ನಂದೀಶ್‌ ಭದ್ರಾವತಿ, ದಾವಣಗೆರೆ ವಿಜಯ

ಸದಾ ಪುಸ್ತಕ, ಬರಹ ಹೀಗೆ ಹತ್ತಾರು ಚಟುವಟಿಕೆಗಳಿಂದ ಸದಾ ಬ್ಯೂಸಿಯಾಗಿದ್ದ ಕಂದಮ್ಮ, ಪರೀಕ್ಷೆ ಬರೆದು ಹಕ್ಕಿಯಂತೆ ಚಿಲಿಪಿಲಿ ಹಾರಾಡಲು ಶುರು ಮಾಡಿದ್ದಾರೆ…ಇನ್ನು ಮಕ್ಕಳಿಗೆ ರಜೆಯ ಮಜದ ಖುಷಿಯಾದರೆ, ಪೋಷಕರಿಗೆ ಹೇಗಪ್ಪಾ ಇವರನ್ನು ಕಂಟ್ರೋಲ್ ಮಾಡೋದು ಅನ್ನೋದೆ ಚಿಂತೆ.

ಈ ಚಿಂತೆಯನ್ನು ಭದ್ರಾವತಿಯ ಜನ್ನಾಪುರದ ಪ್ರತಿಷ್ಠಿತ ಜ್ಞಾನ ದೀಪ ವಿದ್ಯಾ ಸಂಸ್ಥೆ ಹೋಗಲಾಡಿಸಿದ್ದು, ಪುಟ್ಟ ಮಕ್ಕಳಿಗೆ ರಜೆಯ ಮಜಾದ ಅನುಭವ ನೀಡುತ್ತಿದ್ದಾರೆ.

ಸದ್ಯ  ಸಮ್ಮರ್ ಹಾಲಿಡೇಸ್  ಪ್ರಾರಂಭವಾಗಿದ್ದು,  ಬೇಸಿಗೆಯ ರಜಾ ಉತ್ತಮವಾಗಿ ಕಳೆಯಲು ಹಾಗೂ ಪೋಷಕರ  ಚಿಂತೆಯನ್ನು ಜ್ಞಾನದೀಪ ಶಾಲೆ ಶಿಕ್ಷಕಿಯರು ದೂರಮಾಡಿದ್ದಾರೆ. ಇಲ್ಲಿ ಅನುಭವಿ ತರಬೇತುದಾರರಿಂದ ಮಕ್ಕಳಿಗೆ ಶಿಬಿರ ನಡೆಯುತ್ತಿದ್ದು, ಮಕ್ಕಳು ಸಖತ್ ಚಿಲ್ ಆಗಿದ್ದಾರೆ. 

ಈ ಶಿಬಿರಗಳಲ್ಲಿ, ಮಕ್ಕಳ ದೈನಂದಿನ ಕಲಿಕೆಯ ಬದಲಾಗಿ, ಬೇರೆಯದೇ ರೀತಿಯ ಶಿಕ್ಷಣ ನೀಡಲಾಗುತ್ತಿದೆ.ವಿವಿಧ ಆಟಗಳು, ಬುದ್ಧಿಯನ್ನು ವೃದ್ಧಿಸುವ ಮೈಂಡ್ ಗೇಮ್ ಗಳು, ಕಲೆ ಸಂಸ್ಕೃತಿಯ ಪರಿಚಯ- ಇತ್ಯಾದಿಗಳನ್ನು ಕಲಿಸಿಕೊಡಲಾಗುತ್ತಿದ್ದು, ಬೇಸಿಗೆ ಅನುಭವ ಕಂಡ ಮಕ್ಕಳು ಶಾಲೆಯಿಂದ ಹೊರಬರುವುದಕ್ಕೆ ಹಿಂಜರಿಯುತ್ತಿವೆ. ಅಲ್ಲದೇ ಈ ಶಿಬಿರಗಳುಜೀವಮಾನದ ನೆನಪುಗಳು ಮತ್ತು ಕೌಶಲ್ಯಗಳನ್ನು ಒದಗಿಸುತ್ತಿದೆ.  

ಇಂತಹ ಶಿಬಿರಗಳು ಸಾಮಾನ್ಯವಾಗಿ ವಿವಿಧ ಹೊರಾಂಗಣ ಚಟುವಟಿಕೆಗಳು, ಆಟಗಳು, ಕ್ರೀಡೆಗಳು, ಸಂಗೀತ, ಕಲೆ ಮತ್ತು ಕರಕುಶಲ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ, ಇದು ಹೊಸ ಕೌಶಲ್ಯಗಳನ್ನು ನೀಡಲು ಮತ್ತು ಮಕ್ಕಳಲ್ಲಿ ವೈಯಕ್ತಿಕ ಬೆಳವಣಿಗೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಹೊಸ ಸ್ನೇಹಿತರ ಸಂಪಾದನೆ

ತೊದಲ ನುಡಿಯಲ್ಲಿ ಮಾತನಾಡುವ  ಮಕ್ಕಳಿಗೆ ಹೊಸ ಸ್ನೇಹಿತರ ಪರಿಚಯವಾಗಿ ಸಂಬಂಧದ ಬೆಸುಗೆ ಅಂಟುತ್ತಿದೆ. ಈ ಬೇಸಿಗೆ ಶಿಬಿರದಲ್ಲಿ ಬೇರೆ ಬೇರೆ ಹಿನ್ನೆಲೆಯಿಂದ ಬಂದ ಮಕ್ಕಳಿದ್ದು, ಅವರ ಆಚಾರ-ವಿಚಾರ, ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತಿದೆ. ಎಂದೂ ಭೇಟಿಯಾಗದ ಮಕ್ಕಳ ಜೊತೆ ಸ್ನೇಹ ಬೆಳೆಸಲು ಕೂಡ ಬೇಸಿಗೆ ಶಿಬಿರ ಸಹಕಾರಿಯಾಗಿದೆ.

ಪ್ರಕೃತಿಯೊಂದಿಗೆ ಬೆರೆಯುವ ಗುಣ

ಈ ಜ್ಞಾನದೀಪ ಶಾಲೆಯಲ್ಲಿ ಮಕ್ಕಳು ಪ್ರಕೃತಿಯೊಂದಿಗೆ ಬೆರೆಯುವ ಗುಣ ಕಲಿಯುತ್ತಿದ್ದಾರೆ.  ಸದಾ ಮೊಬೈಲ್ ಹಿಡಿಯುವ ಮಕ್ಕಳು ಸಾಂಪ್ರದಾಯಿಕ ಆಟಗಳನ್ನು ಕಲಿಯುತ್ತಿದ್ದಾರೆ.  ಅಲ್ಲದೇ ಸಣ್ಣದಾದ ಟ್ರೀಪ್ ಹೋಗುತ್ತಿದ್ದು, ಅಲ್ಲಿ ಮಕ್ಕಳು ಪ್ರಕೃತಿಯ ಅನುಭವವನ್ನು ಪಡೆಯುತ್ತಿದ್ದಾರೆ. ಇದರಿಂದ ಎಲ್ಲಾ ಇಂದ್ರಿಯಗಳನ್ನು ಪ್ರಚೋದಿಸುವುದು ಸಾಧ್ಯವಾಗುತ್ತಿದೆ. ಅಲ್ಲದೇ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯಕ್ಕೆ ಅಗತ್ಯವಾಗಿದೆ

ಹೇಗಿತ್ತು ಮೊದಲ ದಿನದ ಅನುಭವ

ರಜೆಯ ಮಜಾ ಕಳೆಯಲು ಹೊರಟ ಮಕ್ಕಳಿಗೆ ಶಿಕ್ಷಕಿಯರು ಗೊಂಬೆಯ ಮುಖವಾಡ ಧರಿಸಿ ವೆಲ್ ಕಮ್ ಮಾಡಿಕೊಂಡರು. ನಂತರ ದೇವರನ್ನು ಸ್ನರಿಸಿ ಪರಸ್ಪರ ಪರಿಚಯ ಮಾಡಿಕೊಂಡರು. ಒಟ್ಟಾಗಿ ಕೂತು ತೊದಲ ನುಡಿಯಲ್ಲಿ ಪರಿಚಯ ಮಾಡಿಕೊಂಡು ತಂದಿದ್ದ ಆಹಾರ ಶೇರ್ ಮಾಡಿದರು. ವಯಸ್ಸಿನಲ್ಲಿ ದೊಡ್ಡವರಾದರೂ, ಸಂಸಾರದ ಜಂಜಾಟ ಬಿಟ್ಟ ಶಿಕ್ಷಕಿಯರು ಕೆಲ ಗಂಟೆಗಳ ಕಾಲ ಮಕ್ಕಳಾದರು. ಮಕ್ಕಳ ತುಂಟಾಟ ನೋಡಿದ ಶಿಕ್ಷಕಿಯರು ಒಂದಿಷ್ಡು ಸ್ಟೇಪ್ ಹಾಕಿದರು. ಈ ಮೂಲಕ ಹಳೆ ನೆನಪುಗಳನ್ನು ಶಿಕ್ಷಕಿಯರು ಮೆಲಕು ಹಾಕಿದರು.

ಸೆಲ್ಫಿ ವೀತ್ ಟೀಚರ್

ಸಮ್ಮರ್ ಕ್ಯಾಂಪ್ ಗೆ ಬಂದ ಮಕ್ಕಳು ತಮ್ಮ‌ಮೊದಲ ದಿನದ ಅನುಭವ ಹೇಗಿತ್ತು ಎಂದು ತಿಳಿದುಕೊಳ್ಳಲು ಟೀಚರ್ ಜತೆ ಸೆಲ್ಪಿ ತೆಗೆದುಕೊಂಡರು. ಮಕ್ಕಳ ತುಂಟಾಟಗಳು ವಿಡಿಯೋದಲ್ಲಿ ಸೆರೆಯಾಗಿ ಪೋಷಕರ ಮೊಬೈಲ್ ಗೆ ಪಯಣ ಬೆಳೆಸಿತು. ಮಕ್ಕಳ ಆಟ ನೋಡಿದ ಪೋಷಕರು, ಛಾಯಾಚಿತ್ರಗಳನ್ನು ವಾಟ್ಸ್ ಅಫ್, ಫೇಸ್ ಬುಕ್, ಇನ್ಸ್ಟ್ರಾಗ್ರಾಮ್ ನಲ್ಲಿ ಹಾಕಿ ಲೈಕ್, ಕಾಮೆಂಟ್ ಗಳಿಗಾಗಿ‌ ಕಾದರು. ಸುಸ್ತಾದ ಮಕ್ಕಳು ಮನೆಗೆ ಬಂದು ಹಾಯಾಗಿ ನಿದ್ದೆಗೆ ಜಾರಿದವು. ಇದು ಮೊದಲ ದಿನದ ಸಮ್ಮರ್ ಕ್ಯಾಂಪ್ ಝಲಕ್ ಅಷ್ಟೇಯಾಗಿದ್ದು, ಅಭಿ ಫಿಚ್ಚರ್ ಬಾಕಿ ಹೈ…ಡೋಂಟ್ ಮಿಸ್..

 

Share.
Leave A Reply

Exit mobile version