ಭದ್ರಾವತಿ: ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದರೂ ಸಹ ಮೆಸ್ಕಾಂ ಇಲಾಖೆ ನಿರ್ಲಕ್ಷದಿಂದಲೇ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂಬ ಸುದ್ದಿ ಪ್ರಕಟಿಸಲಾಗಿತ್ತು.
ನಗರದ ಜೆಪಿಎಸ್ ಕಾಲೋನಿಯ ಮೆಸ್ಕಾಂ ಇಇ ಕಚೇರಿ ಸಮೀಪದ ವಿದ್ಯುತ್ ವಿತರಣಾ ಕೇಂದ್ರದ ಮುಂಭಾಗ ಬಳಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವಿರುವ ಪೋಸ್ಟರ್ ಹಾಕಲಾಗಿದ್ದರ ಸಂಬಂಧ ಕಳೆದೆರಡು ದಿನದ ಹಿಂದೆ ಸುದ್ದಿ ಪ್ರಕಟಿಸಿ ಸಂಬಂಧಿತ ಇಲಾಖೆಯ ಗಮನಕ್ಕೆ ತರಲಾಗಿತ್ತು.
ಇಲಾಖೆ ಕೂಡಲೇ ನಗರಸಭೆಗೆ ಸೂಚಿಸಿದ ಮೇರೆಗೆ ಮೇಸ್ತ್ರಿ ಗೋವಿಂದ ನೇತೃತ್ವದಲ್ಲಿ ಮೋದಿ ರವರ ಭಾವಚಿತ್ರಕ್ಕೆ ಕಾಗದ ಮುಚ್ಚಲಾಗಿದೆ.