ನಂದೀಶ್ ಭದ್ರಾವತಿ, ದಾವಣಗೆರೆ

ಈ ಊರಿನಲ್ಲಿ ಸದ್ಯ ಮಹಿಳೆಯರೇ ಹೆಚ್ಚು ಪ್ರಾಬಲ್ಯ ಹೊಂದಿದ್ದು, ಎಸ್ಪಿ, ಎಸಿ‌ ಕಮೀಷನರ್, ಮಹಿಳಾ ಮತ್ತು ಕಲ್ಯಾಣ ಇಲಾಖೆ, ರಿಜಿಸ್ಟರ್ ಆಫೀಸ್, ವಿಶೇಷ ಭೂ ಸ್ವಾಧೀನಕಾರಿ ಮಹಿಳೇಯೇ ಆಗಿದ್ದು, ಈಗ ರಾಜಕೀಯ ವಲಯದಲ್ಲೂ ಈಗ ಮಹಿಳೆ ಎಂಟ್ರಿಕೊಟ್ಟಿದ್ದಾರೆ. 

ಅಷ್ಟಕ್ಕೂ ಇಷ್ಟೇಲ್ಲ ಪೀಠಿಕೆ ಹಾಕೋದಕ್ಕೆ ಕಾರಣವಿದೆ. ಸದ್ಯ ದಾವಣಗೆರೆಯಲ್ಲಿ ದುಗ್ಗಮ್ಮ ಜಾತ್ರೆಗಿಂತ ರಾಜಕೀಯ ಚರ್ಚೆ ಜೋರಾಗಿದ್ದು, ಅಳೆದು, ತೂಗಿ ಬಿಜೆಪಿ ಹೈಕಮಾಂಡ್ ಹಾಲಿ ಸಂಸದ ಸಿದ್ದೇಶ್ ಬದಲು ಕುಟುಂಬಕ್ಕೆ ಟಿಕೆಟ್ ನೀಡಲಾಗಿದೆ. ಅದರಲ್ಲೂಜಿಎಂ ಸಿದ್ದೇಶ್ವರ ಪತ್ನಿ ಗಾಯಿತ್ರಿ ಸಿದ್ದೇಶ್ವರಗೆ ಟಿಕೆಟ್ ನೀಡಿರುವುದು ಅಚ್ಚರಿ ಬೆಳವಣಿಗೆಯಾಗಿದೆ.  ಇನ್ನು ದಾವಣಗೆರೆ ಲೋಕಸಭೆ ಬಿಜೆಪಿ ಟಿಕೆಟ್ ಕೊನೆ ಕ್ಷಣದಲ್ಲಿ ಕೊಂಚ ಬದಲಾವಣೆ ಆಗಿದೆ.  ಸಿದ್ದೇಶ್ವರ್ ಅವರ ಸಹೋದರ ಜಿಎಂ ಲಿಂಗರಾಜ್ ಗೆ ಟಿಕೆಟ್ ಸಿಗುತ್ತೆ ಎಂದು ಮಾಹಿತಿ ಇತ್ತು, ಅಲ್ಲದೇ ಪೋಟೋ ಶೂಟ್ ಕೂಡ ಮಾಡಿಸಿದ್ದರು. ಈ ಮೂಲಕ ಲಿಂಗರಾಜ್ ಆಸೆ ಕಮರಿದ್ದು, ಗಾಯಿತ್ರಿ ಸಿದ್ದೇಶ್ ಗೆ ಟಿಕೆಟ್ ಸಿಕ್ಕಿದೆ.

ಸಚಿವರ ಪತ್ನಿಗೆ ಟಿಕೆಟ್

ಕಾಂಗ್ರೆಸ್ ನಲ್ಲಿ ಬಹುತೇಕ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಪತ್ನಿಗೆ ಟಿಕೆಟ್ ಫಿಕ್ಸ್ ಆಗಿರುವ ಕಾರಣ ಇತ್ತ ಬಿಜೆಪಿಯಲ್ಲಿ ಗಾಯಿತ್ರಿ ಸಿದ್ದೇಶ್ ಗೆ ಕೊಡಲಾಗಿದೆ. ಈ ಮೂಲಕ ಬೀಗರ ಕದನ ಶುರುವಾಗಿದೆ. ಮೊದಲೆ ಸಿದ್ದೇಶ್ವರ ಕಂಡ್ರೆ ಗುಟುರು ಹಿಕ್ಕುವ ಎಸ್.ಎಸ್.ಮಲ್ಲಿಕಾರ್ಜುನ್ ಗೆಲ್ಲಲು ತಮ್ಮದೇ ತಂತ್ರ ಬಳಸಲು ಸಿದ್ದರಾಗಿದ್ದಾರೆ.. ಅಲ್ಲದೇ ಸಿದ್ದೇಶ್ವರ ಕೂಡ ಪತ್ನಿ ಗೆಲ್ಲಿಸಲು ಅವರದ್ದೇ ಆದ ಬಾಣ ಹೂಡವರು.  

ಎಸ್ಎಸ್ ಕೇರ್ ಟ್ರಸ್ಟ್ ಮೂಲಕ ಪ್ರಚಾರ

 ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸೊಸೆ, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್ ಅವರ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ   ಎಸ್‌.ಎಸ್‌. ಕೇರ್‌ ಟ್ರಸ್ಟ್‌ ಮೂಲಕ ಒಂದು ವರ್ಷದಿಂದ ಅನೇಕ ಆರೋಗ್ಯ ಸಂಬಂಧಿ ಚಟುವಟಿಕೆ ಹಮ್ಮಿಕೊಳ್ಳುತ್ತಿದ್ದು, ಮಾ. 15ಕ್ಕೆ ಅವರ ಜನ್ಮದಿನಾಚರಣೆ ನಡೆಯಲಿದೆ. ಇದೇ ಮೊದಲ ಬಾರಿಗೆ ಅವರ ಜನ್ಮದಿನ ಕಾರ್ಯಕ್ರಮದ ಕುರಿತು ನಗರ ಸೇರಿದಂತೆ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಬ್ಯಾನರ್‌ ಅಳವಡಿಸಲಾಗಿದೆ. ಇದನ್ನು ನೋಡಿದರೆ ಶಾಮನೂರು ಕುಟುಂಬ ಅವರನ್ನು ಚುನಾವಣೆಯ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. ಇನ್ನು ಒಂದೊಮ್ಮೆ ಪಕ್ಷವು ಶಾಮನೂರು ಕುಟುಂಬಕ್ಕೆ ಒತ್ತು ನೀಡಿ ಡಾ.ಪ್ರಭಾ ಅವರಿಗೆ ಟಿಕೆಟ್‌ ನೀಡಿದರೆ ಮಧ್ಯ ಕರ್ನಾಟಕದ ಪ್ರಮುಖ ಕ್ಷೇತ್ರ ದಾವಣಗೆರೆ ಮಹಿಳೆಯರ ಸ್ಪರ್ಧಾ ಕಣವಾಗಲಿದೆ.

ಗಾಯಿತ್ರಿ ಸಿದ್ದೇಶ್ ಕೂಡ ಆಗಾಗ ಕಾಣಿಸಿಕೊಳ್ಳುತ್ತಿದ್ದರು

ಎಂ.ಹಾಲಮ್ಮ ಚಾರಿಟಬಲ್‌ ಟ್ರಸ್ಟ್‌ ಮೂಲಕ ಉದ್ಯೋಗ ಮೇಳ, ಆರೋಗ್ಯ ಶಿಬಿರ ಹಾಗೂ ಮಹಿಳಾ ಸಂಘಗಳಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸುವ ಮೂಲಕ ಸಾಮಾಜಿಕ ಕಾರ್ಯದಲ್ಲಿ ಗಾಯಿತ್ರಿ ಸಿದ್ದೇಶ್  ಸಕ್ರಿಯರಾಗಿದ್ದರು. ಮನೆ ಹಾಗೂ ತೋಟದ ನಿರ್ವಹಣೆಯ ಜವಾಬ್ದಾರಿಯನ್ನು ಇವರು ನೋಡಿಕೊಳ್ಳುತ್ತಿದ್ದರು. ಅಲ್ಲದೇ ಸಂಸದ ಸಿದ್ದೇಶ್ ಜತೆ ಇದ್ದು ಅವರ ರಾಜಕೀಯದಲ್ಲಿ ಅರ್ಧಾಂಗಿ ಆಗಿದ್ದರು. ಮಂಗಳವಾರವಷ್ಟೇ ದಾವಣಗೆರೆ ರೈಲು ನಿಲ್ದಾಣದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಅವರ ಪತ್ನಿ ಗಾಯತ್ರಿ ಅವರೂ ನನಗೆ ಟಿಕೆಟ್‌ ಕೊಟ್ಟರೆ ಸ್ಪರ್ಧಿಸುವೆ’ ಎಂದು ಸುದ್ದಿಗಾರರಿಗೆ ತಿಳಿಸುವ ಮೂಲಕ ಟಿಕೆಟ್‌ ದೊರೆಯುವ ಬಗ್ಗೆ ಸುಳಿವು ನೀಡಿದ್ದರು.

ನಿರೀಕ್ಷೆಯೇ ಇರಲಿಲ್ಲ

ಗಾಯತ್ರಿ ಅವರಿಗೇ ಟಿಕೆಟ್‌ ಸಿಗಬಹುದು ಎಂಬ ನಿರೀಕ್ಷೆ ಪಕ್ಷದ ಕಾರ್ಯಕರ್ತರಲ್ಲಿ, ಕುಟುಂಬ ಸದಸ್ಯರಲ್ಲಿ ಇರಲಿಲ್ಲ. ಸಿದ್ದೇಶ್ವರ ಬದಲಿಗೆ, ಅವರ ಪುತ್ರ ಅನಿತ್‌ ಕುಮಾರ್ ಅಥವಾ ಸೋದರ ಜಿ.ಎಂ. ಲಿಂಗರಾಜು ಅವರತ್ತ ಪಕ್ಷ ಒಲವು ತೋರಬಹುದು ಎಂದು ಹೇಳಲಾಗಿತ್ತು. 

ಈ ಹಿಂದೆ ಪೀಕಿಬಾಯಿ‌ ಪಕ್ಷೇತರ ಕಣಕ್ಕೆ 

ಈ ಹಿಂದೆ 1991 ಮತ್ತು 1996ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಭರಮಸಾಗರದ ಪೀಕಿ ಬಾಯಿ  ಕ್ಷೇತ್ರದಿಂದ ಕಣಕ್ಕಿಳಿದಿದ್ದ ಮಹಿಳೆಯಾಗಿದ್ದರು. ಅಲ್ಲದೆ ಎರಡೂ ಬಾರಿ ಅವರು ಪರಾಜಯ ಗೊಂಡಿದ್ದರು. ಅವರನ್ನು ಹೊರತುಪಡಿಸಿ ಇದುವರೆಗೆ ಬೇರಾವ ಮಹಿಳೆಯರೂ ಸ್ಪರ್ಧಿಸಿರಲಿಲ್ಲ. ಒಟ್ಟಾರೆ ಇತ್ತ ಬಿಜೆಪಿ ಈಗಾಗಲೇ ಗಾಯಿತ್ರಿ ಸಿದ್ದೇಶ್ವರನ್ನು ಕಣಕ್ಕೆ ಇಳಿಸಿದೆ. ಅತ್ತ ಕಾಂಗ್ರೆಸ್‌ ಪಕ್ಷವು ಡಾ.ಪ್ರಭಾ ಅವರತ್ತ ಒಲವು ತೋರಿದ್ದೇ ಆದಲ್ಲಿ ಮಹಿಳೆಯರ ನಡುವೆಯೇ ನೇರ ಸ್ಪರ್ಧೆ ಏರ್ಪಡಲಿದ್ದು, ಜಯದ ಲಕ್ಷ್ಮೀ ಯಾರಿಗೆ ಒಲಿಯುತ್ತಾಳೆ ಕಾದು ನೋಡಬೇಕು.

……

Share.
Leave A Reply

Exit mobile version