ಬೆಂಗಳೂರು.
ಕ್ರಿಸ್ಮಸ್ ಹಾಗೂ ಹೊಸ ವರ್ಷ ಹಿನ್ನೆಲೆಯಲ್ಲಿ ರಾಜಾಧಾನಿ ಬೆಂಗಳೂರು ಸೇರಿದಂತೆ ಇತರೆಡೆ ಮದ್ಯಕ್ಕೆ ದಿನ ಕಳೆದಂತೆ ಬೇಡಿಕೆ ಹೆಚ್ಚಾಗುತ್ತಿದೆ. ವರ್ಷಾಂತ್ಯ ಪಾರ್ಟಿ ಆಯೋಜನೆ ಮಾಡಿರುವ ಕಾರಣ ಡಿಸೆಂಬರ್ ಕೊನೆದಿನಗಳಲ್ಲಿ ಭರ್ಜರಿ ಮದ್ಯ ಮಾರಾಟ ಆಗುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಚಳಿ ಹಾಗೂ ಮಳೆ ವಾತಾವರಣ ಇರುವುದರಿಂದ ಬಿಯರ್ಗೆ ಹೆಚ್ಚು ಡಿಮ್ಯಾಂಡ್ ಇದೆ. ಇನ್ನು ಐಎಂಎಲ್ (ಇಂಡಿಯನ್ ಮೇಡ್ ಲಿಕ್ಕರ್) ಗೆ ಅಷ್ಟಾಗಿ ಡಿಮ್ಯಾಂಡ್ ಇಲ್ಲ. ಬಿಟ್ಟು ಬೇರೆ ಮದ್ಯ ಹೆಚ್ಚು ಮಾರಾಟವಾಗುತ್ತಿಲ್ಲ.
ವರ್ಷಾಂತ್ಯ ಹಾಗೂ ಹೊಸ ವರ್ಷದ ಪಾರ್ಟಿ ಲೆಕ್ಕಾಚಾರಗಳು ಜೋರಾಗಿವೆ. ಇದರ ನಡುವೆಯೇ ರಾಜ್ಯದಾದ್ಯಂತ ಮದ್ಯ ಮಾರಾಟಕ್ಕೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ ಎನ್ನಲಾಗುತ್ತಿದೆ. ಸಾಮಾನ್ಯವಾಗಿ ಡಿಸೆಂಬರ್ ತಿಂಗಳಲ್ಲಿ ಹೆಚ್ಚು ಪಾರ್ಟಿಗಳು ನಡೆಯುತ್ತವೆ. ಅದರಲ್ಲೂ ಡಿಸೆಂಬರ್ 31ರ ಮಧ್ಯರಾತ್ರಿ ಮದ್ಯ ಮಾರಾಟದಲ್ಲಿ ಹೊಸ ದಾಖಲೆಗಳು ಬರೆದಿರುವುದು ಇದೆ. ಈ ವಾರವೆಲ್ಲ ಅಬಕಾರಿ ಇಲಾಖೆಗೆ ಕೋಟ್ಯಾಂತರ ರೂಪಾಯಿ ಆದಾಯ ಸಂಗ್ರಹವಾಗುತ್ತಿದೆ. ಈ ಬಾರಿಯೂ ಡ್ರಿಂಕ್ಸ್ ಡಿಮ್ಯಾಂಡ್ ಜೋರಾಗಿದೆ. ಎಂದಿನAತೆ ಬಿಯರ್ ಡಿಮ್ಯಾಂಡ್ ತಗ್ಗುತ್ತಿಲ್ಲ.
ಬೆಂಗಳೂರಿನಲ್ಲಿ ಬಿಯರ್ ಡಿಮ್ಯಾಂಡ್ ಜೋರು
ಬೆಂಗಳೂರಿನಲ್ಲಿ ಬಿಯರ್ ಡಿಮ್ಯಾಂಡ್ ಜೋರಾಗಿದೆ. 2022-2023ನೇ ಸಾಲಿನಲ್ಲಿ ಬರೋಬ್ಬರಿ 10.17 ಕೋಟಿ ಲೀಟರ್ ಬಿಯರ್ ಮಾರಾಟಾಗಿದ್ದು, ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದರೆ, ಬಿಯರ್ ಮಾರಾಟದಲ್ಲಿ 49.8% ಹೆಚ್ಚಳವಾಗಿದೆ. 2023-2024ನೇ ಸಾಲಿನಲ್ಲಿ 11.49 ಕೋಟಿ ಲೀಟರ್ ಬಿಯರ್ ಮಾರಾಟವಾಗಿದೆ. ಈ ವರ್ಷ ಸಹ ಬಿಯರ್ ಡಿಮ್ಯಾಂಡ್ ಮತ್ತೆ ಜಾಸ್ತಿ ಆಗಿದೆ. ಈ ವರ್ಷದಲ್ಲೂ ಬಿಯರ್ ಡಿಮ್ಯಾಂಡ್ ಶೇ. 13.03 ರಷ್ಟು ಹೆಚ್ಚಳವಾಗಿದೆ.
ಪಬ್ ಸಂಸ್ಕೃತಿ
ಬೆಂಗಳೂರಿನಲ್ಲಿ ಕಳೆದ ಎರಡು ಮೂರು ದಶಕಗಳಿಂದ ಪಬ್ ಸಂಸ್ಕೃತಿ ಹೆಚ್ಚಾಗಿದೆ. ಪಬ್, ಬಾರ್ ಹಾಗೂ ರೆಸ್ಟೋರೆಂಟ್ಗಳ ಸಂಖ್ಯೆ ಹೆಚ್ಚಾಗಿದೆ ಹೀಗಾಗಿ ಬೆಂಗಳೂರಿನಲ್ಲಿ ಮದ್ಯ ಮಾರಾಟದ ಡಿಮ್ಯಾಂಡ್ ಹೆಚ್ಚಳವಾಗಿದೆ. ಅಲ್ಲದೆ ಉಳಿದ ಮದ್ಯಗಳಿಗೆ ಹೋಲಿಸಿದರೆ ಬಿಯರ್ ಬೆಲೆ ಅಲ್ಪ ಕಡಿಮೆ ಇದೆ. ಹೀಗಾಗಿ, ಉಳಿದ ಮದ್ಯಗಳಿಗೆ ಹೋಲಿಸಿದರೆ ಬಿಯರ್ ಡಿಮ್ಯಾಂಡ್ ಜಾಸ್ತಿ. ಯುವಕರು ಸೇರಿದಂತೆ ಹಲವರು ಲೈಟ್ ಮದ್ಯ ತೆಗೆದುಕೊಳ್ಳುವವರು ಬಿಯರ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಡ್ರಂಕ್ ಡ್ರೆವ್ ಕೇಸ್.
ಬೆಂಗಳೂರಿನಲ್ಲಿ ಪಾರ್ಟಿ ಗುಂಗು ಜೋರಾಗಿದ್ದರೂ ಕುಡಿದು ವಾಹನ ಓಡಿಸುವಂತಿಲ್ಲ. ಆದರೆ, ಪಾರ್ಟಿ ಮಾಡಿ ನೀವು ವಾಹನ ಚಲಾಯಿಸುವಂತಿಲ್ಲ. ಡ್ರಿಂಕ್ ಅಂಡ್ ಡ್ರೈವ್ ವಿಚಾರದಲ್ಲಿ ಬೆಂಗಳೂರು ಪೊಲೀಸರು ಅಲರ್ಟ್ ಆಗಿದ್ದಾರೆ. ಬೆಂಗಳೂರಿನಲ್ಲಿ ಹೊಸ ವರ್ಷ ಹಾಗೂ ವರ್ಷಾಂತ್ಯದಲ್ಲಿ ಡ್ರಿಂಕ್ ಅಂಡ್ ಡ್ರೈವ್ ಮಾಡುವವರ ಮೇಲೆ ಬೆಂಗಳೂರು ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಡ್ರಿಂಕ್ ಅಂಡ್ ಡ್ರೈವ್ ಮಾಡುವವರ ಮೇಲೆ ದಂಡ ಪ್ರಯೋಗ ಹಾಗೂ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಲಾಗಿದೆ. ಇನ್ನು ಬೆಂಗಳೂರು ಟ್ರಾಫಿಕ್ ಪೊಲೀಸರು ವರ್ಷಾಂತ್ಯದಲ್ಲಿ ಟ್ರಾಫಿಕ್ ಜಾಮ್ ಆಗುವ ಕೆಲವು ಪ್ರಮುಖ ರಸ್ತೆಗಳಲ್ಲಿ ಮಾರ್ಗ ಬದಲಾವಣೆಗಳನ್ನು ಸಹ ಮಾಡಿಕೊಂಡಿದ್ದಾರೆ