಚಾಯಿತಿಗೆ ಕಳುಹಿಸಲಾಗುತ್ತದೆ. ಅದನ್ನು ಅಲ್ಲಿನ ಜನರಿಗೆ ನೀಡಲಾಗುತ್ತದೆ. ಅವರು ಪೂಜೆ ಮಾಡಿದರೆ‌ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ ಎಂದರು.

ಈ ಕಾರ್ಯಕ್ರಮದಲ್ಲಿ ಕೆತೇಶ್ವರ ಮಠದ ಶ್ರೀ ಗಳು ಹಾಗೂ ಸೇವಾಲಾಲ್ ಗುರುಪೀಠ ದ ಶ್ರೀ ಗಳು , ಸಂಘದ ಜಿಲ್ಲಾ ಕಾರ್ಯವಹಾರಾದ ಕೊಂಡ್ಲಹಳ್ಳಿ ನಾಗರಾಜ್ ,ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ರುದ್ರೇಶ್, ಸಂಘದ ಪ್ರಂತಾ ಸಹ ಕಾರ್ಯವಾಹರಾದ ಮಧುಕರ್ ಶಿವಮೊಗ್ಗ , ಪ್ರಭಾಂಜನ್,ದೇವರಾಜ್ ಕೋಟ್ಲಾ ,ಚಂದ್ರಶೇಖರ್ ,ಜಿಲ್ಲಾ ತಂಡದ ಸಂಯೋಜಕರಾದ ಅನಿತ್ ಕುಮಾರ್ ಜಿ.ಎಸ್ ಹಾಗೂ ಮುಖಂಡರೂಗಳು ಉಪಸ್ಥಿತರಿದ್ದರು.

Share.
Leave A Reply

Exit mobile version