ದಾವಣಗೆರೆ: ರಸಾಯನಿಕ ಜೀಜಗಳ ಬಳಕೆಯ ಅಬ್ಬರದಲ್ಲಿ ನಮ್ಮದೇ ಸ್ವಂತ ತಳಿಗಳಾದ ಪಾರಂಪರಿಕ ಬೀಜ ಬಳಕೆಯನ್ನು ಮರೆತು ನಮ್ಮ ಆರೋಗ್ಯ ಮತ್ತು ಆಯಸ್ಸನ್ನು ಕಳೆದು ಕೊಳ್ಳುತ್ತಿದ್ದೇವೆ ಎಂದು ಮೈಸೂರಿನ ಬೀಜ ಸಂರಕಕ್ಷಿ ಪದ್ಮಾವತಮ್ಮ ಆತಂಕ ವ್ಯಕ್ತಪಡಿಸಿದರು

ನಗರದ  ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ತಂತ್ರಜ್ಞಾನಗಳ ಸಂಶೋಧನಾ ಅನ್ವಯಿಕ ಸಂಸ್ಥೆ, ವಲಯ ‌11, ಬೆಂಗಳೂರು, ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ, ಸಹಜ ಸಮೃದ್ಧ, ಬೆಂಗಳೂರು ಹಾಗೂ ಐಕಾಂತಿಕ, ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಪಾರಂಪರಿಕ ಬೀಜ ಮೇಳ ಕಾರ್ಯಕ್ರಮವನ್ನು ಸಾವಯವ ರೈತರಿಗೆ ಪಾರಂಪರಿಕ ಬೀಜ ವಿತರಿಸುವ ಮೂಲಕ ಉದ್ಟಾಟಿಸಿ ಮಾತನಾಡಿದರು.

ರೈತರು, ಸಾರ್ವಜನಿಕರು ನಮ್ಮ ಮನೆಯಲ್ಲಿ ಬಳಸುವ ತರಕಾರಿ, ಸೊಪ್ಪು ಸೇರಿದಂತೆ ನಿತ್ಯ ಬಳಕೆಯ ವಸ್ತುಗಳಿಂದ ಸಾವಯವ ಗೊಬ್ಬರ ತಯಾರಿಸಿ, ಉತ್ತಮ ಬೆಳೆಗಳನ್ನು ಬೆಳೆಯಬಹುದು. ವೈದ್ಯಕೀಯ ಕ್ಷೇತ್ರದಲ್ಲಿ ಬದಲಾವಣೆ ತರಲು ಪ್ರಯತ್ನಗಳು ನಡೆಯುತ್ತಿವೆ. ಆದರೆ, ನಮ್ಮ ರೈತರು ಕೃಷಿ ಪದ್ದತಿಯಲ್ಲಿ ಬದಲಾವಣೆ ತರಲು ಯಾಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಹಜ ಕೃಷಿಕ ರಾಘವ, ದೇಶಿ, ಜವಾರಿ, ನಾಟಿ ಬೀಜಗಳನ್ನು ಬಳಕೆ ಮಾಡಿದರೆ ರಸಾಯನಿಕ ಬೀಜ, ಗೊಬ್ಬರಗಳ ಬಳಕೆ ಅರ್ಧಕ್ಕಿಂತಲೂ ಕಡಿಮೆ ಆಗಲಿದೆ. ರಸಾಯನಿಕ ಪದ್ದತಿಗೂ, ಪಾರಂಪರಿಕ ಪದ್ದತಿಗೂ ಅಜಗಜಾಂತರ ವ್ಯತ್ಯಾಸವಿದೆ. ಆದರೆ, ಇಂದಿನ ದಿನಗಳಲ್ಲಿ ಪಾರಂಪರಿಕ ಪದ್ದತಿ ನಾಶವಾಗುತ್ತಿದೆ. ಕಾರಣ ನಾವುಗಳು ನಮ್ಮ ಮುಂದಿನ ಪೀಳಿಗೆಗೆ ಅವುಗಳ ಮೌಲ್ಯವನ್ನು ತಿಳಿಸುವ ಕೆಲಸ ಮಾಡಬೇಕೆಂದು ಹೇಳಿದರು.

ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಎಂ.ಜಿ.ಬಸವನಗೌಡ, ಟಿಕೆವಿಕೆ ಹಿರಿಯ ವಿಜ್ಞಾನಿ ಡಾ.ಟಿ.ಎನ್.ದೇವರಾಜ್, ಸಹಜ ಸಮೃದ್ಧ ಸಂಸ್ಥೆಯ ಕೃಷ್ಣ ಪ್ರಸಾದ್, ರಾಜೇಂದ್ರ ಹೆಗಡೆ, ಜಾಕೋಬ್ ನೆಲ್ಲಿ ತಾನಂ, ಡಾ.ಟಿ.ಜಿ.ಅವಿನಾಶ್, ಜಬೀವುಲ್ಲಾ ಇತರರು ಇದ್ದರು.

Share.
Leave A Reply

Exit mobile version