ನಂದೀಶ್ ಭದ್ರಾವತಿ, ದಾವಣಗೆರೆ
ರಾಜ್ಯ ಬಿಜೆಪಿ ಅಂತೂ..ಇಂತೂ ದಾವಣಗೆರೆಗೆ ಸಾರಥಿಯನ್ನು ನೇಮಕ ಮಾಡಿದ್ದು, ಊಹಿಸದ ಹೆಸರನ್ನೇ ಬಿಡುಗಡೆ ಮಾಡಿದೆ.ಸಂಘಟನೆ, ಹೋರಾಟ ಸೇರಿದಂತೆ ಸೇವಾವಧಿ ಪರಿಗಣಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಯುವ ನಾಯಕ ರಾಜಶೇಖರ್ ಹೆಸರನ್ನು ಘೋಷಿಸಿದೆ.
ರಾಜಶೇಖರ್ ಸುಮಾರು ಮೂವತ್ತು ವರ್ಷದಿಂದ ಕೆಲಸ ಮಾಡುತ್ತಿದ್ದು, ಅಂದಾಜು 29 ಕೇಸ್ ಗಳಿದ್ದು, 26 ಕೇಸ್ ಗಳು ಖುಲಾಸೆಯಾಗಿದೆ..ಸದ್ಯ ಮೂರು ಕೇಸ್ ಗಳು ಮಾತ್ರ ಬಾಕಿ ಇವೆ ಎನ್ನಲಾಗಿದೆ.
ಪಕ್ಷದಿಂದ ಉಚ್ಚಾಟಿಸಲಾಗಿತ್ತು
ಈ ಹಿಂದೆ ದಾವಣಗೆರೆಯಲ್ಲಿ ಕಾರ್ಪೋರೇಟರ್ ಎಲೆಕ್ಷನ್ ವೇಳೆ ಪಕ್ಷೇತರರಾಗಿ ಪೈಲ್ವಾನ್ ವೀರೇಶ್ ವಿರುದ್ದ ಅಖಾಡಕ್ಕೆ ಇಳಿದಿದ್ದರು. ಆಗ ಇದೇ ರಾಜಶೇಖರ್ ರನ್ನು ಪಕ್ಷ ಉಚ್ಚಾಟನೆ ಮಾಡಿತ್ತು. ಪಾಲಿಕೆ ಚುನಾವಣೆ ಬಳಿಕ ರಾಜಶೇಖರ್ ನ್ನು ಮತ್ತೆ ಬಿಜೆಪಿಗೆ ಸೇರಿಸಿಕೊಳ್ಳಲಾಗಿತ್ತು. ನಂತರ ಅಷ್ಟಾಗಿ ಪಕ್ಷದಲ್ಲಿ ಕಾಣಲಿಲ್ಲ. ಆದರೆ ಹೋರಾಟದಲ್ಲಿ ಕಾಣಿಸಿಕೊಂಡಿದ್ದರು.
ಊಹಿಸಲಾಗದ ಹೆಸರು, ಜಿಲ್ಲಾಧ್ಯಕ್ಷ ಪಂದ್ಯಾದಾಟ ಜೋರಿತ್ತು.
ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ ಇತ್ತು..ಪ್ರಮುಖವಾಗಿ ಬಿ.ಪಿ.ಹರೀಶ್, ಕೆ.ಎಂ.ಸುರೇಶ್, ಶ್ರೀನಿವಾಸ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ್, ಜಗದೀಶ್ ಹೆಸರು ಬಿಜೆಪಿಪಡಸಾಲೆಯಲ್ಲಿ ಭಾರೀ ಓಡಾಟ ನಡೆಸಿತ್ತು.. ಇಷ್ಟು ಜನರಲ್ಲಿ ಮೊದಲು ಕೆ.ಎಂ.ಸುರೇಶ್ , ಬಿ.ಪಿ.ಹರೀಶ್ ರನ್ನು ಫೈನಲ್ ಮಾಡಲಾಗಿತ್ತು. ಆನಂತರ ಸ್ಥಾನದಲ್ಲಿ ಶ್ರೀನಿವಾಸ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ್, ಜಗದೀಶ್ ಹೆಸರು ಇತ್ತು…
ಕೆ.ಎಂ.ಸುರೇಶ್ ರನ್ನು ಮೊದಲು ಫೈನಲ್ ಮಾಡಲಾಗಿತ್ತು..ಆದರೆ ಕೆಲ ಬಿಜೆಪಿ ನಾಯಕರು ಅವರನ್ನು ವಿರೋಧಿಸಿದ್ದರು. ಹಾಗಾಗಿ ಆ ಜಾಗಕ್ಕೆ ರಾಜಶೇಖರ್ ಹೆಸರು ಸೂಚಿಸಲಾಗಿತ್ತು. ನಂತರ ಬಿ.ಪಿ.ಹರೀಶ್ ಹೆಸರನ್ನು ತೆಗೆದುಕೊಳ್ಳಲಾಗಿತ್ತು. ಆದರೆ ವಯಸ್ಸು ಹೆಚ್ಚಾದ ಕಾರಣ ಶಾಸಕ ಬಿ.ಪಿ.ಹರೀಶ್ ಗೆ ಬೆಂಬಲ ನೀಡಲಿಲ್ಲ..ಇನ್ನುಳಿದ ರಾಜನಹಳ್ಳಿ ಶಿವಕುಮಾರ್, ಶ್ರೀನಿವಾಸ ದಾಸ ಕರಿಯಪ್ಪ, ಜಗದೀಶ್ ಗೆ ಹೈಕಮಾಂಡ್ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ..ಅಂತಿಮವಾಗಿ ರಾಜಶೇಖರ್ ಹೆಸರನ್ನು ಫೈನಲ್ ಮಾಡಲಾಯಿತು.
ಎಸ್ಎಆರ್ ಮನೆಗೆ ಭೇಟಿನೀಡಿದ್ದ ರಾಜ್ಯಾಧ್ಯಕ್ಷ ವಿಜಯೇಂದ್ರ
ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾಜಿ ಶಾಸಕ ರವೀಂದ್ರ ನಾಥ್ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ವಿಜಯೇಂದ್ರ ಬಳಿ ಈ ವಿಷಯ ಚರ್ಚೆ ನಡೆದಿತ್ತು. ನಂತರ ರವೀಂದ್ರನಾಥ್ ಬಣ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನೀಡಿತ್ತು..ಹಾಗಂತ ಸಂಸದ ಜಿ.ಎಂ.ಸಿದ್ದೇಶ್ವರ ಬಣ ಸುಮ್ಮನೆ ಇರಲಿಲ್ಲ ಅದು ಕೂಡ ಪೈಪೋಟಿ ನೀಡಿತ್ತು. ಅಂತಿಮವಾಗಿ ಬಿಜೆಪಿ ರವೀಂದ್ರನಾಥ್ ಬಣದ ರಾಜಶೇಖರ್ ಗೆ ಮಣೆ ಹಾಕಿತ್ತು. ಈ ಹಿಂದೆ ಸಂಸದ ಸಿದ್ದೇಶ್ವರ ಬಣದ ವೀರೇಶ್ ಹನಗವಾಡಿ, ಯಶವಂತರಾವ್ ಜಾಧವ್ ಗೆ ಮಣೆ ಹಾಕಲಾಗಿತ್ತು..ಹಾಗಾಗಿ ಕ್ಷೇತ್ರದ ಪಥ ಬದಲಾವಣೆಯಾಗಿದೆ.
ಸಂಘಟನೆ ಕೈ ಹಿಡಿಯಿತು
ಬಿಜೆಪಿಯಲ್ಲಿ ಮಾಜಿ ಶಾಸಕ ಎಸ್.ಎ.ರವೀಂದ್ರನಾಥ್, ಸಂಸದ ಸಿದ್ದೇಶ್ವರ ಬಣಗಳು ತಮ್ಮವರೇ ಜಿಲ್ಲಾಧ್ಯಕ್ಷರಾಗಬೇಕೆಂದು ಪಟ್ಟು ಹಿಡಿದಿದ್ದರು. ಅಲ್ಲದೇ ಭಾರೀ ಪೈಪೋಟಿಯಿತ್ತು..ಈ ಬಗ್ಗೆ ಬೆಂಗಳೂರಿನಲ್ಲಿ ಮೂರ್ನಾಲ್ಕು ಬಾರಿ ಸಭೆ ನಡೆದಿತ್ತು. ಆದರೆ ಒಮ್ಮತ ಮೂಡದ ಕಾರಣ ಸಂಘಪರಿವಾರ ಸೂಚಿಸಿದ ರಾಜಶೇಖರ್ ಹೆಸರು ಅಂತಿಮವಾಯಿತು.
ಲೋಕಸಭೆ, ಸಾಲು, ಸಾಲು ಚುನಾವಣೆ ಟಾರ್ಗೆಟ್
ಈ ಬಾರಿ ಬಿಜೆಪಿ ಯುವ ಪಡೆ ಕಟ್ಟಲು ಮುಂದಾಗಿದ್ದು, ಲೋಕಸಭೆ ಟಾರ್ಗೆಟ್ ಆದ ಕಾರಣ ಸಂಘಟನೆ, ಹೋರಾಟ, ಚತುರತೆ, ಪಕ್ಷ ನಿಷ್ಠೆ ಇವುಗಳ ಆಧಾರದ ಮೇಲೆ ರಾಜಶೇಖರ್ ಆಯ್ಕೆಯಾಗಿದ್ದಾರೆ. ಲೋಕ ಸಭೆ, ತಾಲೂಕು, ಜಿಲ್ಲಾ ಪಂಚಾಯಿತಿ ಮೇಲೆ ಕಣ್ಣಿಟ್ಟಿದ್ದು, ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕಾದ ಅನಿರ್ವಾಯತೆ ಇದೆ. ಹಾಗಾದ್ರೆ ಮಾತ್ರ ಚುನಾವಣೆ ಗೆಲ್ಲಿಸಲು ನೂತನ ಜಿಲ್ಲಾಧ್ಯಕ್ಷರಿಗೆ ಸಾಧ್ಯವಾಗಲಿದೆ. ಏನೇ ಆಗಲಿ ಸಾಮಾನ್ಯ ಕಾರ್ಯಕರ್ತನಿಗೆ ಜಿಲ್ಲಾಧ್ಯಕ್ಷದ ಸ್ಥಾನ ಒಲಿದು ಬಂದಿದ್ದು, ಸಾರಥಿ ಓಟ ಹೇಗಿರುತ್ತದೆ ಎಂದು ಕಾದು ನೋಡಬೇಕು.
ದಾವಣಗೆರೆ ವಿಜಯಕ್ಕೆ ಫಸ್ಟ್ ರಿಯಾಕ್ಷನ್
ನಾನು ಬಿಜೆಪಿ ಜಿಲ್ಲಾಧ್ಯಕ್ಷನಾಗಲು ಎಲ್ಲ ನಾಯಕರು ಕಾರಣ. ಲೋಕಸಭೆ ಗೆದ್ದು, ಮೊದಲು ಮೋದಿ ಪ್ರಧಾನಿಯಾಗಬೇಕೆಂಬ ಆಸೆ, ಜತೆಗೆ ಬಿಜೆಪಿ ರಾಜ್ಯ ಸರಕಾರ ತರಬೇಕೆಂಬ ಕನಸಿದೆ. ಎಲ್ಲರನ್ನು ಒಟ್ಟುಗೂಡಿಸಿಕೊಂಡು ಪಕ್ಷ ಬೆಳೆಸುತ್ತೇನೆ.
-ರಾಜಶೇಖರ್, ನೂತನ ಜಿಲ್ಲಾಧ್ಯಕ್ಷ