ಬೆಂಗಳೂರು: ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದವರ ಹೆಸರನ್ನು ಶಿಕ್ಷಣ ಇಲಾಖೆ ಹೊರಡಿಸಿದೆ.
2024-25ನೇ ಸಾಲಿಗೆ 20 ಪ್ರಾಥಮಿಕ ಶಾಲಾ ಶಿಕ್ಷಕರಿಗೆ, 11 ಪ್ರೌಢ ಶಾಲಾ ಶಿಕ್ಷಕರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯಿಂದ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗಾಗಿ ಪ್ರಾಥಮಿಕ ಶಾಲಾ ವಿಭಾಗದಿಂದ 20 ಶಿಕ್ಷಕರು ಮತ್ತು ಪ್ರೌಢಶಾಲಾ ವಿಭಾಗದಿಂದ ಓರ್ವ ವಿಶೇಷ ಶಿಕ್ಷಕ ಒಳಗೊಂಡಂತೆ 11 ಶಿಕ್ಷಕರನ್ನು ಆಯ್ಕೆ ಮಾಡಿರುವುದಾಗಿ ತಿಳಿಸಿದೆ.
2024-25ನೇ ಸಾಲಿನ ರಾಜ್ಯ ಮಟ್ಟದ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾದ ಈ ಪುರಸ್ಕೃತರ ಪಟ್ಟಿಯಲ್ಲಿನ ಮಹಿಳಾ ಶಿಕ್ಷಕರುಗಳಿಗೆ ಅಕ್ಷರ ಮಾತೆ ಸಾವಿತ್ರಿಬಾಯಿ ಪುಲೆ ಇವರ ಹೆಸರಿನಲ್ಲಿ ಸೆ.5,2024ರಂದು ನಡೆಯುವ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆಯಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಈ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರು/ಮುಖ್ಯ ಶಿಕ್ಷಕರು/ವಿಶೇಷ ಶಿಕ್ಷಕರುಗಳಿಗಳಿಗೆ ತಲಾ ರೂ.25,000/- ರಂತೆ ಒಟ್ಟು 7,75,000 ಗಳ ನಗದು ಪುರಸ್ಕಾರ ನೀಡಲು ಹಾಗೂ ವೆಚ್ಚವನ್ನು ರಾಜ್ಯ ಶಿಕ್ಷಣ ಕಲ್ಯಾಣ ನಿಧಿ ಮತ್ತು ವಿದ್ಯಾರ್ಥಿಗಳ ಕ್ಷೇಮಾಬಿವೃದ್ಧಿ ಬೆಂಗಳೂರು ಇಲ್ಲಿಂದ ಭರಿಸಲು ಅನುಮತಿ ನೀಡಿ ಆದೇಶಿಸಿದೆ.
ಪ್ರಶಸ್ತಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರು
ಚಿಕ್ಕೋಡಿಯ ಉಳಾಗಡ್ಡಿವಾಡಿ ಶಾಲೆಯ ಪದ್ಮಶ್ರೀ ಸುರೇಶ್, ಕಲಬುರುಗಿ ಉತ್ತರ ವಲಯದ ಎಸ್.ಮಲ್ಲಿಕಾರ್ಜುನ್, ದಾವಣಗೆರೆ ಜಿಲ್ಲೆ ಹರಿಹರದ ಹಿಂಡಸಘಟ್ಟ ಕ್ಯಾಂಪ್ನ ಬಿ.ಅರುಣ್ಕುಮಾರ್, ಮೈಸೂರು ಗ್ರಾಮಾಂತರದ ಕೆ.ಎಸ್.ಮಧುಸೂದನ್, ಬೆಳಗಾವಿಯ ಮರಾಠಿ ಶಾಲೆ ಅಸ್ಮಾ ಇಸ್ಮಾಯಿಲ್ ನಧಾಪ್, ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿಯ ನೀರ್ಕೇರೆ ಶಾಲೆ ಕೆ.ಯುಮುನಾ, ಹಾವೇರಿ ಬ್ಯಾಡಗಿಯ ಜಮೀರ್ ಅಬ್ದುಲ್ ಗಫಾರಸಾಬ ರಿತ್ತಿ, ಚಿಕ್ಕಬಳ್ಳಾಪುರ ಜಿಲ್ಲೆಯ ಇನಮಿಂಚೇನಹಳ್ಳಿಯ ಸುಶೀಲಮ್ಮ, ಮಧುಗಿರಿಯ ಬಸವನಹಳ್ಳಿ ಶಾಲೆ ಎಸ್.ವಿ.ರಮೇಶ್, ಹಳೇ ಹುಬ್ಬಳ್ಳಿಯ ಇಂಡಿಪಂಪ ಶಾಲೆಯ ಎಂ.ಹನುಮಪ್ಪ ಕುಂದರಗಿ, ಶಿರಸಿ ಮುಂಡಗೋಡದ ಜೋಗೇಶ್ವರ ಹಳ್ಳದ ರಾಮಚಂದ್ರ ಶೇಷಾಜಪ್ಪ, ಶಿವಮೊಗ್ಗ ಗುತ್ಯಪ್ಪ ಕಾಲೊನಿಯ ಶಾಲೆ ಎಂ.ಭಾಗೀರಥಿ, ವಿಜಯನಗರ ಜಿಲ್ಲೆಯ ಹಡಗಲಿ ಶಾಲೆಯ ಎಲ್.ಮಧುನಾಯ್ಕ್, ರಾಮನಗರ ಚನ್ನಪಟ್ಟಣದ ವಿದ್ಯಾಸಂದ್ರ, ಅರಳಾಳು ಸಂದ್ರ, ವಿದ್ಯಾಸಂದ್ರ ಶಾಲೆಯ ಪಿ.ಸುರೇಶ್, ಯಾದಗಿರಿ ಸುರಪುರ ತಾಲೂಕಿನ ಆರ್ಕೆಎನ್ ನಗರದ ಬಸ್ಸಾಪುರ ಶಾಲೆಯ ಎಸ್.ನೀಲಪ್ಪ ತೆಗ್ಗಿ, ಉತ್ತರಕನ್ನಡದ ಭಟ್ಕಳದ ಹೊನ್ನೆಮಡಿ, ಬೆಳಕೆ ಶಾಲೆಯ ಎಸ್.ರಾಘವೇಂದ್ರ, ದೊಡ್ಡಬಳ್ಳಾಪುರ ಬೀಡಿಕೆರೆ ಶಾಲೆಯ ಮಂಗಳಕುಮಾರಿ, ಗದಗ ಗ್ರಾಮಾಂತg ಶಾಲೆಯ ರತ್ನಾಬಾಯಿ ಪ್ರಶಸ್ತಿ ಪಡೆದಿದ್ದಾರೆ.
ಪ್ರಶಸ್ತಿ ಪಡೆದ ಪ್ರೌಢಶಾಲೆ ಶಿಕ್ಷಕರು
ಚಿಕ್ಕಮಗಳೂರು ಕೊಪ್ಪ ತಾಲೂಕಿನ ಆರ್.ಡಿ.ರವೀಂದ್ರ, ಬೆಂಗಳೂರು ಗ್ರಾಮಾಂತರದ ನೆಲಮಂಗಲ ತಾಲೂಕಿನ ಲಕ್ಷ್ಮೀನರಸಿಂಹಸ್ವಾಮಿ ಪ್ರೌಢಶಾಲೆಯ ಟಿ.ಕೆ.ರವಿಕುಮಾರ್, ಉತ್ತರಕನ್ನಡದ ಕುಮಟಾದ ಮಮಹಾದೇವ ಬೊಮ್ಮುಗೌಡ, ಶಿವಮೊಗ್ಗದ ತೀರ್ಥಹಳ್ಳಿಯ ಹೊಸೂರು ಗುಡ್ಡೇಕೇರಿಯ ಟಿ.ವೀರೇಶ, ಹುಬ್ಬಳ್ಳಿ-ಧಾರವಾಡದ ಮೃತ್ಯುಂಜಯ ಶಾಲೆಯ ಕಳಕಮಲ್ಲೇಶ ಪಟ್ಟಣ ಶೆಟ್ಟಿ, ಬೆಂಗಳೂರು ಉತ್ತರವಲಯದ ಎಸ್.ಶಾಮಲ, ಉಡುಪಿಯ ಕಾರ್ಕಳ ತಾಲೂಕಿನ ವಿನಾಯಕ ನಾಯ್ಕ್, ಬೆಂಗಳೂರು ದಕ್ಷಿಣ ವಲಯದ ಕೋನಪ್ಪ ಅಗ್ರಹಾರದ ಸಿ.ಪದ್ಮಾವತಿ, ವಿಜಯಪುರ ಇಂಡಿಯ ಶಶಿಕಲಾ, ಚಿಕ್ಕಬಳ್ಳಾಪುರ ಶಾಲೆಯಹರೀಶ್ ರಾಜ್ ಅರಸ್, ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ವಿಶ್ವನಾಥ್ಗೌಡ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.