ದಾವಣಗೆರೆ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಪೊಲೀಸರಿಗೆ ಇಲ್ಲಿ ರಕ್ಷಣೆ ಇಲ್ಲ.ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತರನ್ನು ಮುಸ್ಲಿಂ ಜಿಹಾದಿ ಗಳು ಕೊಲೆಮಾಡಿದ್ದು ಖಂಡಿಸುತ್ತೇನೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳಿದರು.
ದಾವಣಗೆರೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಡಿದೆ. ಪೊಲೀಸರಿಗೆ ಇಲ್ಲಿ ರಕ್ಷಣೆ ಇಲ್ಲದಂತಾಗಿದೆ. ಇದೇ ಮಂಗಳೂರಿನಲ್ಲಿ ಕಳೆದ ಕೆಲ ದಿನಗಳ ಹಿಂದೆ ಅಶ್ರಪ್ ಎನ್ನುವನು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದಾರೆ. ಆಗ ಕ್ರಿಕೆಟ್ ಆಟವಾಡುವ ಯುವಕರು ಕೋಪದಿಂದ ಹಲ್ಲೆ ನಡೆಸಿದ್ದು ಆತ ಸಾವನ್ನಪ್ಪಿದ್ದಾನೆ
ಭಾರತ ಮಾತೆಯ ಮಕ್ಕಳಿಗೆ ನೋವಾಗಿ ಈ ರೀತಿ ಮಾಡಿದ್ದಾರೆ, ಆ ಪ್ರಕರಣ ವನ್ನು ತನಿಖೆ ಮಾಡಲಿ. 20 ಜನ ಯುವಕರನ್ನು ಬಂಧನ ಮಾಡಿ ಮೂರು ಜನ ಪೊಲೀಸರನ್ನು ಅಮಾನತು ಮಾಡಿದ್ದೀರಿ.ಆದರೆ ಈಗ ಹಿಂದೂ ಕಾರ್ಯಕರ್ತನನ್ನು ಕೊಲೆ ಮಾಡಿ ಇಷ್ಟೋತ್ತಾದರೂ ಬಂಧನಮಾಡಿಲ್ಲ. ಸಾರ್ವಜನಿಕವಾಗಿ ಕೊಲೆ ಮಾಡಿದರೂ ಯಾವುದೇ ಕ್ರಮ ಇಲ್ಲ
ಹಿಂದಿನ ಸಿದ್ದರಾಮಯ್ಯ ಅಧಿಕಾರ ಅವಧಿಯಲ್ಲಿ 56 ಹಿಂದೂ ಕಾರ್ಯಕರ್ತರು ಹತ್ಯೆಯಾಗಿತ್ತು. ಪಾಕಿಸ್ತಾನ ಪೋಷಿತ ಸರ್ಕಾರ ನಮ್ಮ ರಾಜ್ಯದಲ್ಲಿ ಅಧಿಕಾರದಲ್ಲಿ ಇರೋದು. ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ
ಪಾಕಿಸ್ತಾನ ಜಿಂದಾಬಾದ್ ಎಂದರೆ ಸುಮ್ನೆ ನೋಡ್ಕೊಂಡು ಕೂರಬೇಕಾ ನನ್ ಮಕ್ಕಳ. ಹಿಂದೂ ಕಾರ್ಯಕರ್ತನನ್ನು ಕೊಲೆ ಮಾಡಿದರೂ ನಾವು ಸುಮ್ಮನಿರಬೇಕಾ. ನಾವು ಹಿಂದೂಗಳು ಯಾರು ಕೈಗೆ ಬಳೆ ಹಾಕಿಕೊಂಡು ಕೈ ಕಟ್ಟಿ ಕೂತಿಲ್ಲ. ನಾವು ಇನ್ನು ಮುಂದೆ ನೋಡುತ್ತೇವೆ ನನ್ನ ಮಕ್ಕಳ ಎಂದು ರೇಣುಕಾಚಾರ್ಯ ಗರಂ ಆದರು.
ನಮ್ಮ ದೇವಸ್ಥಾನ ಗಳಿಗೆ ಹೋದರೆ ಪೂಜೆ ಭಜನೆ ಇರುತ್ತದೆ. ಆದರೆ ಮದರಸಗಳಲ್ಲಿ ಮಕ್ಕಳಿಗೆ ಕಲಿಸುವುದು ಏನು ಹೇಳಿ.ಹಿಂದೂಗಳ ಮೇಲೆ ಕಲ್ಲು ಹೊಡೆಯೋದು ಕೊಲೆ ಮಾಡೋದು ಕಲಿಸಿಕೊಡುತ್ತಾರೆ
ಹಿಂದೂ ಕಾರ್ಯಕರ್ತ ರನ್ನು ಕೊಲೆ ಮಾಡೋ ನನ್ನ ಮಕ್ಕಳಿಗೆ ಗುಂಡಿಟ್ಟು ಕೊಲೆ ಮಾಡಬೇಕು. ಪಾಕಿಸ್ತಾನದ ಪರವಾಗಿರುವ ಈ ಸರ್ಕಾರದ ಕೆಲ ಸಚಿವರು ಕೂಡ ಪಾಕಿಸ್ತಾನ ಕ್ಕೆ ಹೋಗಲಿ ಎಂದು ರೇಣುಕಾಚಾರ್ಯ ಹೇಳಿದರು.
ಶಿವಾನಂದ ಪಾಟೀಲ್ ರಾಜೀನಾಮೆ ನೀಡಿದ ವಿಚಾರ ಸಂಬಂಧಪಟ್ಟಂತೆ ಯತ್ನಾಳ್ ಗೆ ಪರೋಕ್ಷವಾಗಿ ಟಾಂಗ್ ನೀಡಿದರು. ಎಲ್ಲಾರೂ ಅವರ ಅಪ್ಪನಿಗೆ ಹುಟ್ಟಿರೋದು, ಪದಬಳಕೆ ಮಾಡುವಾಗ ನಾಲಿಗೆ ಹಿಡಿತ ಇರಬೇಕು.
ಅವರವರ ಕ್ಷೇತ್ರಗಳಲ್ಲಿ ರಾಜೀನಾಮೆ ನೀಡಿ ಚುನಾವಣೆಗೆ ನಿಲ್ಲೋದು ಅವರ ತಾಕತ್ತು. ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ರೇಣುಕಾಚಾರ್ಯ ಹೇಳಿದರು.