ನಂದೀಶ್ ಭದ್ರಾವತಿ, ದಾವಣಗೆರೆ

ಹಾಟ್ ಸ್ಪಾಟ್ ದಾವಣಗೆರೆಯಲ್ಲಿ ಕಾಂಗ್ರೆಸ್ -ಬಿಜೆಪಿ ನಡುವೆ ನೇರ ಸ್ಪರ್ಧೆ ಇದ್ದರೂ, ಸಮೀಕ್ಷೆಗಳು ಕಡಿಮೆ ಅಂತರದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಹೇಳಿದೆ.

ಕಾಂಗ್ರೆಸ್ ನಿಂದ ಪ್ರಭಾ ಮಲ್ಲಿಕಾರ್ಜುನ್, ಬಿಜೆಪಿಯಿಂದ ಗಾಯಿತ್ರಿ ಸಿದ್ದೇಶ್ವರ ಸ್ಪರ್ಧಿಸಿದ್ದು, ಇವರಿಬ್ಬರ ನಡುವೆ ನೇರಾಹಣಾಹಣಿ ಇತ್ತು. ಈ ಮಧ್ಯೆ ಕಾಂಗ್ರೆಸ್  ಬಂಡಾಯ ಅಭ್ಯರ್ಥಿ ವಿನಯ್ ಕುಮಾರ್ ಸ್ಪರ್ಧೆ ಕಾಂಗ್ರೆಸ್ ಗೆ  ಒಡೆತ ಕೊಟ್ಟಿದೆ. ಅಲ್ಲದೇ ಪಕ್ಷೇತರ ಅಭ್ಯ

ರ್ಥಿಗಳಾಗಿ 12 ಮುಸ್ಲಿಂ ಅಭ್ಯರ್ಥಿಗಳು ನಿಂತಿರುವುದು ಕೂಡ ಕಾಂಗ್ರೆಸ್ ಗೆ ಸ್ವಲ್ಪ ಹಿನ್ನೆಡೆಯಾಗುವ ಸಂಭವವಿದೆ.

ಈ ಬಾರಿ 17 ಲಕ್ಷ ಮತದಾರರಲ್ಲಿ  13 ಲಕ್ಷ ಮತದಾರರು ವೋಟಿಂಗ್ ಮಾಡಿದ್ದರು. ಇದರಲ್ಲಿ 17 ಸಾವಿರ ಮತಗಳು ಅಂಚೆ ಮತಗಳು, 40 ಸಾವಿರ ಹೊಸ ಮತದಾರರು ಬಿಜೆಪಿ ಕೈ ಹಿಡಿದಿರುವುದು ಬಿಜೆಪಿಗೆ ಫ್ಲಸ್ ಪಾಯಿಂಟ್ ಆಗಿದೆ. ಅಲ್ಲದೇ ಎಲೆಕ್ಷನ್ ಟೈಮ್ ನಲ್ಲಿ ನೇಹಾ ಕೊಲೆ ಪ್ರಕರಣ ಬಿಜೆಪಿಗೆ ಫ್ಲಸ್ ಆಯಿತು. ಇನ್ನು ಜೆಡಿಎಸ್ ನ ಎಚ್.ಎಸ್.ಶಿವಶಂಕರ್ ಬಿಜೆಪಿ ಮೈತ್ರಿ ಆಗಿದ್ದು ಸುಮಾರು 20 ರಿಂದ 25 ಸಾವಿರ ಮತಗಳು ಬಿಜೆಪಿಗೆ ಬಿದ್ದಿದೆ. ಅಲ್ಲದೇ‌  ಗ್ಯಾರಂಟಿ ವಿರೋಧಿ ಪುರುಷ ಮತದಾರರು ಸಂಪೂರ್ಣ ಬಿಜೆಪಿಗೆ ಹಾಕಿದ್ದಾರೆ. ಮಹಿಳಾ ಮತದಾರರು ಹೆಚ್ಚಿದ್ದರೂ ಸಹ ಮೇಲ್ವವರ್ಗ, ಮಧ್ಯಮವರ್ಗದ ಮಹಿಳೆ ಮತದಾರರು ಫಲಾನುಭವಿಗಳಾಗಿದ್ದರೂ ಸಹ ದರ ಹೆಚ್ಚಳ ಅವರನ್ನು ನಿದ್ದೆಗೆಡಿಸಿದ್ದು, ಈ ಮತಗಳು ಬಿಜೆಪಿಗೆ ಹೋಗಿರುವ ಸಂಭವ ಇದೆ. ಇನ್ನು ಕೆಳವರ್ಗದ ಮಹಿಳಾ ಮತದಾರರು ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಅಲ್ಲದೇ ಒಂದೇ ಮನೆಗೆ ಮೂರು ಅಧಿಕಾರ ಪ್ಲೇ ಕಾರ್ಡ್ ಬಿಜೆಪಿಗೆ ಫ್ಲಸ್ ಆಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರಕ್ಕಿಂತ ಪ್ರಧಾನಿ ಮೋದಿ ಮುಖ ನೋಡಿ ಹೆಚ್ಚಿನ ಮತದಾರರು ಬಿಜೆಪಿ ಗೆ ಮತ ಹಾಕಿದ್ದಾರೆ. ಇನ್ನು ಕಾಂಗ್ರೆಸ್ ನಲ್ಲಿದ್ದ ಶಿವನಹಳ್ಳಿ ರಮೇಶ್ ಸೇರಿದಂತೆ ಇನ್ನಿತರ ಮುಖಂಡರನ್ನು ಬಿಜೆಪಿ ತನ್ನ ತೆಕ್ಕೆಗೆ ಎಳೆದುಕೊಂಡಿದ್ದು, ಒಂದಿಷ್ಟು ಅನುಕೂಲವಾಯಿತು.

ಈ ನಡುವೆ  ಬಾಂಬೆ ಬಾಯ್ಸ್  ಎಂದೇ ಖ್ಯಾತಿ ಪಡೆದ ರೇಣುಕಾಚಾರ್ಯ, ಲೋಕಿಕೆರೆ ನಾಗರಾಜ್, ಮಾಡಾಳ್ ಮಲ್ಲಿಕಾರ್ಜುನ್, ಅಜೇಯ್ ಕುಮಾರ್ ರನ್ನು ಮಾಜಿ ಸಿಎಂ ಯಡಿಯೂರಪ್ಪ  ಕೊನೆ ಕ್ಷಣದಲ್ಲಿ ರಾಜಿ ಸಂಧಾನ ಮಾಡಿಸಿದ್ದು, ವರ್ಕೌಟ್ ಆಯಿತು. ಇಲ್ಲಿ ಒಳ ಒಡೆತ ಅಷ್ಟಾಗಿ ಕಾಣಲಿಲ್ಲ. ಇನ್ನು ಕಾರ್ಯಕರ್ತರ ಶ್ರಮ ಹೆಚ್ಚಿನ ಮತ ಬೀಳಲು ಕಾರಣವಾಯಿತು.

ಬಿಜೆಪಿ ಇಷ್ಟೆಲ್ಲ ತಂತ್ರಗಾರಿಕೆ ಮಾಡಿದ್ದರೂ, ಕಾಂಗ್ರೆಸ್ ಸುಮ್ಮನೆ ಕೂತಿರಲಿಲ್ಲ. ಅದು ಕೂಡ ತಂತ್ರಗಾರಿಕೆ ಹೂಡಿತ್ತು. ಪರಿಣಾಮ ಹಿಂದೂ ಮುಖಂಡ ವಾಗೀಶ್ ಸ್ವಾಮಿ, ಎಚ್‌.ಎಸ್.ನಾಗರಾಜ್, ಮಾಜಿ ಶಾಸಕ ಗುರುಸಿದ್ದನಗೌಡ, ಟಿ.ಜಿ.ರವಿಕುಮಾರ್, ಹೀಗೆ ಸಾಲು ಸಾಲು ಬಿಜೆಪಿ ನಾಯಕರನ್ನು ತನ್ನ ತೆಗೆದುಕೊಂಡಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಪ್ರಯೋಜನವಾಗಲಿಲ್ಲ. ಅಲ್ಲದೇ ಸಚಿವ ಎಸ್‌.ಎಸ್.ಮಲ್ಲಿಕಾರ್ಜುನ್ ಗಿಂತ ಸರಳ ವ್ಯಕ್ತಿತ್ವವುಳ್ಳ ಪ್ರಭಾ ಮಲ್ಲಿಕಾರ್ಜುನ್ ಪರ ಹಲವರು ಬ್ಯಾಟಿಂಗ್ ಬೀಸಿದರು.

ಗ್ಯಾರಂಟಿಗಳು ಕೈ ಹಿಡಿದರೂ ಅದು ಕೆಳವರ್ಗದ ಮಹಿಳೆಯರದ್ದಾಗಿತ್ತು. ಇನ್ನು ಕೆಲ ಕಡೆ ಕಾಂಗ್ರೆಸ್ ನ ಕೆಲವರು ತಾಲೂಕುಗಳಲ್ಲಿ ಅಷ್ಟಾಗಿ ಕೆಲಸ ಮಾಡಲಿಲ್ಲ, ಮೇಲ್ನೋಟಕ್ಕೆ ಮಾತ್ರ ಕಾಂಗ್ರೆಸ್ ನ ಮುಖಂಡರು ಕೆಲಸ ಮಾಡಿದಂತೆ ಕಂಡರು. ಅಲ್ಲದೇ ಲೋಕಸಭೆ ಚುನಾವಣೆಯಲ್ಲಿ ಹಣ ಕೆಲಸ ಮಾಡಲಿಲ್ಲ. ಈ ನಡುವೆ ವಿನಯ್ ಕುಮಾರ್ ಸ್ಪರ್ಧೆ ಕಾಂಗ್ರೆಸ್ ಗೆ ಒಡೆತ ಕೊಟ್ಟಿತ್ತು.

ವಿನಯ್ ಕುಮಾರ್ ಗೆ ಕುರುಬ ಸಮುದಾಯದ ಹೆಚ್ಚಿನ ಮತಗಳು ಬಿದ್ದವು. ವಿನಯ್ ಕುಮಾರ್ ಹೇಳುವ ಪ್ರಕಾರ 13 ಲಕ್ಷ ಮತಗಳಲ್ಲಿ ಶೇ.10 ರಷ್ಟು ಮತಗಳು ನನಗೆ ಬಿದ್ದರೂ, ಸುಮಾರು ಒಂದು ಲಕ್ಷ ಮತಗಳನ್ನು ನಾನು ಪಡೆಯುತ್ತೇನೆ ಅಂತಿದ್ದಾರೆ. ಇವೆಷ್ಟೂ ಮತಗಳು ಕಾಂಗ್ರೆಸ್ನದ್ದಾಗಿದ್ದು, ಗೆಲುವಿನ ಲಕ್ಷ್ಮೀ ಯಾರ ಮನೆಗೆ ಹೋಗುತ್ತಾಳೆ ಕಾದು ನೋಡಬೇಕು.

 

Share.
Leave A Reply

Exit mobile version