ನಂದೀಶ್ ಭದ್ರಾವತಿ, ದಾವಣಗೆರೆ
ಹದಿನೈದು ಪ್ರಶಸ್ತಿಗಳನ್ನು ಬಾಚಿಕೊಂಡ ದಾವಣಗೆರೆ ಅಂಚೆ ವಿಭಾಗ… ಮಂಗಳೂರಿನ ಓಷಿಯನ್ ಪರ್ಲ್ ಹೋಟೆಲ್ ನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ… 2022ರ ಮೇ ತಿಂಗಳಿನಿಂದ ಪ್ರಾರಂಭಗೊಂಡ ದಾವಣಗೆರೆ ಅಂಚೆ ವಿಭಾಗ 2023-2024 ನೇ ಸಾಲಿನ ಉತ್ತಮ ಸಾಧನೆಗೆ ಭಾಜನವಾಗಿದ್ದು ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.…
ಕರ್ನಾಟಕ ವಲಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ದಾವಣಗೆರೆ ಅಂಚೆ ವಿಭಾಗ ಹದಿನೈದು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ನಿನ್ನೆ ಮಂಗಳೂರಿನ ಓಷಿಯನ್ ಪರ್ಲ್ ಹೊಟೆಲ್ ನಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭದ ನೆರವೇರಿತು.
ಅಂಚೆ ಜೀವ ವಿಮೆ ಪ್ರೀಮಿಯಂ, ಸಾವರಿನ್ ಗೋಲ್ಡ್ ಬಾಂಡ್ ಹಾಗೂ ಅಪಘಾತ ವಿಮೆ ಮಾಡಿಸುವಲ್ಲಿ ದ್ವಿತೀಯ ಸ್ಥಾನವನ್ನೂ ಹಾಗೂ ಅಂಚೆ ಜೀವವಿಮೆ ಮೊದಲ ವರ್ಷದ ಪ್ರೀಮಿಯಂ ಹಾಗೂ ಸ್ಪೀಡ್ ಪೋಸ್ಟ್ ಆದಾಯ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿತು.
ಇನ್ನು ದಾವಣಗೆರೆ ಹಾಗೂ ಚನ್ನಗಿರಿ ಅಂಚೆ ಉಪ ವಿಭಾಗಗಳು ಕ್ರಮವಾಗಿ ಅಂಚೆ ಜೀವವಿಮೆ ಹಾಗೂ ಅಪಘಾತ ವಿಮೆ ಮಾಡಿಸುವಲ್ಲಿ ಪ್ರಶಸ್ತಿ ಪಡೆದುಕೊಂಡಿವೆ. ನಗರದ ದೇವರಾಜ ಅರಸ್ ಅಂಚೆ ಕಚೇರಿ ಅತೀ ಹೆಚ್ಚು ಸಣ್ಣ ಉಳಿತಾಯದ ಹೊಸ ಖಾತೆ ಮಾಡಿಸುವಲ್ಲಿ ಪ್ರಶಸ್ತಿ ಪಡೆದರೆ ನಗರದ ವಿದ್ಯಾನಗರ ಅಂಚೆ ಕಚೇರಿಯ ಚೇತನ್ ಅತೀ ಹೆಚ್ಚು ಅಂಚೆ ಜೀವ ವಿಮಾ ಪ್ರೀಮಿಯಂ ಪಡೆದು ದ್ವಿತೀಯ ಪ್ರಶಸ್ತಿ ಪಡೆದುಕೊಂಡರು.
ಮಾರುಕಟ್ಟೆ ಅಧಿಕಾರಿ ಸಂತೋಷ್ ಅಂಚೆ ಜೀವವಿಮೆ, ಅಪಘಾತ ವಿಮೆ ಹಾಗೂ ಉತ್ತಮ ಮಾರ್ಕೆಟಿಂಗ್ ವಿಭಾಗದಲ್ಲಿ ಮೂರು ಪ್ರಶಸ್ತಿ ಪಡೆದುಕೊಂಡರು. ಚನ್ನಗಿರಿ ತಾಲ್ಲೂಕಿನ ಹಾರೋನಹಳ್ಳಿ ಶಾಖಾ ಅಂಚೆ ಕಚೇರಿ ಕೂಡ ಅತೀ ಹೆಚ್ಚು ಹೊಸ ಉಳಿತಾಯ ಖಾತೆಗಳ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ದಾವಣಗೆರೆಯ ಶ್ರೀಮತಿ ಅರ್ಚನ ಹಾಗೂ ಚನ್ನಗಿರಿಯ ಚನ್ನೇಶ್ ಉತ್ತಮ ನೇರ ಎಜೆಂಟ್ ಹಾಗೂ ಉತ್ತಮ ಮೇಲ್ ಓವರ್ಸಿಯರ್ ಪ್ರಶಸ್ತಿ ಪಡೆದುಕೊಂಡರು.
ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಶ್ರೀ ರಾಜೇಂದ್ರ ಕುಮಾರ್, ಪೋಸ್ಟ್ ಮಾಸ್ಟರ್ ಜನರಲ್ ಶ್ರೀ ಚಂದ್ರಶೇಖರ್ ಕಾಕುಮಾನು ಹಾಗೂ ಡೈರೆಕ್ಟರ್ ಪೋಸ್ಟಲ್ ಸರ್ವೀಸಸ್ ಶ್ರೀ ಸಂದೇಶ್ ಮಹದೇವಪ್ಪ ಪ್ರಶಸ್ತಿ ಪ್ರಧಾನ ಮಾಡಿದರು. 2022ರ ಮೇ ತಿಂಗಳಿನಿಂದ ಪ್ರಾರಂಭಗೊಂಡ ದಾವಣಗೆರೆ ಅಂಚೆ ವಿಭಾಗ ಕಳೆದ ಆರ್ಥಿಕ ವರ್ಷ 2023-2024 ನೇ ಸಾಲಿನಲ್ಲಿ ಉತ್ತಮ ಸಾಧನೆ ಮಾಡಿದೆ.