ದಾವಣಗೆರೆ : ದಾವಣಗೆರೆಯಲ್ಲಿ ನಡೆಯುತ್ತಿರುವ ವೀರಶೈವ ಮಹಾಸಭಾದ ಅಧಿವೇಶನದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಸಮಾಜ‌ಕಟ್ಟಿದ ಶಿರಸಿಂಗಿ‌ ಲಿಂಗರಾಜು ಅವರಿಗೆ ಅಭೂತ ಪೂರ್ವ ಗೌರವ ಸಿಕ್ಕಿತ್ತು..ಈ ಮೂಲಕಧಾರವಾಡದ ಶ್ರೀ ಲಿಂಗಾಯತ ವಿವಿಧೋದ್ದೇಶ ಸಂಘದ ಅಧ್ಯಕ್ಷರಾದ ರವೀಂದ್ರ ಕುಡುವಕ್ಕಲಿಗರ್ ಹೋರಾಟಕ್ಕೆ ಜಯ ಸಿಕ್ಕಿತ್ತು‌

ರವೀಂದ್ರ ಕುಡುವಕ್ಕಲಿಗರ್ ಹಾಗೂ ಅವರ ತಂಡ ಕಳೆದ ನಾಲ್ಕುದಿನದಿಂದ ದಾವಣಗೆರೆಯಲ್ಲಿಯೇ ಬಿಡಾರ ಹೂಡಿದ್ದು, ಸ್ವಾತಂತ್ರ್ಯ ಪೂರ್ವದಲ್ಲಿ ಸಮಾಜ‌ಕಟ್ಟಿದ ಶಿರಸಿಂಗಿ‌ ಲಿಂಗರಾಜು ಅವರಿಗೆ ಗೌರವ ನೀಡಲೇಬೇಕೆಂದು ಅವರು ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಉಪಾಧ್ಯಕ್ಷ ಅಥಣಿ ವೀರಣ್ಣಗೆ ಮನವಿ ಸಲ್ಲಿಸಿದ್ದರು. ಅಲ್ಲದೇ ಶಿರಸಿಂಗಿ ಲಿಂಗರಾಜ್ ಇತಿಹಾಸ ಹೇಳಿದ್ದರು. ಈ ಹೋರಾಟಕ್ಕೆ ಮಣಿದ ವೀರಶೈವ ಮಹಾಸಭಾ ಅಧಿವೇಶನದ ಮುಖಂಡರು ಬೃಹತ್ ವೇದಿಕೆ ಮೇಲೆ ಶಿರಸಿಂಗಿ ಲಿಂಗರಾಜು ಪೋಟೋ, ಹಾನಗಲ್ ಕುಮಾರಸ್ವಾಮಿ ಶ್ರೀಗಳ ಪೋಟೋ ಇಟ್ಟು ಇಬ್ಬರಿಗೂ ಸಮಾನವಾದ ಗೌರವ ಸಲ್ಲಿಸಿದರು.

ನಂತರ ಮಾತನಾಡಿದ ರವೀಂದ್ರ ಕುಡುವಕ್ಕಲಿಗರ್, ಮಹಾ ಅಧಿವೇಶನದಲ್ಲಿ‌ ಸ್ವಾತಂತ್ರ್ಯ ಪೂರ್ವದಲ್ಲಿ ಸಮಾಜ‌ಕಟ್ಟಿದ ಶಿರಸಿಂಗಿ‌ ಲಿಂಗರಾಜು ಅವರನ್ನು ಕಡೆಗಣಿಸಲಾಗಿತ್ತು. ಈಗ ಅವರಿಗೆ ಗೌರವ ಸಿಕ್ಕಿದೆ ಎಂದು ಹೇಳಿದರು.

ಶಿರಸಿಂಗಿ ಇತಿಹಾಸ ಹೇಳಿದ  ರವೀಂದ್ರ ಕುಡುವಕ್ಕಲಿಗರ್

ಶಿರಸಿಂಗಿ ಲಿಂಗರಾಜು‌ಅವರು ೧೯೦೬ ರಲ್ಲಿ ಮರಣಶಾಸನ ಪತ್ರ ಬರೆದು ಅಂದಿನ ಬೆಳಗಾವಿ ಜಿಲ್ಲಾಧಿಕಾರಿಗೆ ನೀಡಿ ಮರಣಾನಂತರ ಉಯಿಲು‌ಪತ್ರವನ್ನು ಬ್ರಿಟೀಷ್ ವೈಸ್ ರಾಯ್ ಅವರ ಮೂಲಕ ಒಡೆದು ಓದಲು ಹೇಳಿದ್ದರು.ಆ ಪತ್ರ ಓದಿದಾಗ ವೀರಶೈವ ಲಿಂಗಾಯತ ಸಮಾಜಕ್ಕೆ ಅವರ ಜೊಡುಗೆ ಏನೆಂದು ತಿಳಿಯುತ್ತದೆ. ಸೂರ್ಯ ಚಂದ್ರ ಇರುವವರೆಗೂ ಇಂತಹ ಉಯಿಲು ಪತ್ರ ಯಾರಿಂದಲೂ ಬರೆಯಲು ಸಾಧ್ಯವಿಲ್ಲ.ಶಿರಸಿಂಗಿ ಲಿಂಗರಾಜು ಅವರು ವ್ಯಕ್ತಿಯಲ್ಲ ಒಂದು ಶಕ್ತಿ ಅವರನ್ನು ದಾವಣಗೆರೆಯಲ್ಲಿ ನಡೆಯುತ್ತಿರುವ ೨೪ ನೇ ಮಹಾಅಧಿವೇಶನದಲ್ಲಿ ಕಡೆಗಣಿಸಿರುವುದು ಖಂಡನೀಯ ಎಂದು ಹೇಳಿದ್ದು, ಅಧ್ಯಕ್ಷರು ಗೌರವ ಕೊಟ್ಟು ಅವರಿಗೆ ಸಲ್ಲಿಸಬೇಕಾದ ಗೌರವ ನೀಡಿದೆ ಎಂದು ರವೀಂದ್ರ ಕುಡುವಕ್ಕಲಿಗರ್ ಹೇಳಿದರು.

ಶಿರಸಿಂಗಿ ಲಿಂಗರಾಜರ ಫಲಕ ಹಾಕಬೇಕೆಂದು ಒತ್ತಾಯಿಸಿದ್ದೇ

ಇಂದಿಗೂ ನವಲಗುಂದ ಶಿರಸಿಂಗಿ ಲಿಂಗರಾಜು ಟ್ರಸ್ಟ್ ನಲ್ಲಿ ೨೦ ಕೋಟಿಗಿಂತ ಅಧಿಕಹಣಕಾಸಿನ ಸೌಲಭ್ಯವಿದೆ ಅವರ ಆಶಯದಂತೆ ಶಿಕ್ಷಣ,ಕೃಷಿಗೆ ನೆರವಾಗುತ್ತಿದೆ ಎಂದರು.೧೦೦ ವರ್ಷದ ಹಿಂದೆಯೇ ಅವರ ಹೆಸರಿನಲ್ಲಿ ಕೃಷಿ ಅಧ್ಯಯನ ಕೇಂದ್ರವಿದೆ. ಆದ್ದರಿಂದ ಮಹಾಅಧಿವೇಶನಕ್ಕೆ ಆಗಮಿಸುವ ಮಾರ್ಗದಲ್ಲಿ ಶಿರಸಿಂಗಿ ಲಿಂಗರಾಜರ ಫಲಕ ಹಾಕಬೇಕು ಬೇಕೆಂದು ಒತ್ತಾಯ ಮಾಡಲಾಗಿತ್ತು.ವೀರಶೈವ ಲಿಂಗಾಯತ ಮಹಾಸಭಾ ಸ್ಥಾಪನೆಗೆ ಕಾರಣರಾದವರಲ್ಲಿ ಒಬ್ಬರಾದ ಶಿರಸಿಂಗಿ ಲಿಂಗಾರಜು ಅವರನ್ನೇ ಮರೆತಿರುವುದು ನಮಗೆ ಸಾಕಷ್ಟು ನೋವು ತಂದಿತ್ತು.

ನಾವು ಈ ಬಗ್ಗೆ ಧಾರವಾಡದಲ್ಲಿ ಸಮಾಜದ ಮುಖಂಡರಾದ ವೀರಣ್ಣ ಮತ್ತಿಕಟ್ಟೆ ಸೇರಿದಂತೆ ಅನೇಕ‌ ಮುಖಂಡರೊಂದಿಗೆ ಚರ್ಚೆ ನಡೆಸಿದ್ದೇವು. ಅಲ್ಲದೇ ನಮ್ಮೊಂದಿಗೆ ಹಾವೇರಿ,ಗದಗ ಜಿಲ್ಲೆಯ ಸಮಾಜ ಬಾಂಧವರು ಕೂಡ ಭಾಗವಹಿಸಿದ್ದರು.  ಇದೀಗ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರಿಗೆ ನಮ್ಮ ಮನವಿಗೆ ಸ್ಪಂದಿಸಿದ್ದಾರೆ ಎಂದರು.

ಪ್ರಥಮ ಸಂಸ್ಥಾಪಕ 

ಅಖಿಲ ಭಾರತ ವೀರಶೈವ ಮಹಾಸಭೆಯನ್ನು ಸುಮಾರು 119 ವರ್ಷಗಳ  ಹಿಂದೆಯೇ ಇದರ ಪ್ರಥಮ ಸಂಸ್ಥಾಪಕ ಅಧ್ಯಕ್ಷರಾದ ಶಿರಸಂಗಿ ಲಿಂಗರಾಜು ಅವರ ಭಾವಚಿತ್ರ ಅಳವಡಿಸಬೇಕು ಎಂದು ಒತ್ತಾಯಿಸಿದ್ದು, ಭಾವಚಿತ್ರ ಹಾಕಲಾಗಿದೆ. ಇದರ ಪ್ರಥಮ ಅಧಿವೇಶನ ಧಾರವಾಡ  ಟೌನ್ ಹಾಲ್ ನಲ್ಲಿ  ನಡೆದಿತ್ತು. ಅದರ ಜೊತೆಗೆ ದ್ವಿತೀಯ ಅಧಿವೇಶನ 1905 ರ ಜುಲೈ 13, 14, 15ರಂದು ಮಹಾಅಧಿವೇಶನ ನಡೆದಿತ್ತು.. ಈ ಎರಡು ಮಹಾ ಅಧಿವೇಶನಗಳಿಗೆ ಶಿರಸಂಗಿ ಲಿಂಗರಾಜು ಅವರೇ ಸರ್ವಾಧ್ಯಕ್ಷರಾಗಿ ಸಂಸ್ಥಾಪಕರಾಗಿ ಕಾರ್ಯನಿರ್ವಹಿಸಿದ್ದರು. ಅವತ್ತಿನ ಕಾಲದಲ್ಲಿ ಅತ್ಯಂತ ಹೆಚ್ಚು ಧನಸಹಾಯವನ್ನು ನೀಡಿ ಲಿಂಗಾಯಿತ ಒಳಪಂಗಡಗಳನ್ನ ಒಗ್ಗೂಡಿಸಲು ಕಾರಣಿಭೂತರಾದವರು ಶಿರಸಂಗಿ ಲಿಂಗರಾಜ್ ಅವರು ಆಳ್ಟಾಲ್ ರುದ್ರ ಗೌಡ್ರು, ಸಿಸಿ  ಬಸುನಾಳ್,, ಗುಲಗಂಜಿ ಹೀಗೆ ಅನೇಕ ಜನ ಮುಖಂಡರು ಭಾಗವಹಿಸಿ ಅವತ್ತಿನ  ಕಾಲದಲ್ಲಿ ಜನಗಳನ್ನು ಒಗ್ಗೂಡಿಸಿದ್ದರು. ಆಗ ಈಗಿನಂತೆ ಮೊಬೈಲ್ , ಬಸ್ಸಿನ ವ್ಯವಸ್ಥೆ ಇರಲಿಲ್ಲ ಪತ್ರಿಕಾ ಮಾಧ್ಯಮವಾಗಲಿ ಯಾವುದು ಇರದಂತಹ ಸಂದರ್ಭದಲ್ಲಿ ಕುದುರೆಯ ಸಾರೋಟಿಯಲ್ಲಿ ಇಡೀ ಕರ್ನಾಟಕವನ್ನ ಸುತ್ತಾಡಿ ಎಲ್ಲಾ ಲಿಂಗಾಯತ ಒಳಪಂಗಡಗಳನ್ನು ಕೂಡಿಸಿ ಒಂದುಗೂಡಲು ಕಾರಣಿಭೂತರಾಗಿದ್ದವರು ಶಿರಸಿಂಗಿ ಶ್ರೀಗಳು.

ಇಂತಹ ಒಂದು ಸಂದರ್ಭದಲ್ಲಿ ನಾವು ನಮ್ಮ ಹಿರಿಯರಾದ  ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಹಾಗೂ ಉಪಾಧ್ಯಕ್ಷರಾದ ಅಥಣಿ ವೀರಣ್ಣನವರಿಗೂ ಕಾರ್ಯದರ್ಶಿಗಳಾದ ರೇಣುಕಾ ಪ್ರಸನ್ನವರಿಗೂ ಅಭಿನಂದನೆ ಸಲ್ಲಿಸುತ್ತೇವೆ‌ ಎಂದು ಹೇಳಿದರು.

ಪ್ರತಿಯೊಬ್ಬರಿಗೂ ಗೊತ್ತಾಗುವಂತೆ ಮಾಡಿದ್ದೇವೆ‌ 

ಅಖಿಲ ಭಾರತ ವೀರಶೈವ ಮಹಾಸಭೆಯನ್ನ ಕಟ್ಟಿದವರು ಶಿರಸಂಗಿ ಲಿಂಗರಾಜು ಎನ್ನುವುದನ್ನು ತೋರಿಸಿಕೊಟ್ಟಿದ್ದೇವೆ. ಈ ಒಂದು ಅಧಿವೇಶನದಲ್ಲಿ ಅವರ ವೇದಿಕೆಯಾಗಲಿ ಅಥವಾ ಒಂದು ಫೋಟೋವನ್ನಾಗಲಿ ಹಾಕಬೇಕಾಗಿತ್ತು ಅಂತ ಹೇಳಿದ್ದೇವು. ಅದರಂತೆ ಅಧಿವೇಶನದಲ್ಲಿ ಸಂಘಟಕರು ನಮ್ಮಿಂದ ತಪ್ಪಾಗಿದೆ ಅಂತ ಹೇಳಿ ನಮ್ಮಲ್ಲಿ ಒಪ್ಪಿಕೊಂಡು ನಮ್ಮ ಮನವಿಗೆ ಓಗೊಟ್ಟು ಅವರ ಒಂದು ಫೋಟೋವನ್ನು ವೇದಿಕೆಯಲ್ಲಿ ಇಡಲು ಅನುಮತಿ ಕೊಟ್ಟಿದ್ದರು.

ಹಾಗಾಗಿ ಅಖಿಲ ಭಾರತ ವೀರಶೈವ ಮಹಾಸಭೆಯನ್ನ ಕಟ್ಟಿದವರು ಶಿರಸಂಗಿ ಲಿಂಗರಾಜು ಅವರಿಗೆ ಗೌರವ ಸಿಕ್ಕಿದೆ ಎಂದು ಧಾರವಾಡದ ಶ್ರೀ ಲಿಂಗಾಯತ ವಿವಿಧೋದ್ದೇಶ ಸಂಘದ ಅಧ್ಯಕ್ಷರಾದ ರವೀಂದ್ರ ಕುಡುವಕ್ಕಲಿಗರ್ ಸಂತಸ ವ್ಯಕ್ತಪಡಿಸಿದರು.

Share.
Leave A Reply

Exit mobile version