ದಾವಣಗೆರೆ : ಲೋಕಸಭೆ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಶುರುವಾಗಿದೆ. ಅಧಿಕ ಸ್ಥಾನ ಗೆಲ್ಲಬೇಕು ಅಂತ ಬಿಜೆಪಿ, ಕಾಂಗ್ರೆಸ್ ಪೈಪೋಟಿ ಬಿದ್ದು, ಅಖಾಡಕ್ಕೆ ಇಳಿದಿವೆ. ಕಾಂಗ್ರೆಸ್ 20 ಸ್ಥಾನ ಗೆಲ್ಲುವ ವಿಶ್ವಾಸ ಇಟ್ಟುಕೊಂಡಿದ್ದರೆ ಇತ್ತ ಬಿಜೆಪಿ 20 ಹೆಚ್ಚು ಸ್ಥಾನಗಳನ್ನ ಗೆಲ್ಲುವ ಟಾರ್ಗೆಟ್ ಇಟ್ಟುಕೊಂಡು ಮುನ್ನುಗ್ಗತ್ತಿದೆ. ಆರು ಕ್ಷೇತ್ರಗಳಲ್ಲಿ ತಿಣಕಾಡುತ್ತಿರುವುದು ಯಾಕೆ..? ಮಹಾಪ್ರಭು 15 ಲಕ್ಷ ರೂಪಾಯಿ ಅಕೌಂಟ್ಗೆ ಹಾಕಿದ್ರಾ ಅಂತ ಪ್ರಶ್ನಿಸಿದ್ದು ಯಾರು? ಹಾಗಾದ್ರೆ ಯಾರು ಎಷ್ಟು ಸ್ಥಾನ ಗೆಲ್ತಾರೆ..?

20 ಸ್ಥಾನ ನಾವು ಗೆಲ್ಲುತ್ತೀವಿ, 20ಕ್ಕೂ ಅಧಿಕ ಸ್ಥಾನ ನಾವು ಗೆಲ್ಲುತ್ತೀವಿ ಅಂತ ಬಿಜೆಪಿ ಕಾಂಗ್ರೆಸ್ ಜಿದ್ದಿಗೆ ಬಿದ್ದು ಅಖಾಡದಲ್ಲಿ ಹೋರಾಡುತ್ತಿವೆ.. ಹಾಗಾದ್ರೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಗೆಲ್ಲುವ ಸ್ಥಾನಗಳೆಷ್ಟು..?

ರಾಜ್ಯದಲ್ಲಿ ಬಿಜೆಪಿ 20 ಸ್ಥಾನಗಳಲ್ಲಿ ಗೆಲ್ಲಲಿದೆ ಈಚೆಗೆ ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯ ನಾಯಕರು, ವರದಿ ಸಲ್ಲಿಸಿದ್ದಾರೆ ಎನ್ನಲಾಗಿದೆ… ಸದ್ಯ 14 ಕ್ಷೇತ್ರಗಳಲ್ಲಿ ಗೆಲುವು, ಆರು ಕ್ಷೇತ್ರಗಳಲ್ಲಿ ಫೈಟ್ ಅಂದ್ರೆ 50-50 ಹಾಗೂ ಮತ್ತೆರಡು ಕ್ಷೇತ್ರಗಳಲ್ಲಿ ಗೆಲುವಿನ ಸಾಧ್ಯತೆ ಕ್ಷೀಣವಿದೆ ಅಂತ ಪಿಎಂಗೆ ರಾಜ್ಯ ನಾಯಕರು ವರದಿ ಮಾಡಿದ್ದಾರೆ. ನಿರೀಕ್ಷಿತ ಫಲಿತಾಂಶ ಮೋದಿ ಖುಷಿಯಾಗಿದ್ದಾರೆ.

ಅಷ್ಟೇಅಲ್ಲ, ಬಿಜೆಪಿಗೆ ಆರು ಕ್ಷೇತ್ರಗಳಲ್ಲಿ ಬಿಗ್ ಫೈಟ್ ಎದುರಾಗಲಿದೆ ಅಂತ ವರದಿ ಹೇಳಿದೆ. ದಾವಣಗೆರೆ, ಕೊಪ್ಪಳ, ರಾಯಚೂರು, ಚಿಕ್ಕಬಳ್ಳಾಪುರ, ಚಿಕ್ಕೋಡಿಗಳಲ್ಲಿ 50-50 ಫೈಟ್ ಇದ್ದು, ಈ ಕ್ಷೇತ್ರಗಳಲ್ಲಿ ಬಹುತೇಕ ಬಿಜೆಪಿ ಸಂಸದರಿದ್ದು, ಬಿಜೆಪಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

ಚಾಮರಾಜನಗರ, ಚಿತ್ರದುರ್ಗದಲ್ಲಿ ಬಿಜೆಪಿ ಗೆಲುವಿನ ಸಾಧ್ಯತೆ ಕ್ಷೀಣವಾಗಿದೆ ಅಂತ ಹೇಳಲಾಗ್ತಿದೆ.. ಮತ್ತೊಂದು ಕಡೆ ಕಾಂಗ್ರೆಸ್ 20 ಸ್ಥಾನಗಳನ್ನ ಗೆಲ್ಲಲಿದೆ ಅಂತ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ವಿಶ್ವಾಸ ಹೊಂದಿದ್ದಾರೆ.

ಮತ್ತೊಂದು ಕಡೆ ನಟ ಪ್ರಕಾಶ್ ರಾಜ್, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ… ಮಹಾಪ್ರಭು ಹದಿನೈದು ಲಕ್ಷ ರೂಪಾಯಿಗಳನ್ನು ಅಕೌಂಟ್ಗೆ ಹಾಕಿದ್ರಾ ಅಂತ ಪ್ರಶ್ನೆ ಮಾಡಿದ್ದಾರೆ.

ಇನ್ನ ಹತ್ಯೆಗೆ ಒಳಗಾದ ನೇಹಾ ಹಿರೇಮಠ್ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ, ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.. ಈ ವೇಳೆ ಮಾತನಾಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ..

Share.
Leave A Reply

Exit mobile version