ನಂದೀಶ್ ಭದ್ರಾವತಿ, ದಾವಣಗೆರೆ
ಪದೇ ಪದೇ ಮುಂದೂಡುತ್ತಿದ್ದ ದಾವಣಗೆರೆ ಡಿಸಿಸಿ ಬ್ಯಾಂಕ್ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದ್ದು, ನಿಮ್ಮ ದಾವಣಗೆರೆ ವಿಜಯ, ಪಬ್ಲಿಕ್ ಇಂಪ್ಯಾಕ್ಟ್ ಗೆ ಬಿಗ್ ರೆಸ್ಪಾನ್ಸ್ ಸಿಕ್ಕಿದೆ.
ಹೌದು…ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದ ನಡುವೆ ಶನಿವಾರ ಅಂತಿಮ ಮತದಾರರ ಪಟ್ಟಿಯನ್ನು ಸೂಚನಾ ಫಲಕಕ್ಕೆ ಹಾಕಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಕೆಲವೇ ನಿಮಿಷಗಳಲ್ಲಿ ಸೂಚನಾ ಫಲಕದಲ್ಲಿದ್ದ ಮತದಾರರಪಟ್ಟಿಯನ್ನು ಎಂಡಿ ನಂಜುಡೇಗೌಡ ಚೇಂಬರಿನಲ್ಲಿ ಇಡಲಾಗಿತ್ತು. ಆದರೆ ಸೂಕ್ತ ಕಾರಣ ಮಾತ್ರ ಇರಲಿಲ್ಲ..ಹಲವರು ಇದು ಚುನಾವಣೆ ಮುಂದೂಡುವ ತಂತ್ರ ಎಂದಿದ್ದರು. ಬಳಿಕ ಭಾನುವಾರ, ಸೋಮವಾರ ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಬಳಿ ಚರ್ಚೆ ನಡೆಸಿದ್ದರು. ಬಳಿಕ ಚುನಾವಣೆ ಘೋಷಣೆಯಾಗಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ.
ಸಚಿವರ ಬಳಿ ದೌಡಾಯಿಸಿದ್ದ ಅಧಿಕಾರಿಗಳು
ಡಿಸಿಸಿ ಬ್ಯಾಂಕ್ ಚುನಾವಣೆ ಬಗ್ಗೆ ಚರ್ಚೆ ಮಾಡಲು ಅಧಿಕಾರಿಗಳು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಬಳಿ ತೆರಳಿದ್ದರು. ಅಲ್ಲದೇ ಜಿಲ್ಲಾಧಿಕಾರಿಗಳ ಬಳಿಯೂ ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಚರ್ಚೆ ನಡೆಸಿದ್ದರು. ಅಲ್ಲದೇ ಕಾನೂನು ಪ್ರಕ್ರಿಯೆಗಳನ್ನು ಅಧಿಕಾರಿಗಳು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಬಳಿ ಚರ್ಚೆ ನಡೆಸಿದ್ದರು. ಅಂತಿಮವಾಗಿ ಸಚಿವ ಎಸ್ ಎಸ್ ಎಂ ಚುನಾವಣೆ ನಡೆಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಚುನಾವಣೆ ಘೋಷಣೆ ಮಾಡದೇ ಇದ್ದಿದ್ದರೇ ಕಾನೂನು ನಿಂದನೆಯಾಗುತ್ತಿತ್ತು.
ಹೈಕೋರ್ಟ್ ಎಂಟುವಾರಗಳಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ಮಾಡಲು ಆದೇಶಿಸಿತ್ತು. ಅಂತೆಯೇ ಈಗಾಗಲೇ ಆರು ವಾರಗಳು ಮುಕ್ತಾಯಗೊಂಡಿತ್ತು. ಹಾಗಾಗಿ ಶನಿವಾರ ಅಂತಿಮ ಮತದಾರರಪಟ್ಟಿಯನ್ನು ಸೂಚನಾ ಫಲಕಕ್ಕೆ ಅಂಟಿಸಲಾಗಿತ್ತು. ಒಂದು ವೇಳೆ ಚುನಾವಣೆ ಘೋಷಣೆ ಆಗದೇ ಇದ್ದಿದ್ದರೇ ಕಾನೂನು ನಿಂದನೆಯಾಗುತ್ತಿತ್ತು. ಇದಕ್ಕೆ ಜಿಲ್ಲಾಧಿಕಾರಿಗಳೇ ಉತ್ತರ ಕೊಡಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಚುನಾವಣೆ ಘೋಷಣೆಯಾಗಿದೆ.
ಸೂಚನಾ ಫಲಕದಲ್ಲಿ ಅಂತಿಮ ಮತದಾರರ ಪಟ್ಟಿ ಫಲಕ
ಜನವರಿ ಹತ್ತಕ್ಕೆ ಅಂತಿಮ ಮತದಾರರ ಪಟ್ಟಿ ಹಾಕಬೇಕಿರುವ ಕಾರಣ ಮಂಗಳವಾರ ರಾತ್ರಿಯೇ ಚುನಾವಣಾ ಮತದಾರರ ಪಟ್ಟಿ ಅಂಟಿಸಲಾಗಿದೆ. ಈ ಹಿಂದೆ ಸೂಚನಾಫಲಕಕ್ಕೆ ಮುಕ್ಕಾಲು ಭಾಗ ಅಂತಿಮ ಮತದಾರರ ಪಟ್ಟಿಯನ್ನು ಅಂಟಿಸಲಾಗಿತ್ತು. ಇನ್ನೇನೂ ಕಾಲು ಭಾಗ ಅಂತಿಮ ಮತದಾರರ ಪಟ್ಟಿಯನ್ನು ಅಂಟಿಸಬೇಕಿದ್ದು, ಮಂಗಳವಾರ ಅಂತಿಮ ಮತದಾರರ ಪಟ್ಟಿಯನ್ನು ಡಿಸಿಸಿ ಬ್ಯಾಂಕ್ ನ ಸೂಚನಫಲಕಾದಲ್ಲಿ ಅಂಟಿಸಲಾಗಿದೆ.
ಚುನಾವಣೆಗೆ ಕೇವಲ 15 ದಿನಗಳು
ರಾಜ್ಯ ಹೈ ಕೋರ್ಟ್ ನ ರಿಟ್ಪಿಟಿಷನ್ ಮೇರೆಗೆ ಇದೇ ಜ.25 ರಂದು ನಿಗದಿಯಾಗಿದೆ. ಸದ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಸೂಚನಾಫಲಕದಲ್ಲಿ ಬ್ಯಾಂಕ್ ನ 13 ಕ್ಷೇತ್ರಗಳಿಗೆ ಸಂಬಂಧಿಸಿದ ಅಂತಿಮ ಮತದಾರರ ಪಟ್ಟಿಯನ್ನು ಅಂಟಿಸಲಾಗಿದೆ.
ಜ.10.ಕ್ಕೆ ನಾಮಪತ್ರ ಸಲ್ಲಿಸಬೇಕಿತ್ತು
ದಾವಣಗೆರೆ ಜಿಲ್ಲಾ ಬ್ಯಾಂಕ್ ನ ಚುನಾವಣಾ ಪ್ರಕ್ರಿಯೆ ಅಂತಿಮ ಘಟ್ಟಕ್ಕೆ ಬಂದು ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಇದೇ ಜ.10 ರಿಂದ ಆರಂಭವಾಗಬೇಕಿತ್ತು. ಇನ್ನೇನೂ ನಾಮಪತ್ರ ಸಲ್ಲಿಸಲು ಯಾವುದೇ ಅಡೆತಡೆಗಳು ಇಲ್ಲ.
21 ದಿನಗಳ ಹಿಂದೆ ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಬೇಕು
ನಿಬಂಧನೆಗಳ ಪ್ರಕಾರ ಚುನಾವಣೆ ದಿನಾಂಕಕ್ಕೆ 21 ದಿನಗಳ ಹಿಂದೆ ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡಿದ್ದು, ಚುನಾವಣಾ ಅಧಿಕಾರಿಗಳು ತಮ್ಮ ಕೆಲಸ ಶುರುಮಾಡಿದ್ದಾರೆ ಬಹುತೇಕ ಬುಧವಾರ ಕ್ಯಾಲೆಂಡರ್ ಪ್ರಕಟವಾಗಲಿದೆ. ಚುನಾವಣಾ ಆಕಾಂಕ್ಷಿಗಳು ಅಂತಿಮ ಮತದಾರರ ಪಟ್ಟಿ ಕೋರಿ ನಿಗದಿತ ಶುಲ್ಕತುಂಬಿ ಅರ್ಜಿ ಸಲ್ಲಿಸಿ ಪಡೆಯಬಹುದು. ಒಟ್ಟಾರೆ ಚುನಾವಣೆ ಘೋಷಣೆಯಾಗಿದೆ. ಇನ್ನೇನಿದ್ದರೂ ಗೆಲ್ಲೋದಕ್ಕೆ ತಂತ್ರ ಹೂಡಬೇಕಿದೆ.
ಚುನಾವಣೆ ಘೋಷಣೆಯಾಗಿರುವುದು ಸಂತಸ ತಂದಿದೆ. ಈ ಬಾರಿ ಗೆಲ್ಲುವ ವಿಶ್ವಾಸವಿದೆ..ಕಾದು ನೋಡೋಣ ಯಾರು ಅಧಿಕಾರಕ್ಕೆ ಬರುತ್ತಾರೆಂದು
-ಮುರುಗೇಶ್, ಡಿಸಿಸಿ ಬ್ಯಾಂಕ್ ಚುನಾವಣೆ ಸ್ಪರ್ಧಾಳು