ದಾವಣಗೆರೆ ; ಕಾರ್ಗಿಲ್ ಯುದ್ಧ ಗೆದ್ದು 25 ವರ್ಷದ ಸಂಭ್ರಮಕ್ಕೆ ಯುವಾ ಬ್ರಿಗೇಡ್ ನಿಂದ ಮ್ಯಾರಥಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ನಾವೆಲ್ಲ ಸೇರಿ “ಕಾರ್ಗಿಲ್ ಗೆದ್ದಾಯ್ತು, ಇನ್ನೀಗ ಟಾರ್ಗೆಟ್ ಪಿಒಕೆ ಎಂಬ ಹೆಸರಿನಲ್ಲಿ ಯುವಾ ಬ್ರಿಗೇಡ್ ವತಿಯಿಂದ ಸೈನಿಕರ ಸಾಹಸಕ್ಕೆ, ತ್ಯಾಗ ಬಲಿದಾನಗಳಿಗೆ ಗೌರವ ನೀಡುವ ದೃಷ್ಟಿಯಿಂದ ಮ್ಯಾರಥಾನ್ ಆಯೋಜಿಸಲಾಗಿತ್ತು.
ಚಾಣಕ್ಯ ಕಾಲೇಜ್ ಪ್ರೇರಣ ಅಕಾಡೆಮಿಯಿಂದ ಪ್ರಾರಂಭವಾದ ಮ್ಯಾರಥಾನ್ ಅಮರ್ ಜವಾನ್ ಪಾರ್ಕ್” ತನಕ ಬಂದು ಗಿಡ ನೆಡುವ ಮೂಲಕ ಮುಕ್ತಾಯಗೊಂಡಿತು.ಸುಮಾರು 200 ಕ್ಕಿಂತ ಹೆಚ್ಚು ಜನ ಕಾಲೇಜ್ ವಿದ್ಯಾರ್ಥಿಗಳು, ಎನ್ ಸಿಸಿ ಕೆಡೆಟ್ಸ್, ಮಾಜಿ ಸೈನಿಕರು ಉಪಸ್ಥಿತರಿದ್ದರು.