ಜಗಳೂರು: ಕ್ಷೇತ್ರದ ಅರಸಿಕೇರೆ ಏಳು ಪಂಚಾಯಿತಿಗಳ ಮುಖಂಡರು ಬಿಜೆಪಿ ನಾಯಕ ಸಂಸದ ಜಿ.ಎಂ.ಸಿದ್ದೇಶ್ವರ, ಜಿ.ಎಸ್.ಅನಿತ್ ನೇತೃತ್ವದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.
ದಾವಣಗೆರೆ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಡಿ, ನಾಗನಗೌಡ್ರು ಅವರು ಹಾಗೂ ರಾಮಘಟ್ಟ ಗ್ರಾಮದ ಡಿ,ಶಂಭುಲಿಂಗಪ್ಪ ನವರು ಮರಳುಸಿದ್ದಪ್ಪ ನವರು, ರುದ್ರಚಾರಿಯವರು, ದಾವಣಗೆರೆ ಜಿಲ್ಲೆಯ ಸಂಸದರಾದ ಜಿ ಎಂ ಸಿದ್ದೇಶ್ವರ ಅವರ ಹಾಗೂ ಜಗಳೂರಿನ ಮಾಜಿ ಶಾಸಕರಾದ ಎಸ್ ವಿ ರಾಮಚಂದ್ರಪ್ಪ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.
ನಂತರ ಮಾತನಾಡಿ ಸೇರ್ಪಡೆಗೊಂಡ ನಾಯಕರು ಮಾತನಾಡಿ, ಈ ಬಾರಿ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರರನ್ನು ಗೆಲ್ಲಿಸುತ್ತೇವೆ ಮೋದಿ ಕೈ ಬಲಪಡಿಸುತ್ತೇವೆ. ಅಲ್ಲದೇ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತ್ಯಧಿಕ ಲೀಡ್ ಕೊಡುವುದಾಗಿ ಮುಖಂಡರು ಹೇಳಿದರು.
ಈ ಸಂದರ್ಭದಲ್ಲಿ ಉಚ್ಚಂಗಿದುರ್ಗ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಬೇವಿನಹಳ್ಳಿ ಕೆಂಚನಗೌಡ್ರು, ಮಾಜಿ ಗ್ರಾಮ ಪಂ ಅಧ್ಯಕ್ಷರಾದ, ಎಸ್ ಹನುಮಂತಪ್ಪ ನವರು, ಚಟ್ನಿಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಅಜ್ಜಯ್ಯ ನವರು, ಗ್ರಾಮ ಪಂ ಸದಸ್ಯರಾದ ಬೋಗೇಶ್ ರವರು, ನಾಗರಾಜಪ್ಪ ನವರು, ಅಂಜಿನಪ್ಪ ನವರು, ಕುಮಾರ್ ರವರು, ಈಶ್ಯಪ್ಪ ನವರು, ಪ್ರಭುಗೌಡ್ರು, ಅಮರೇಶ್ ಅವರು ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಬಿಕೆ ವಿಜಯಕುಮಾರ್ ಮುಖಂಡರಾದ ಯು, ಕಲ್ಲಹಳ್ಳಿ ಸುರೇಶ ರವರು, ಫಣಿಯಾಪುರ ಲಿಂಗರಾಜ ಅವರು, ಕುರೇಮಾಗನಹಳ್ಳಿ ಬಣಕಾರ ಬಸವರಾಜ ರವರು ಉಪಸ್ಥಿತರಿದ್ದರು.