ನಂದೀಶ್ ಭದ್ರಾವತಿ, ದಾವಣಗೆರೆ

ಪ್ರಾರಂಭದಲ್ಲಿ ಜೇಡ ಬಲೆ ಕಟ್ಟುವಾಗ ಎಲ್ಲರು ನೋಡಿ ನಗುತ್ತಾರೆ. ಬಲೆ ಕಟ್ಟಿದ ಮೇಲೆ ಜೇಡದ ಮಹತ್ವ ಏನು ಅಂತ ಗೊತ್ತಾಗುತ್ತದೆ ಎಂಬ ಮಾತನ್ನು ಹೊನ್ನಾಳಿ ಹೋರಿ ಗುಟುರು ಹಾಕಿದೆ.

ದೆಹಲಿಯಲ್ಲಿ ಮಾತನಾಡಿದ ಮಾಜಿ ಸಚಿವ ರೇಣುಕಾಚಾರ್ಯ ಆ್ಯಂಡ್ ಟೀಂ ಸಂಸದರ ವಿರುದ್ಧ ಹರಿಹಾಯ್ದಿದಿದ್ದಾರೆ. ಸೂರ್ಯ, ಚಂದ್ರ ಎಷ್ಟು ಸತ್ಯವೋ ಈ ಬಾರಿ ಲೋಕಸಭೆ ಅಭ್ಯರ್ಥಿ ಬದಲಾವಣೆ ಖಂಡಿತ ಆಗುತ್ತದೆ. ನಾಲ್ಕು ಬಾರಿ ಆಯ್ಕೆಯಾದ ಲೋಕಸಭಾ ಸದಸ್ಯರನ್ನು ಬದಲಾವಣೆ ಮಾಡುತ್ತಾರೆ ಎಂಬ ವಿಶ್ವಾಸವಿದೆ. ನೋಡಿ ಮೊದಲು ಜೇಡ ಬಲೆ ಕಟ್ಟುತ್ತದೆ, ನಂತರ ಅ್ರ ಸಾಮಾರ್ಥ್ಯ ಗೊತ್ತಾಗುತ್ತದೆ. ಹಾಗಾಗಿ ಮಾಜಿ ಸಚಿವ ಕರುಣಾಕರ ರೆಡ್ಡಿ, ರವೀಂದ್ರನಾಥ್, ಮಾಜಿ ಶಾಸಕ ಬಸವರಾಜ್ ನಾಯ್ಕ್, ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕ ಶಿವಯೋಗಿಸ್ವಾಮಿ ಎಂಬ ದೊಡ್ಡ ತಂಡ ಸಂಸದರ ನ್ನು ಬದಲಾವಣೆ ಮಾಡಬೇಕೆಂದಿದೆ.

ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂಬುದು ನಮ್ಮ ಆಸೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಂಟಕ್ಕೆ ಎಂಟು ಕ್ಷೇತ್ರ ಗೆಲ್ಲಬೇಕು. ಕಾರ್ಯಕರ್ತರ, ಮುಖಂಡರ ಮನದಾಳದ ಮಾತನ್ನು ಹೈಕಮಾಂಡ್ ಗೆ ತಲುಪಿಸಿದ್ದೇವೆ‌. ಜಿಲ್ಲೆಯಲ್ಲಿ ಒಂದು ಬದಲಾವಣೆ ಬಯಸಲಾಗಿದೆ. ಹಾಗಾಗಿ ಬದಲಾವಣೆ ಆಗೇ ಆಗುತ್ತದೆ ಎಂಬ ವಿಶ್ವಾಸ ನನಗಿದೆ. ಹಾಗಾಗಿ ನಾನು ಜೇಡರ ಉದಾಹರಣೆ ಕೊಟ್ಟಿದ್ದೇನೆ. ಜೇಡ ಆರಂಭದಲ್ಲಿ ಕಳಚಿ ಬಿದ್ದರೂ, ನಂತರ ಬೀಳೋದಿಲ್ಲ ಎಂಬ ಮಾತನ್ನು ಹೊನ್ನಾಳಿ ಮಾಜಿ ಶಾಸಕ ರೇಣುಕಾಚಾರ್ಯ ಹೇಳಿದರು. 

ಲೋಕಸಭೆ ಟಿಕೆಟ್ ಆಕಾಂಕ್ಷಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ರೇಣುಕಾಚಾರ್ಯ ನಾನು ಕೂಡ ಆಕಾಂಕ್ಷಿ, ಟಿ.ರವಿಕುಮಾರ್, ಅಜೇಯ್ ಕುಮಾರ್ ಮಾಡಾಳ್ ಮಲ್ಲಿಕಾರ್ಜುನ್, ಲೋಕಿಕೆರೆ ನಾಗರಾಜ್ ಆಕಾಂಕ್ಷಿಗಳಾಗಿದ್ದು, ನಮ್ಮಲ್ಲಿ ಯಾರಿಗಾದರೂ ಒಬ್ಬರಿಗೆ ಟಿಕೆಟ್ ಕೊಡಲು ಕೇಳಿದ್ದೇವೆ. 

ನಾವು ಜಾತ್ಯಾತೀತರು, ಹೊಸ ಮುಖಕ್ಕೆ ಟಿಕೆಟ್ ಕೊಡಲಿ ಎಂಬುದಷ್ಟೇ ನಮ್ಮ  ಒತ್ತಾಯ, ಸಮಾಜ ಪಕ್ಷಕ್ಕೆ ಮುಜುಗರ ಆಗಬಾರದು. ಹಾಗಾಗಿ‌ ಶ್ರಮಜೀವಿಗಳು,  ಪಕ್ಷಕ್ಕಾಗಿ ಹಗಲಿರುಳು ದುಡಿದ ನಮ್ಮಲ್ಲಿ ಯಾರಿಗಾದರೂ ಟಿಕೆಟ್ ನೀಡಿದರೆ ಗೆಲುವು ಖಚಿತ‌. ನಾವೇನೂ ಬದಲಾವಣೆ ಬಯಸಿದ್ದೇವೆ, ಅದನ್ನು ಹೈಕಮಾಂಡ್ ಮಾಡುತ್ತದೆ ಎಂಬ ವಿಶ್ವಾಸವಿದೆ. ಬದಲಾವಣೆ ಜಗದ ನಿಯಮ, ಅಭ್ಯರ್ಥಿ ಬದಲಾಗುತ್ತಾರೆ ಎಂಬ ವಿಶ್ವಾಸವಿದೆ ಎಂದು ರೇಣುಕಾಚಾರ್ಯ ಹೊನ್ನಾಳಿ ಹೋರಿ ಸಂಸದ ಜಿಎಂ ಸಿದ್ದೇಶ್ವರಿಗೆ ಟಾಂಗ್ ನೀಡಿದರು.

 

Share.

1 Comment

Leave A Reply

Exit mobile version