ಭದ್ರಾವತಿ: ತಾಲೂಕಿನ ಬಿ.ಆರ್.ಪಿ ತಪಾಸಣೆ ಕೇಂದ್ರದಲ್ಲಿ (ಚೆಕ್ ಪೋಸ್ಟ್) ಕಾರಿನಲ್ಲಿ ಸಾಗಿಸುತ್ತಿದ್ದ ಸುಮಾರು 700ಕ್ಕೂ ಹೆಚ್ಚು ಸೀರೆಗಳು ಪತ್ತೆಯಾಗಿವೆ.500 ರೂ ಮೌಲ್ಯದ 300 ಹಾಗೂ 200 ರೂ ಮೌಲ್ಯದ 200 ಸೀರೆಗಳು ಮತ್ತು 100 ರೇಷ್ಮೆ ಸೀರೆಗಳು, ಚೂಡಿದಾರ್ ಪೀಸ್ ಗಳು ಪತ್ತೆಯಾಗಿವೆ. ಲಕ್ಕವಳ್ಳಿಯ ಗಿರೀಶ್ ಎಂಬವರಿಗೆ ಸೇರಿದ ಸೀರೆಗಳು ಎನ್ನಲಾಗಿದೆ.

ಲಕ್ಕವಳ್ಳಿಯಿಂದ ಶಿವಮೊಗ್ಗದ ಕಡೆಗೆ ಕಾರಿನಲ್ಲಿ ಸಾಗಿಸುತ್ತಿದ್ದಾಗ ತಪಾಸಣೆ ವೇಳೆ ಪತ್ತೆಯಾಗಿವೆ. ಈ ಸಂಬಂಧ ಚುನಾವಣಾ ಅಧಿಕಾರಿಗಳು ಸೀರೆಗಳ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

Share.
Leave A Reply

Exit mobile version