


ಶಿವಮೊಗ್ಗ : ಭಾರತದಲ್ಲಿ ಸ್ವತಂತ್ರ ಬಂದ ನಂತರ ಜನಗಣತಿಯಲ್ಲಿ ಜಾತಿಗಣತಿಯನ್ನು ಸೇರ್ಪಡೆ ಮಾಡಿರಲಿಲ್ಲ. ಇದೇ ಮೊಟ್ಟ ಮೊದಲ ಬಾರಿಗೆ ಜನಗಣತಿ ಜೊತೆ ಜಾತಿ ಗಣತಿಗೆ ಕೇಂದ್ರ ಸರ್ಕಾರ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯುವ ಕಾಂಗ್ರೇಸ್ ಆಡಳಿತ ರಾಜ್ಯಗಳ ಯತ್ನಕ್ಕೆ ತಿಲಾ0ಜಲಿ ಹಾಡಿದ ಕೇಂದ್ರವು 2021 ರಲ್ಲಿ ನಡೆಸಬೇಕಿದ್ದ ಜನಗಣತಿ ಕರೋನ ಕಾರಣದಿಂದ ಮುಂದೂಡಲ್ಪಟ್ಟ ಜನಗಣತಿಯನ್ನು ನಿನ್ನೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಜನಗಣತಿಯ ಜೊತೆ ಜಾತಿಗಣತಿಯನ್ನು ನಡೆಸುವ ನಿರ್ಧಾರ ಮಾಡಲಾಗಿದೆ.

ಕೇಂದ್ರ ಸರ್ಕಾರ ತೆಗೆದುಕೊಂಡ ಈ ನಿರ್ಧಾರದಿಂದ ರಾಷ್ಟ್ರದ ಜನತೆಯ ಸಮಾನತೆ ಹಾಗೂ ಸಬಲೀಕರಣ ದೃಷ್ಟಿಯಿಂದ ತುಂಬಾ ಮಹತ್ವದ್ದಾಗಿದೆ. ಇದು ಮತ ಬ್ಯಾಂಕ್ ರಾಜಕಾರಣವಲ್ಲ. ಬದಲಾಗಿ ಬದ್ಧತೆ, ನ್ಯೆಜ್ಯ ಕಾಳಜಿಯನ್ನು ಬಿಂಬಿಸುತ್ತದೆ.

ಈ ಜನ – ಜಾತಿ ಗಣತಿಯಿಂದ ದೇಶದ ದುರ್ಬಲ ಜನರ ಆರ್ಥಿಕ, ಶೈಕ್ಷಣಿಕ, ಮೂಲಭೂತ ಸೌಕರ್ಯ ವಂಚಿತರ ಶ್ರೇಯೋಭಿವೃದ್ಧಿಗೆ ಪ್ರತಿಕೂಲ ಪರಿಣಾಮ ಬೀಳಲಿದೆ.
ಕೇಂದ್ರದ ಈ ನಿರ್ಧಾರಕ್ಕೆ ಶಿವಮೊಗ್ಗ ಜಿಲ್ಲಾ ಬಿಜೆಪಿಯ ಪರವಾಗಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದಿದ್ದಾರೆ.