ದಾವಣಗೆರೆ ; ಸಂಗೀತಕ್ಕೆ ನೆಮ್ಮದಿ ನೀಡುವ ಶಕ್ತಿ ಇದೆ ಎಂದು ಬಿಜೆಪಿ ನಾಯಕ, ಮಾಜಿ ಸಂಸದ ಜಿ.ಎಸ್.ಅನಿತ್ ಕುಮಾರ್ ಹೇಳಿದರು.
ನಗರದಲ್ಲಿ ಡಾ.ವಿಷ್ಣುವರ್ಧನ್ ವೇದಿಕೆ ಹಾಗೂ ಹಾಡು ಬಾ ಕೋಗಿಲೆ ಗೆಳೆಯರ ಬಳಗ ಕರ್ನಾಟಕ ಇವರ ವತಿಯಿಂದ ನಡೆದ ಏಳನೇ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಪಂಚಂದಲ್ಲಿ ಎಲ್ಲಿರಿಗೂ ಬೇಕಾಗಿರುವುದು ನೆಮ್ಮದಿ, ಆ ನೆಮ್ಮದಿ ನೀಡುವ ಕೆಲಸವನ್ನು ಹಾಡು ಬಾ ಕೋಗಿಲೆ ಮಾಡುತ್ತಿದೆ. ಹಾಡು ಬಾ ಕೋಗಿಲೆಯನ್ನು ಪ್ರತಿ ಎರಡ್ಮೂರು ತಿಂಗಳಿಗೆ ಮಾಡುತ್ತಿರುವುದು ಸಂತೋಷ ತಂದಿದೆ. ಮೊಬೈಲ್ ಮೂಲಕ ನೀವೆಲ್ಲ ಲಿಂಕ್ ಆಗಿ ದೊಡ್ಡ ಬಳಗವಾಗಿದ್ದೀರಿ. ಈ ಮೂಲಕ ಬೃಹತ್ ಫ್ಯಾಮಿಲಿ ಆಗಿದ್ದೀರಿ. ಎಲ್ಲರನ್ನೂ ಒಂದು ಕಡೆ ಸೇರಿಸಿರುವುದಕ್ಕೆ ಈ ಹಾಡು ಬಾ ಕೋಗಿಲೆಯಿಂದ ಸಾಧ್ಯವಾಗಿದೆ ಎಂದರು.
ಹಾಡು ಬಾ ಕೋಗಿಲೆಯಿಂದ ನೀವು ಸಂಗೀತವನ್ನು ಪ್ರೋತ್ಸಾಹ ಮಾಡುತ್ತಿದ್ದೀರಿ. ನಮಗೆ ಸಾಕಷ್ಟು ಕಷ್ಟ, ಸುಖ, ಸಂತೋಷ ಹೀಗೆ ಏನೇ ಸಮಸ್ಯೆ ಬಂದರೂ ಹಾಡು ಹೇಳಿದಾಗ ಅದರಲ್ಲಿ ನಾವೆಲ್ಲ ಮಗ್ನರಾಗುತ್ತೇವೆ. ಅಂತೆಯೇ ಹಾಡು ಬಾ ಕೋಗಿಲೆ ಸದಾ ಹೀಗೆ ಮುಂದುವರೆಯಲಿ, ಎಲ್ಲರೂ ಹೊಂದಾಣಿಕೆಯಿAದ ಕೆಲಸ ಮಾಡಿ ಹೊಸ ಪ್ರತಿಭೆಗಳನ್ನು ನಿಮ್ಮ ಹಾಡು ಬಾ ಕೋಗಿಲೆ ಮೂಲಕ ಹೊರ ತನ್ನಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ವೇದಿಕೆ ವತಿಯಿಂದ ಜಿ.ಎಸ್.ಅನಿತ್ರನ್ನು ಸನ್ಮಾನಿಸಲಾಯಿತು. ಮುಖಂಡರಾದ ವೀರೇಶ್ ದೊಡ್ಡಬಾತಿ , ಬಸವರಾಜ್ ಕಡ್ಲೆಬಾಳು, ಉಮೇಶ್ , ಗೋವಿಂದರಾಜ್ ,ಪುರುಷೋತ್ತಮ ಉಪಸ್ಥಿತರಿದ್ದರು.