ದಾವಣಗೆರೆ : ದೇಶದಲ್ಲಿ ಒಂದೊಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿದ್ರೆ ಇತ್ತ, ಬಿಜೆಪಿ ನಾಯಕರಿಗೆ ಅಧಿಕಾರ ಕಳೆದುಕೊಳ್ಳೋ ಭೀತಿ ಹೆಚ್ಚಾಗ್ತಾಯಿದೆ. ಮತ್ತೊಂದು ಕಡೆ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರ ವಾಗ್ದಾಳಿ ಮತ್ತು 10 ಗ್ಯಾರಂಟಿಗಳು ಬಿಜೆಪಿ ಜಂಗಾಬಲವನ್ನೇ ಉಡುಗಿಸಿಬಿಟ್ಟಿವೆ. ಹಾಗಾದ್ರೆ ಯಾವುವು ಆ 10 ಗ್ಯಾರಂಟಿಗಳು.? ಈ ಸಲ ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲ್ವಾ.? INDIA ಒಕ್ಕೂಟ ಕಮಾಲ್ ಮಾಡುತ್ತಾ.?
ಅರವಿಂದ ಕೇಜ್ರಿವಾಲ್ ಜೈಲಿಂದ ಬಿಡುಗಡೆಯಾಗಿದ್ದೇ ತಡ, ಬಿಜೆಪಿ ವಿರುದ್ಧ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ಭ್ರಷ್ಟಾಚಾರ., ವಿರೋಧ ಪಕ್ಷಗಳ ವಿರುದ್ಧ ನಡೆದುಕೊಳ್ಳುತ್ತಿರೋ ರೀತಿಯ ಬಗ್ಗೆ ಎಳೆಎಳೆಯಾಗಿ ಬಿಚ್ಚಿಡ್ತಿದ್ದಾರೆ. ಅಷ್ಟೇ ಅಲ್ಲ, ಈ ಸಲ ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲ್ಲ. INDIA ಒಕ್ಕೂಟ ಅಧಿಕಾರಕ್ಕೆ ಬರೋದು ಶತ ಸಿದ್ಧ ಅಂತೇಳಿದ್ದಾರೆ. ಜೊತೆಗೆ ದೇಶದಲ್ಲಿ INDIA ಒಕ್ಕೂಟ ಅಧಿಕಾರಕ್ಕೆ ಬಂದ್ರೆ 10 ಗ್ಯಾರಂಟಿಗಳನ್ನ ಜಾರಿಗೆ ತರೋದಾಗಿ ಘೋಷಣೆ ಮಾಡಿದ್ದಾರೆ. ಈ ಗ್ಯಾರಂಟಿಗಳು ನವ ಭಾರತದ ದೃಷ್ಟಿ, ಅವುಗಳಿಲ್ಲದೆ ದೇಶವು ಶಕ್ತಿಯುತವಾಗಲು ಸಾಧ್ಯವಿಲ್ಲ ಅಂತೇಳಿ ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಗಾದ್ರೆ ಏನು ಆ ಗ್ಯಾರಂಟಿಗಳು ಅಂದ್ರಾ.? ಅದನ್ನ ಒಂದೊಂದಾಗೇ ತೋರಿಸ್ತೀವಿ ನೋಡಿ.
ನಂಬರ್. 01
24 ಗಂಟೆ ವಿದ್ಯುತ್!
ದೇಶದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ ದೇಶದ ಪ್ರತಿ ಮನೆಗೂ 24 ಗಂಟೆ ಉಚಿತ ವಿದ್ಯುತ್ ನೀಡೋದಾಗಿ ಅರವಿಂದ ಕೇಜ್ರಿವಾಲ್ ಭರವಸೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಆರ್ಥಿಕವಾಗಿ ಹಿಂದೂಳಿದ ಪ್ರತಿ ಕುಟುಂಬಕ್ಕೆ ತಲಾ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡೋದಾಗಿ ಹೇಳಿದ್ದಾರೆ. ಈಗಾಗಲೇ ದಿಲ್ಲಿ ಮತ್ತು ಪಂಜಾಬ್ನಲ್ಲಿ ನಾವು ಇದನ್ನ ಮಾಡ್ತಾಯಿದ್ದು, ದೇಶದಲ್ಲೂ ಈ ಯೋಜನೆ ಜಾರಿಗೆ ತರಲಾಗುವುದು ಅಂತೇಳಿದ್ದಾರೆ.
ನಂಬರ್. 02
ಉಚಿತ ಶಿಕ್ಷಣ
ದೇಶದಲ್ಲಿ INDIA ಒಕ್ಕೂಟ ಅಧಿಕಾರಕ್ಕೆ ಬಂದ್ರೆ ದೇಶದ ಪ್ರತಿಯೊಬ್ಬರಿಗೂ ಉಚಿತ ಮತ್ತು ಗುಣಮಟ್ಟದ ಶಿಕ್ಷಣವನ್ನ ನೀಡೋದಾಗಿ ಕೇಜ್ರಿವಾಲ್ ಹೇಳಿದ್ದಾರೆ. ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳನ್ನ ಮೀರಿಸುವ ರೀತಿಯಲ್ಲಿ ಗುಣಮಟ್ಟದ ಶಿಕ್ಷಣವನ್ನ ಒದಗಿಸುತ್ತೆ ಎಂದಿದ್ದಾರೆ.
ನಂಬರ್. 03
ಮೊಹಲ್ಲಾ ಕ್ಲಿನಿಕ್
ದೇಶದ ಪ್ರತಿಯೊಬ್ಬರಿಗೂ ಉಚಿತವಾಗಿ ಆರೋಗ್ಯ ಚಿಕಿತ್ಸೆ ಸಿಗಬೇಕು. ಇನ್ಸೂರೆನ್ಸ್ ಅನ್ನೋದು ದೊಡ್ಡ ದಂಧೆಯಾಗಿಬಿಟ್ಟಿದೆ. ಹೀಗಾಗಿ INDIA ಒಕ್ಕೂಟ ಅಧಿಕಾರಕ್ಕೆ ಬಂದ್ರೆ ದೇಶದ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಮೊಹಲ್ಲಾ ಕ್ಲಿನಿಕ್ಗಳನ್ನ ಸ್ಥಾಪಿಸುತ್ತೇವೆ. ದೇಶದ ಎಲ್ಲರಿಗೂ ಉಚಿತ ಚಿಕಿತ್ಸೆ ಸಿಗುವಂತೆ ಮಾಡ್ತೀವಿ. ಜಿಲ್ಲಾ ಮಟ್ಟದ ಆಸ್ಪತ್ರೆಗಳನ್ನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನಾಗಿ ಮಾರ್ಪಡಿಸುತ್ತೇವೆ ಅಂತೇಳಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ನಂಬರ್. 04
ರಾಷ್ಟ್ರೀಯ ಭದ್ರತೆ
ನಮ್ಮ ದೇಶದ ಭೂಮಿಯನ್ನು ಚೀನಾ ಆಕ್ರಮಿಸಿಕೊಂಡಿರುವುದು ಇಡೀ ಜಗತ್ತಿಗೇ ಗೊತ್ತು. ನಮ್ಮ ಕೇಂದ್ರ ಸರ್ಕಾರ ನಿರಾಕರಿಸುತ್ತಲೇ ಇತ್ತು. ಚೀನಾ ವಶಪಡಿಸಿಕೊಂಡ ದೇಶದ ಎಲ್ಲಾ ಭೂಮಿಯನ್ನು ಅದರಿಂದ ಮುಕ್ತಗೊಳಿಸಲಾಗುತ್ತೆ. ಇದಕ್ಕಾಗಿ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗುವುದು ಹಾಗೂ ರಾಜತಾಂತ್ರಿಕ ಮಟ್ಟದಲ್ಲಿಯೂ ಪ್ರಯತ್ನ ನಡೆಸಲಾಗುವುದು ಅಂತೇಳಿ ಕೇಜ್ರಿವಾಲ್ ಹೇಳಿದ್ದಾರೆ.
ನಂಬರ್. 05
ಅಗ್ನಿವೀರ್ ಯೋಜನೆ ಸ್ಥಗಿತ
ಇದುವರೆಗೆ ಅಗ್ನಿವೀರಕ್ಕೆ ಸೇರ್ಪಡೆಗೊಂಡಿರುವ ಎಲ್ಲ ಮಕ್ಕಳನ್ನು ಖಾಯಂಗೊಳಿಸಿ ಸೇನೆಯಲ್ಲಿನ ಈ ಗುತ್ತಿಗೆ ಪದ್ಧತಿಯನ್ನು ನಿಲ್ಲಿಸಲಾಗುವುದು. ಸೇನೆಗೆ ಮತ್ತು ದೇಶದ ಭದ್ರತೆಗೆ ಎಷ್ಟು ಹಣ ಬೇಕಾದರೂ ವ್ಯಯಿಸುತ್ತೇವೆ ಅಂತೇಳಿ ಅರವಿಂದ ಕೇಜ್ರಿವಾಲ್ ಭರವಸೆ ಕೊಟ್ಟಿದ್ದಾರೆ.
ನಂಬರ್. 06
ರೈತರ ಕಲ್ಯಾಣ
ರೈತರಿಗೆ ಗೌರವಯುತವಾದ ಜೀವನವನ್ನು ನೀಡಲು, ನಾವು ಅವರ ಬೆಳೆಗಳಿಗೆ ಸಂಪೂರ್ಣ ಬೆಲೆಯನ್ನು ನೀಡುತ್ತೇವೆ. ಸ್ವಾಮಿನಾಥನ್ ವರದಿ ಆಧರಿಸಿ ರೈತರ ಬೆಳೆಗಳಿಗೆ ಸಂಪೂರ್ಣ ಬೆಲೆ ನೀಡಲಾಗುವುದು.
ನಂಬರ್. 07
ದೆಹಲಿಗೆ ರಾಜ್ಯದ ಸ್ಥಾನಮಾನ
ದೆಹಲಿ ಕೇಂದ್ರಾಡಳಿತ ಪ್ರದೇಶ.. ಆದ್ರೆ ಇದಕ್ಕೆ ರಾಜ್ಯದ ಸ್ಥಾನಮಾನ ಸಿಗಬೇಕು ಅನ್ನೋದು ದಿಲ್ಲಿ ಜನರ ಬಹುದಿನದ ಕನಸು. ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ್ರೆ ಆ ಕನಸನ್ನ ನನಸು ಮಾಡ್ತೀವಿ ಅಂತೇಳಿ ಕೇಜ್ರಿವಾಲ್ ಗ್ಯಾರಂಟಿ ಭರವಸೆ ಕೊಟ್ಟಿದ್ದಾರೆ.
ನಂಬರ್. 08
2 ಕೋಟಿ ಉದ್ಯೋಗ ಸೃಷ್ಟಿ
ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಅದನ್ನ ನಿವಾರಿಸಬೇಕು ಅಂದ್ರೆ ನಮ್ಮ ಒಕ್ಕೂಟದ ಸರ್ಕಾರ ಅಧಿಕಾರಕ್ಕೆ ಬರಬೇಕು. ನಾವು ಅಧಿಕಾರಕ್ಕೆ ಬಂದ್ರೆ ಪ್ರತಿ ವರ್ಷ 2 ಕೋಟಿ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಅಂತೇಳಿ ಕೇಜ್ರಿವಾಲ್ ಭರವಸೆ ಕೊಟ್ಟಿದ್ದಾರೆ.
ನಂಬರ್. 09
ಭ್ರಷ್ಟಾಚಾರ ನಿರ್ಮೂಲನೆ
ಭ್ರಷ್ಟಾಚಾರ ಕೊನೆಗಾಣಿಸಲು ಬಿಜೆಪಿಯ ವಾಷಿಂಗ್ ಮೆಷಿನ್ ಅನ್ನು ಅಡ್ಡಗಟ್ಟಿ ನಿಲ್ಲುವಂತೆ ಮಾಡಿ ಒಡೆದು ಹಾಕಲಾಗುವುದು. ಪ್ರಾಮಾಣಿಕರನ್ನು ಜೈಲಿಗೆ ಕಳುಹಿಸುವ, ಭ್ರಷ್ಟರಿಗೆ ರಕ್ಷಣೆ ನೀಡುವ ಈಗಿನ ವ್ಯವಸ್ಥೆ ನಿರ್ಮೂಲನೆಯಾಗಲಿದೆ. ಸಣ್ಣ ಮತ್ತು ದೊಡ್ಡ ಎರಡೂ ಹಂತಗಳಲ್ಲಿನ ಭ್ರಷ್ಟಾಚಾರವನ್ನು ಪರಿಣಾಮಕಾರಿಯಾಗಿ ತೊಡೆದುಹಾಕುತ್ತದೆ.
ನಂಬರ್. 10
ವ್ಯಾಪಾರ ಮತ್ತು ಕೈಗಾರಿಕೋದ್ಯಮಕ್ಕೆ ಉತ್ತೇಜನ?
PMLA ನಿಯಮಗಳನ್ನು ತೆಗೆದುಹಾಕುವ ಮೂಲಕ GSTಯನ್ನು ಸರಳೀಕರಿಸುವುದು. ಹೊಸ ಉದ್ಯಮಗಳು ಮತ್ತು ಕೈಗಾರಿಕೆಗಳನ್ನು ತೆರೆಯಲು ವ್ಯವಸ್ಥೆ ಮಾಡುತ್ತೇವೆ. ಚೀನಾವನ್ನು ಹಿಂದಿಕ್ಕಿ ಮುನ್ನುಗ್ಗಿ ಸಾಗೋದೇ ನಮ್ಮ ಗುರಿ ಅಂತೇಳಿ ಅರವಿಂದ ಕೇಜ್ರಿವಾಲ್ 10 ಗ್ಯಾರಂಟಿಗಳನ್ನ ಘೋಷಿಸಿದ್ದಾರೆ.
ಆದ್ರೆ ಈ ಗ್ಯಾರಂಟಿಗಳ ಜಾರಿ ಬಗ್ಗೆ ಇನ್ನು INDIA ಒಕ್ಕೂಟದ ರಾಜಕೀಯ ಪಕ್ಷಗಳ ಜೊತೆ ಕೇಜ್ರಿವಾಲ್ ಮಾತುಕತೆ ನಡೆಸಿಲ್ಲ. ಆದ್ರೆ ಮುಂದಿನ ದಿನಗಳಲ್ಲಿ ಇವುಗಳ ಜಾರಿ ಬಗ್ಗೆ ಮಾತುಕತೆ ನಡೆಸೋದಾಗಿ ಹೇಳಿದ್ದಾರೆ. ಅದೇನೇ ಇರ್ಲಿ, ಅರವಿಂದ ಕೇಜ್ರಿವಾಲ್ ಅವರ ಈ 10 ಗ್ಯಾರಂಟಿಗಳನ್ನ ಕಂಡು ಬಿಜೆಪಿ ನಾಯಕರು ಕಂಗಾಲಾಗಿ ಹೋಗಿದ್ದಾರೆ. ಹಾಗಾದ್ರೆ ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಾ.? INDIA ಒಕ್ಕೂಟ ಈ ಸಲ ದೇಶದ ಗದ್ದುಗೆ ಹಿಡಿಯುತ್ತಾ