ಶಿವಗಂಗಾ ಯೋಗ ಕೇಂದ್ರ ಮನೆ ಮನೆಗೆ ಯೋಗ ತಲುಪಿಸುವ ಮಹತ್ಕಾರ್ಯ ಕನ್ನಡ ಕಲೆ, ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ.
ಶಿವಮೊಗ್ಗ:
ಕನ್ನಡ ಭಾಷೆಯ ಮಹತ್ವ, ಕಲೆ, ಸಂಸ್ಕೃತಿಯನ್ನು ಮಕ್ಕಳಿಗೆ ಪೋಷಕರು ಕಲಿಸಬೇಕು ಎಂದು ಶಿವಗಂಗಾ ಯೋಗ ಕೇಂದ್ರದ ಗುರು ರುದ್ರಾರಾಧ್ಯ ಹೇಳಿದರು.
ಕೃಷಿನಗರದ ಶಿವಗಂಗಾ ಯೋಗ ಕೇಂದ್ರ, ಎಲ್ಬಿಎಸ್ ಶಾಖೆಯ ಶಿಕ್ಷಕರು, ಶಿಕ್ಷಣಾರ್ಥಿಗಳಿಂದ ರೋಟರಿ ರಿವರ್ ಸೈಡ್ನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಉಳಿಸಿ ಬೆಳೆಸುವ ಕಾಯಕದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು. ಶಿವಗಂಗಾ ಯೋಗ ಮನೆಮಾತಾಗಲು ದಿನನಿತ್ಯ ಯೋಗ ಮಾಡಲು ಸ್ಥಳವಾಕಾಶ ಸೇರಿ ಎಲ್ಲ ಸೌಲಭ್ಯ ನೀಡುತ್ತಿರುವ ರೋಟರಿ ಸಂಸ್ಥೆಗೆ ನಾವೆಲ್ಲಾ ಚಿರಋಣಿ ಎಂದು ತಿಳಿಸಿದರು.
ರೋಟರಿ ಅಧ್ಯಕ್ಷ ಸೂರ್ಯನಾರಾಯಣ ಉಡುಪ ಮಾತನಾಡಿ, ಶಿವಗಂಗಾ ಯೋಗ ಕೇಂದ್ರ ಮನೆ ಮನೆಗೆ ಯೋಗ ತಲುಪಿಸುವ ಮಹತ್ಕಾರ್ಯ ಮಾಡುತ್ತಿದೆ. ಕನ್ನಡ ಕಲೆ, ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದೆ. ಕೇಂದ್ರದ ಎಲ್ಲ ಕಾರ್ಯಕ್ರಮಗಳಿಗೆ ನಮ್ಮ ಸಹಕಾರ ಇರುತ್ತದೆ ಎಂದು ಆಶ್ವಾಸನೆ ನೀಡಿದರು.
ಉಷಾ ಉಡುಪ ಮಾತನಾಡಿ, ಈ ತರಹದ ಕಾರ್ಯಕ್ರಮದಿಂದ ಮಕ್ಕಳಲ್ಲಿ ಕನ್ನಡದ ಬಗ್ಗೆ ಅಭಿಮಾನ ಪ್ರೀತಿ ಬೆಳೆಯುತ್ತದೆ. ಹೆಚ್ಚೆಚ್ಚು ಮಕ್ಕಳನ್ನು ಇಂತಹ ಕಾರ್ಯಕ್ರಮಗಳಿಗೆ ಕರೆದುಕೊಂಡು ಬರಬೇಕು ಎಂದರು.
ರೋಟರಿ ರಿವರ್ ಸೈಡ್ ಅಧ್ಯಕ್ಷ ಬಸವರಾಜ್.ಎಂ.ಆರ್. ಮಾತನಾಡಿ, ಕೃಷಿನಗರದ ಯೋಗ ಸಂಸ್ಥೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವಾಗ ನಾವು ಕೈಜೋಡಿಸುತ್ತೇವೆ ಎಂದು ತಿಳಿಸಿದರು.
ಕಾರ್ಯದರ್ಶಿ ವಿನಯ್.ಸಿ.ಬಿ., ಚಂದ್ರಶೇಖರ, ನೀಲಕಂಠ ರಾವ್, ಸುರೇಶ್.ವೈ.ಜೆ, ಮಹಾಬಲೇಶ್ವರ ಹೆಗಡೆ, ಜಿ.ವಿಜಯಕುಮಾರ್, ಸಿದ್ದರಾಮಪ್ಪ, ಬಿಂದು ವಿಜಯಕುಮಾರ್, ಚಂದ್ರಶೇಖರಯ್ಯ, ನೀಲಕಂಠರಾವ್, ಸುರೇಶ್, ಶುಭದಾ ಹೆಗಡೆ, ನಾಗರತ್ನಮ್ಮ ಚಂದ್ರಶೇಖರಯ್ಯ, ಮಮತಾ, ದ್ರಾಕ್ಷಾಯಿಣಿ, ಅರುಣಾ ಉಪಸ್ಥಿತರಿದ್ದರು.
ಮೂರು ಕೇಂದ್ರದ ಶಿಕ್ಷಣಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ನೂರಕ್ಕೂ ಹೆಚ್ಚು ಯೋಗ ಕಲಿಕಾರ್ಥಿಗಳು ಭಾಗವಹಿಸಿದ್ದರು. ಮನರಂಜನೆ ಕಾರ್ಯಕ್ರಮ, ಹಾಡು, ನೃತ್ಯ, ಕಿರು ನಾಟಕ ನಡೆದವು. 60 ವರ್ಷಕ್ಕೂ ಮೇಲ್ಪಟ್ಟವರು ಅತಿ ಉತ್ಸಾಹದಿಂದ ಪಾಲ್ಗೊಂಡಿದ್ದು ತುಂಬಾ ವಿಶೇಷವಾಗಿತ್ತು.