ನಿರಾವರಿ ಯೋಜನೆ ಸಮಗ್ರವಾಗಿ ಅನುಷ್ಠಾನ , ಕೃಷಿ ಕಾಯ್ದೆ, ವಕ್ಫ್ ಬೋರ್ಡ್ ನೀತಿ ವಿವಿಧ ಬೇಡಿಕೆ ಈಡೇರಿಕೆ ಬಗ್ಗೆ ನ.೨೦ ರಂದು ಸಭೆ
ದಾವಣಗೆರೆ;
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು (ವಾಸುದೇವ ಮೇಟಿ ಬಣ) ಇದೇ ನ.೨೦ ರಂದು ಬೆಳಿಗ್ಗೆ ೧೦.೩೦ ಕ್ಕೆ ನಗರದ ಎಪಿಎಂಸಿ ಭವನದಲ್ಲಿ ರಾಜ್ಯ ಸಮಿತಿ ಸಭೆ ಕರೆಯಲಾಗಿದೆ ಎಂದು ಸೇನೆಯ ಜಿಲ್ಯಾಧ್ಯಕ್ಷ ಗುಮ್ಮನೂರು ಬಸವರಾಜ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ವಿರುದ್ಧ ಮೂರು ಕೃಷಿ ಕಾಯ್ದೆಗಳನ್ನು ಕೂಡಲೇ ಕೈ ಬಿಡಬೇಕು. ಜಿಲ್ಲೆಯಲ್ಲಿ ನಿರಾವರಿ ಯೋಜನೆಯನ್ನು ಸಮಗ್ರವಾಗಿ ಅನುಷ್ಠಾನ ಗೊಳಿಸಬೇಕು. ರೈತರ ಬೆಳೆಗಳನ್ನು ಖರೀದಿ ಕೇಂದ್ರಗಳನ್ನು ಕೂಡಲೇ ತರಬೇಕು. ಎಲ್ಲಾ ಜಿಲ್ಲೆಯಲ್ಲಿ ಬಗರ್ ಹುಕ್ಕಂ ಸಾಗುವಳಿದಾರರಿಗೆ ಹಕ್ಕುಪತ್ರವನ್ನು ನೀಡಬೇಕು.
ರೈತರ ಪಂಪ್ಸೆಟ್ಗಳಿಗೆ ಆಧಾರ್ ಜೋಡಣೆಯನ್ನು ಕೈಬಿಡಬೇಕು. ರೈತರ ಜಮೀನಿನ ಪಹಣಿಯಲ್ಲಿ ವಾಕ್ ಬೋರ್ಡ್ ನೀತಿಯನ್ನು ಕೈಬಿಡಬೇಕು. ಮತ್ತು ಹಲವಾರು ಸಮಸ್ಯೆಗಳನ್ನು ಸಭೆಯಲ್ಲಿ ಚರ್ಚಿಸಲಾಗುತ್ತದೆ.
ರೈತರು ಮತ್ತು ಬಡವರು ಕೂಲಿ-ಕರ್ಮಿಕರು ಈ ಸಭೆಗೆ ಹಾಜರು ಆಗಬೇಕು ಹೆಚ್ಚಿನ ಸಂಖ್ಯೆಯಲ್ಲಿ ಈ ಸಭೆಯನ್ನು ಯಶಸ್ವಿ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸೇನೆಯ ಪದಾಧಿಕಾರಿಗಳಾದ ಕೆಂಚಮ್ಮನಹಳ್ಳಿ ಹನುಮಂತಪ್ಪ, ಚಿಕ್ಕಬೂದಿಹಾಳ್ ಭಗತ್ ಸಿಂಹ, ಕೋಲ್ಕುಂಟೆಯ ಉಚ್ಚೆಂಗಪ್ಪ, ಬಸವರಾಜ್, ಹೊಟ್ಟಿಗನಹಳ್ಳಿ ಸುನಿಲ್ ಇದ್ದರು