ದಾವಣಗೆರೆ : ಸಿಟಿ ರವಿ ಅವರಿಗೆ ಸಚಿವ ಶಿವರಾಜ್ ತಂಗಡಗಿ ಚಳಿ ಬಿಡಿಸಿದ್ದಾರೆ.. ಇದ್ದಿದ್ದು ಇದ್ದಂಗೆ ಕೇಳಿದ್ರೆ ಬಿಜೆಪಿಯವರಿಗೆ ಎದ್ದು ಬಂದು ಎದೆಗೆ ಒದ್ದಂಗ್ತಾಯಿದೆ ಅಂತೇಳಿ ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲ, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂತೇಳಿ ಭರವಸೆ ಕೊಟ್ಟಿದ್ದ ಪ್ರಧಾನಿ ಮೋದಿ ಅವರು ಅದ್ಯಾಕೆ ಉದ್ಯೋಗಗಳನ್ನ ಸೃಷ್ಟಿ ಮಾಡ್ತಿಲ್ಲ. ಯುವಕರು ಉದ್ಯೋಗ ಕೇಳಿದ್ರೆ ಪಕೋಡಾ ಮಾರಿ ಅಂತೇಳೋದು ಎಷ್ಟು ಸರಿ ಅಂತೇಳಿ ಸಚಿವ ಶಿವರಾಜ್ ತಂಗಡಗಿ ರೊಚ್ಚಿಗೆದ್ದಿದ್ದಾರೆ. ಹಾಗಾದ್ರೆ ಏನಿದು ಶಿವರಾಜ್ ತಂಗಡಗಿ ಮತ್ತು ಸಿಟಿ ರವಿ ನಡುವಿನ ಮಾತಿನ ಮಲ್ಲಯುದ್ಧ ಅಂದ್ರಾ?

ಒಂದು ಮಾತು.. ಈ ಒಂದೇ ಒಂದು ಮಾತು ಬಿಜೆಪಿ ಪಾಳಯದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿದೆ. ಕಾಂಗ್ರೆಸ್ ಗ್ಯಾರಂಟಿಗಳ ಜಾರಿ ಬಗ್ಗೆ ಪಟ್ಟು ಹಿಡಿಯೋ ಕೆಲ ಮೇನ್​ಸ್ಟ್ರೀಮ್ ಮಾಧ್ಯಮಗಳು ಮತ್ತು ಬಿಜೆಪಿ ನಾಯಕರಿಗೆ ಮೋದಿ ಅದ್ಯಾಕೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತಿಲ್ಲ.? ಅದಕ್ಕೆ ಕಾರಣ ಏನು.? ಅವರಿಗಾಗ್ತಿರೋ ಸಮಸ್ಯೆಗಳೇನು.? ಅದನ್ನ ಮೋದಿ ಅವರು ಹೇಳಿಲ್ಲ ಅಂದ್ರೆ ಈ ದೇಶದ ಯುವಕರಿಗೆ ಪ್ರಧಾನಿ ಮೋದಿ ಮಾತು ತಪ್ಪಿದವರ ಹಾಗೆ ಹಾಗೋದಿಲ್ವೇ.? ಹೀಗೆ ಖಡಕ್ ಪ್ರಶ್ನೆಗಳನ್ನ ಕೇಳಿದ್ದ ಸಚಿವ ಶಿವರಾಜ್ ತಂಗಡಗಿ ಪ್ರಧಾನಿ ಮೋದಿ ಅವರು ಉದ್ಯೋಗ ಕೇಳಿದ್ರೆ ಪಕೋಡ ಮಾರಿ ಅಂತ ಹೇಳ್ತಾರೆ. ಹೀಗಾಗಿ ಇನ್ನು ಯಾರಾದ್ರು ಯುವಕರು ಮೋದಿ ಮೋದಿ ಅಂದ್ರೆ ಅವರ ಕಪಾಳಕ್ಕೆ ಬಡಿಯಬೇಕು ಅಂತೇಳಿದ್ರು. 

ಹೀಗೆ ಯುವಕರು ಇನ್ನೂ ಮೋದಿ ಮೋದಿ ಎಂದು ಘೋಷಣೆ ಕೂಗಿದ್ರೆ ಅವರ ಕಪಾಳಕ್ಕೆ ಹೊಡೆಯಿರಿ ಅಂತೇಳಿದ್ದ ಸಚಿವ ಶಿವರಾಜ್ ತಂಗಡಗಿ ವಿರುದ್ಧ ಬಿಜೆಪಿ ನಾಯರು ರೊಚ್ಚಿಗೆದ್ದಿದ್ರು. ಸಾಲ್ದು ಅಂತೇಳಿ ಶಿವರಾಜ್ ತಂಗಡಗಿ ವಿರುದ್ಧ ಕೊಪ್ಪಳ ಜಿಲ್ಲೆಯ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ನಡುವೆ, ತಮ್ಮ ಹೇಳಿಕೆಯನ್ನು ತಂಗಡಗಿ ಸಮರ್ಥಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕ ಭಾಷೆಯಲ್ಲಿ ನಾನು ಭಾಷಣ ಮಾಡಿದ್ದೆ. ಬಿಜೆಪಿಯವರು ಯುವಕರ ದಾರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದ್ದೆ ಅಂತೇಳಿದ್ದಾರೆ. ಇದಕ್ಕೆ ಮಾಜಿ ಶಾಸಕ, ಕಳೆದ ವಿಧಾನಸಭಾ ಚುನಾವಣಾ ಹೀನಾಯವಾಗಿ ಸೋತಿದ್ದ ಸಿಟಿ ರವಿ ಕೊಟ್ಟ ತಿರುಗೇಟು ಹೇಗಿತ್ತು ನೋಡಿ.

ಸಿಟಿ ರವಿ ಅವರ ಮಾತುಗಳನ್ನ ಸೂಕ್ಷ್ಮವಾಗಿ ನೋಡಿ, ಬಾರಪ್ಪ ತಂಗಡಗಿ ನಿಮ್ಮ ಅಪ್ಪನಿಗೆ ಹುಟ್ಟಿದ್ದರೆ ಕಪಾಳಮೋಕ್ಷ ಮಾಡಿ ನೋಡಿ ಅಂತ ಹೇಳಬೇಕು ಅಂತನಿಸ್ತು ಆದ್ರೆ ಹೇಳಲ್ಲ ಅಂದ್ರೆ ಏನರ್ಥ. ಹೇಳೋದೆಲ್ಲಾ ಹೇಳ್ಬಿಟ್ಟು, ಎಷ್ಟು ನಯವಾಗಿ ಜಾರಿಕೊಳ್ತಿದ್ದಾರೆ ನೋಡಿ. ಅದೇ ರೀತಿ ಯೋಗ್ಯ ಮುಖ್ಯಮಂತ್ರಿಯಾಗಿದ್ರೆ ಇಂಥ ಸಚಿವರನ್ನ ತಮ್ಮ ಸಂಪುಟದಲ್ಲಿ ಇಟ್ಕೊಳ್ಳೋದಿಲ್ಲ ಅಂತೇಳಿದ್ದಾರೆ. ಆದ್ರೆ ಇವರ ಅರ್ಥ ಏನು ಸಿದ್ದರಾಮಯ್ಯ ಯೋಗ್ಯ ಅಲ್ಲ ಅಂತ ಅಲ್ಲವೇ.? ಇಷ್ಟು ನಾಜೂಕಾಗಿ, ನಯವಾಗಿ ಪ್ರತಿಕ್ರಿಯಿಸಿರೋ ಸಿಟಿ ರವಿ ಅವರಿಗೆ ಸಚಿವ ಶಿವರಾಜ್ ತಂಗಡಗಿ ಕೂಡ ಅಷ್ಟೇ ಸೂಕ್ಷ್ಮವಾಗಿ, ನಯವಾಗಿ ತಿರುಗೇಟನ್ನ ಕೊಟ್ಟಿದ್ದಾರೆ. 

ಬಿಜೆಪಿ ನಾಯಕರ ಬಳಿಯಾಗ್ಲಿ, ಮೋದಿಜೀ ಅವರ ಬಳಿಯಾಗ್ಲಿ, ಪ್ರತಿ ವರ್ಷ 2 ಕೋಟಿ ಉದ್ಯೋಗ ಅದ್ಯಾಕೆ ಸೃಷ್ಟಿ ಮಾಡಿಲ್ಲ ಅನ್ನೋದಕ್ಕೆ ಆನ್ಸರೇ ಇಲ್ಲ. ಬದಲಿಗೆ ಜನರ ದಿಕ್ಕು ತಪ್ಪಿಸೋವಂತಾ, ಇಂಥ ಪ್ರಶ್ನೆಯನ್ನೇ ಯಾರೂ ಕೇಳದಂತೆ ನೋಡಿಕೊಳ್ಳೋ ನಿಗೂಢ ತಂತ್ರಗಾರಿಕೆ ನಡೆಯುತ್ತಿದೆ ಅಂತೇಳಿ ಶಿವರಾಜ್ ತಂಗಡಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಸಿಟಿ ರವಿ ಅವರು ಸಂಸ್ಕಾರದ ಬಗ್ಗೆ ಮಾತಾಡ್ತಾರೆ.  ಸಂಸ್ಕಾರದ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಬಿಜೆಪಿಯ ಭಾಷೆಯಲ್ಲಿ ಉತ್ತರ ಕೊಡುವುದೂ ಗೊತ್ತು. ನನಗೆ ನಮ್ಮ ಪಕ್ಷದ ನಾಯಕರು ಸಂಸ್ಕಾರ ಕಲಿಸಿಕೊಟ್ಟಿದ್ದಾರೆ. ಯುವಕರಿಗೆ ಬಿಜೆಪಿ ನಾಯಕರು ದಾರಿ ತಪ್ಪಿಸುತ್ತಿದ್ದಾರೆ ಅಂತ ನಾನು ಕಳಕಳಿಯ ಮಾತನಾಡಿದ್ದೇನೆ ಅಂತೇಳಿ ಶಿವರಾಜ್ ತಂಗಡಗಿ ಸ್ಪಷ್ಟನೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಅದೆಷ್ಟು ಸಲ ನೀವು ತ್ರಿಶೂಲ ಚಾಕು ಚೂರಿ ಹಿಡಿದುಕೊಂಡು ಓಡಾಡಿದ್ದೀರಿ. ನಿಮ್ಮನ್ನು ಏನು ಮಾಡಬೇಕು ನಾವು.? ಸತ್ಯ ಹೇಳಿದರೆ ನಿಮಗೆ ಉರಿಯುತ್ತದೆ, ಮೆಣಸಿನಕಾಯಿ ತಿಂದಂತಾಗುತ್ತಾ.? ನಾನು ಮೋದಿಯವರ 10 ವರ್ಷದ ಟ್ರ್ಯಾಕ್ ರೆಕಾರ್ಡ್ ಕೇಳಿದ್ದೇನೆ, ತಪ್ಪೇನಿದೆ.? ನಾನು ಮಾತಾಡಿದ್ದರಲ್ಲಿ ಯಾವುದಾದರೂ ಅಶ್ಲೀಲ ಪದಗಳಿತ್ತಾ.? ವಿರೋಧ ಪಕ್ಷದವನಾಗಿ ನಾನು ನಿಮ್ಮನ್ನು ಹಾಡಿ ಹೊಗಳಬೇಕೇ ಅಂತೇಳಿ ಶಿವರಾಜ್ ತಂಗಡಗಿ ಪ್ರಶ್ನಿಸಿದ್ದಾರೆ.

ಇಷ್ಟಕ್ಕೆ ನಿಲ್ಲದ ಶಿವರಾಜ್ ತಂಗಡಗಿ, ನಾನು ಯಾವ ಕೆಟ್ಟ ಪದ ಬಳಕೆ ಮಾಡಿದ್ದೇನೆ ಹೇಳಿ? ಉದ್ಯೋಗ‌ ಕೊಡುವುದರ ಬಗ್ಗೆ ಮಾತ್ರ ಬಿಜೆಪಿ ಉತ್ತರ ಕೊಡಲಿ ನೋಡೋಣ. ನಾನು ಮಾಡಿದ ಭಾಷಣ ಇನ್ನೊಮ್ಮೆ ಕೇಳಿ ಉತ್ತರ ಕೊಡಲಿ. ಭದ್ರಾ ಮೇಲ್ದಂಡೆ ಯೋಜನೆ 5300 ಕೋಟಿಯ ರಾಷ್ಟ್ರೀಯ ಯೋಜನೆ ಅಂತ ಘೋಷಣೆ ಮಾಡಿದ್ದಾರೆ. ಆ ಹಣ ಬಿಡುಗಡೆ ಮಾಡಿದ್ದಾರಾ? ಇದಕ್ಕೆ ಪ್ರಲ್ಹಾದ ಜೋಶಿ, ಬಸವರಾಜ ಬೊಮ್ಮಾಯಿ, ಸಿಟಿ ರವಿ ಉತ್ತರ ನೀಡಲಿ. ನಾವು ಉತ್ತರ ಕರ್ನಾಟಕದವರು ನಮಗೆ ಪುಸ್ತಕದ ಕನ್ನಡ ಮಾತನಾಡಲು ಬರುವುದಿಲ್ಲ. ನಮ್ಮ ಭಾಷೆ ಒರಟು. ಬಿಜೆಪಿಯ ಸಂಸ್ಕಾರ ಏನು ಅಂತ ನನಗೂ ಗೊತ್ತಿದೆ, ಅವರಿಂದ ಕಲಿಬೇಕಿಲ್ಲ ಅಂತೇಳಿ ಶಿವರಾಜ್ ತಂಗಡಗಿ ತಿರುಗೇಟನ್ನ ಕೊಟ್ಟಿದ್ದಾರೆ.

2 ಕೋಟಿ ಉದ್ಯೋಗಗಳನ್ನು ಮೋದಿ ಕೊಟ್ಟಿದ್ದರೆ ನಾನೂ ಮೋದಿಗೆ ಜೈ ಎಂದು ಹೇಳುತ್ತಿದೆ. ಸಂವಿಧಾನದ ಬಗ್ಗೆ ಗೌರವವೇ ಇಲ್ಲದವರು ನಿಮ್ಮ ಬಗ್ಗೆ ಮಾತಾಡಿದ್ದೇನೆ. ಜನ ಪಾಠ ಕಲಿಸ್ತಾರೆ ಅಂತ ಬೊಮ್ಮಾಯಿ ಹೇಳಿದ್ದಾರೆ. ಹೌದು ಜನ ಪಾಠ ಕಲಿಸಿದ್ದಕ್ಕೆ ನಿಮಗೆ 65, ನಮಗೆ 135 ಸ್ಥಾನಗಳು ಬಂದಿವೆ ಅಂತೇಳಿ ಶಿವರಾಜ್ ತಂಗಡಗಿ ಕುಟುಕಿದ್ದಾರೆ. ಉತ್ತರ ಕರ್ನಾಟಕ ಭಾಷೆಯೊಳಗೆ ನಾನು ಭಾಷಣ ಮಾಡಿದ್ದೆ. ಸಹಜವಾದ ಮಾತುಗಳು ಬಂದಿದೆ. ಒಳ್ಳೆಯ ಗೆಳೆತನದೊಳಗೂ ನಾವು ಬೇರೆಬೇರೆ ಭಾಷೆ ಬಳಸುತ್ತೇವೆ. ಜನ ಏನು ಮಾಡುತ್ತಾರೆ ಅನ್ನೋದು ಜೂನ್ 4ಕ್ಕೆ ನಿರ್ಧಾರ ಆಗಲಿದೆ ಅಂತೇಳಿ ಶಿವರಾಜ್ ತಂಗಡಗಿ ಹೇಳಿದ್ದಾರೆ.

ಹಾಗಾದ್ರೆ ವರ್ಷಕ್ಕೆ 2 ಕೋಟಿ ಉದ್ಯೋಗವನ್ನ ಮೋದಿ ಹೇಳಿದಂತೆ ಅದ್ಯಾಕೆ ಸೃಷ್ಟಿ ಮಾಡಿಲ್ಲ.? ಈ ಬಗ್ಗೆ ಜನ ಪ್ರಶ್ನೆ ಕೇಳಲೇಬಾರ್ದಾ.? ಶಿವರಾಜ್ ತಂಗಡಗಿ ಎತ್ತಿರೋ ಈ ಪ್ರಶ್ನೆಯ ಬಗ್ಗೆ ನೀವೇನಂತಿರಾ?

Share.
Leave A Reply

Exit mobile version