ಭದ್ರಾವತಿ: ನ್ಯೂಟೌನ್ ಶ್ರೀಕರುಮಾರಿಯಮ್ಮ ನವರ ದೇವಸ್ಥಾನದಲ್ಲಿ 44ನೇ ವರ್ಷದ ಕರಗ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

ಮೇ:24 ರ ಶುಕ್ರವಾರ ದಿಂದ 26 ಭಾನುವಾರ ದವರೆಗೆ ಪ್ರತಿದಿನ ಬೆಳಿಗ್ಗೆ ಪಂಚಾಮೃತ, ಸಹಸ್ರನಾಮ, ಮಂಗಳಾರತಿ, ತೀರ್ಥ ಪ್ರಸಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಮೇ :24 ಬೆಳಿಗ್ಗೆ 9 ಕ್ಕೆ ಪುಣ್ಯಾಹ್ನ ಹಾಗೂ ಧ್ವಜಾರೋಹಣ, ಸಂಜೆ 7 ಕ್ಕೆ ಕಂಕಣ ಬಂಧನ, ಮೇ25, ಅಮ್ಮನವರಿಗೆ
ಅಭಿಷೇಕ ಮಧ್ಯಾಹ್ನ 12ಕ್ಕೆ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಮೇ 26 ರ ಬೆಳಿಗ್ಗೆ 9 ಕ್ಕೆ ಅಮ್ಮನವರಿಗೆ ಎಳನೀರು ಮತ್ತು ಪಂಚಾಮೃತ ಅಭಿಷೇಕ ನಡೆಯಲಿವೆ. ಭಕ್ತಾದಿಗಳು ಭಾಗವಹಿಸಿ ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ಸಮಿತಿ ಮನವಿ ಮಾಡಿದೆ.

Share.
Leave A Reply

Exit mobile version